ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಭಾರತ ಗೆಲ್ಲಲು ಇದ್ದ ದಾರಿ ಅದೊಂದೇ': 2003ರ ವಿಶ್ವಕಪ್ ಕ್ಷಣ ನೆನೆದ ಶ್ರೀನಾಥ್

Javagal Srinath recalls India’s 2003 World Cup final loss against Australia

ಬೆಂಗಳೂರು: ಟೀಮ್ ಇಂಡಿಯಾದ ಮಾಜಿ ವೇಗಿ, ಮೈಸೂರು ಎಕ್ಸ್‌ಪ್ರೆಸ್ ಖ್ಯಾತಿಯ ಕನ್ನಡಿಗ ಜಾವಗಲ್ ಶ್ರೀನಾಥ್ 2003ರ ವಿಶ್ವಕಪ್‌ ಫೈನಲ್ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ. ಆವತ್ತು ಭಾರತಕ್ಕೆ ಗೆಲ್ಲಲು ಕಡೇಯ ದಾರಿಯೊಂದಿತ್ತು. ಆ ಫೈನಲ್ ಪಂದ್ಯ ಗೆದ್ದಿದ್ದರೆ ನನ್ನ ವೃತ್ತಿ ಬದುಕಿನ ಅಪರೂಪದ ಕ್ಷಣವಾಗಿ ನೆನಪಾಗಿ ಉಳಿಯುತ್ತಿತ್ತು ಎಂದು ಶ್ರೀನಾಥ್ ಹೇಳಿದ್ದಾರೆ. ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದಿದ್ದ ವಿಶ್ವಕಪ್ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಭಾರತ ಮತ್ತು ಅಸ್ಟ್ರೇಲಿಯಾಟ ತಂಡಗಳು ಆಡಿದ್ದವು.

 'ಭಾರತ ವಿಶ್ವ ಚಾಂಪಿಯನ್ ಆಗೋಲ್ಲ': ಗಂಭೀರ ಕಾರಣ ಹೇಳಿದ ಗಂಭೀರ್ 'ಭಾರತ ವಿಶ್ವ ಚಾಂಪಿಯನ್ ಆಗೋಲ್ಲ': ಗಂಭೀರ ಕಾರಣ ಹೇಳಿದ ಗಂಭೀರ್

ಸ್ಪೋರ್ಟ್ಸ್ ಕೀಡಾ ಚಾಟ್‌ನಲ್ಲಿ ಮಾತನಾಡಿದ ಜಾವಗಲ್ ಶ್ರೀನಾಥ್ 2003ರ ಪಂದ್ಯದಲ್ಲಿನ ಗೆಲುವಿನ ಸಾಧ್ಯತೆಯ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ವಿಶ್ವ ಶ್ರೇಷ್ಠ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ವಿರುದ್ಧ ಆವತ್ತು ಭಾರತ ಗೆಲ್ಲೋದು ಸುಲಭವೂ ಇರಲಿಲ್ಲ ಎಂದೂ ಶ್ರೀನಾಥ್ ಹೇಳಿದ್ದಾರೆ.

ಇಂಗ್ಲೆಂಡ್ ಸರಣಿ ಬಿಟ್ಟು ಕೌಂಟಿಯಲ್ಲಿ ಪಾಲ್ಗೊಂಡಿದ್ದ ಕಾರಣ ಹೇಳಿದ ಕನ್ನಡಿಗ ಶ್ರೀನಾಥ್ಇಂಗ್ಲೆಂಡ್ ಸರಣಿ ಬಿಟ್ಟು ಕೌಂಟಿಯಲ್ಲಿ ಪಾಲ್ಗೊಂಡಿದ್ದ ಕಾರಣ ಹೇಳಿದ ಕನ್ನಡಿಗ ಶ್ರೀನಾಥ್

13 ವರ್ಷಗಳ ಕ್ರಿಕೆಟ್ ವೃತ್ತಿ ಬದುಕು ಕಂಡಿರುವ ಶ್ರೀನಾಥ್ ಹೇಳಿರುವ ಮಾತುಗಳು, ಆವತ್ತಿನ ವಿಶ್ವಕಪ್ ಪಂದ್ಯದ ಚಿತ್ರಣ ಇಲ್ಲಿದೆ ನೋಡಿ.

ನಾವು ಪಂದ್ಯ ಗೆಲ್ಲುತ್ತಿದ್ದೆವು, ಆದರೆ..

ನಾವು ಪಂದ್ಯ ಗೆಲ್ಲುತ್ತಿದ್ದೆವು, ಆದರೆ..

'ನಾವು 2003ರ ವಿಶ್ವಕಪ್ ಪಂದ್ಯವನ್ನು ಗೆಲ್ಲುತ್ತಿದ್ದೆವು. ಆದರೆ ನಾವಂದು ವಿಶ್ವದ ಅತ್ಯುತ್ತಮ ತಂಡವಾದ ಆಸ್ಟ್ರೇಲಿಯಾ ವಿರುದ್ಧ ಮೈದಾನಕ್ಕಿಳಿದಿದ್ದೆವು. ಆವತ್ತು ಆಸೀಸ್ ತಂಡ ನಾವು ಹತ್ತಿರಕ್ಕೂ ಹೋಗಲಾರದಂತ ಪ್ರದರ್ಶನ ನೀಡಿತ್ತು. ಆ ಪಂದ್ಯದಲ್ಲಿ ನಾವು ಸೋತೆವು. ನಾನು ಆ ಪಂದ್ಯದಲ್ಲಿ ಉತ್ತಮ ಆಟವೇನೂ ಆಡಲಿಲ್ಲ. ಆ ಪಂದ್ಯ ಗೆದ್ದಿದ್ದರೆ ನನ್ನ ವೃತ್ತಿ ಬದುಕಿಗೆ ವಿಶೇಷ ಗರಿ ಸೇರಿಕೊಳ್ಳುತ್ತಿತ್ತು. ಆದರೆ ಬದುಕಿನಲ್ಲಿ ನಡೆಯೋ ಎಲ್ಲವನ್ನು ನಾವು ನಿರೀಕ್ಷಿಸಿರಲ್ಲ ನೋಡಿ,' ಎಂದು ಶ್ರೀನಾಥ್ ಹೇಳಿದ್ದಾರೆ.

ರಿಕಿ ಪಾಂಟಿಂಗ್ ಅಬ್ಬರದಾಟ

ರಿಕಿ ಪಾಂಟಿಂಗ್ ಅಬ್ಬರದಾಟ

ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಸ್ಟೇಡಿಯಂನಲ್ಲಿ 2003ರ ಮಾರ್ಚ್ 23ರಂದು ಈ ವಿಶ್ವಕಪ್ ಫೈನಲ್ ಪಂದ್ಯ ನಡೆದಿತ್ತು. ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಿಕಿ ಪಾಂಟಿಂಗ್ ನಾಯಕತ್ವದ ಆಸ್ಟ್ರೇಲಿಯಾ ತಂಡ, ಆ್ಯಡಮ್ ಗಿಲ್‌ಕ್ರಿಸ್ಟ್‌ 57, ಮ್ಯಾಥ್ಯೂ ಹೇಡನ್ 37, ರಿಕಿ ಪಾಂಟಿಂಗ್ ಅಜೇಯ 140 (121 ಎಸೆತ), ಡೇಮಿಯನ್ ಮಾರ್ಟಿನ್ 88 ರನ್‌ನೊಂದಿಗೆ 50 ಓವರ್‌ಗೆ 2 ವಿಕೆಟ್ ನಷ್ಟದಲ್ಲಿ 359 ರನ್ ಗಳಿಸಿತ್ತು.

ಉಳಿದಿದ್ದ ದಾರಿ ಅದೊಂದೇ

ಉಳಿದಿದ್ದ ದಾರಿ ಅದೊಂದೇ

ಮಾತು ಮುಂದುವರೆಸಿದ ಶ್ರೀನಾಥ್, 'ಒಂದುವೇಳೆ ಮೊದಲು ಬ್ಯಾಟಿಂಗ್ ಮಾಡಿದ್ದರೆ ಗೆಲ್ಲಲಾಗುತ್ತಿತ್ತಾ ಎಂದು ನಾವು ಈ ಮೊದಲು ಮಾತನಾಡಿದ್ದೇವೆ. ಆದರೆ ಆಸೀಸ್ ಅಗಾಧ ಅನುಭವಿ ತಂಡವಾಗಿತ್ತು. ಅವರದ್ದು ಅತ್ಯುತ್ತಮ ತಂಡವಾಗಿತ್ತು ಅಂತ ನಾನು ಭಾವಿಸುತ್ತೇನೆ. ಇದೇ ತಂಡ ಹಿಂದೆಯೂ ವಿಶ್ವಕಪ್ ಗೆದ್ದಿತ್ತು. ನನ್ನ ಪ್ರಕಾರ ಆವತ್ತು ನಾವು ನಮ್ಮ ಸಾಮರ್ಥ್ಯಕ್ಕೆ ಎರಡುಪಟ್ಟು ಹೆಚ್ಚಿಗೆ ಆಡುತ್ತಿದ್ದರೆ ಬಹುಶಃ ನಾವು ಪಂದ್ಯ ಗೆಲ್ಲುತ್ತಿದ್ದೆವೋ ಏನೊ. ಅದೇ ಉಳಿದಿದ್ದ ಒಳ್ಳೆಯ ದಾರಿಯಾಗಿತ್ತು,' ಎಂದಿದ್ದಾರೆ.

ಶ್ರೀನಾಥ್, ನೆಹ್ರಾ ನೀರಸ ಬೌಲಿಂಗ್

ಶ್ರೀನಾಥ್, ನೆಹ್ರಾ ನೀರಸ ಬೌಲಿಂಗ್

ಅಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ್ದ 360 ರನ್ ಗುರಿ ಬೆನ್ನಟ್ಟಿದ ಭಾರತ, ವೀರೇಂದ್ರ ಸೆಹ್ವಾಗ್ 82, ಸೌರವ್ ಗಂಗೂಲಿ 24, ರಾಹುಲ್ ದ್ರಾವಿಡ್ 47, ಯುವರಾಜ್ ಸಿಂಗ್ 24 ಗಮನಾರ್ಹ ರನ್‌ನೊಂದಿಗೆ 39.2 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 234 ರನ್ ಬಾರಿಸಿ 125 ರನ್‌ನಿಂದ ಸೋತಿತ್ತು. ಗ್ಲೆನ್ ಮೆಗ್ರಾತ್ 3, ಬ್ರೆಟ್ ಲೀ 2, ಆ್ಯಂಡ್ರ್ಯೂ ಸೈಮಂಡ್ಸ್ 2, ಬ್ರಾಡ್‌ ಹಾಗ್ ಮತ್ತು ಆ್ಯಂಡಿ ಬಿಚೆಲ್ ತಲಾ 1 ವಿಕೆಟ್ ಮುರಿದು ಪಾರಮ್ಯ ಮೆರೆದಿದ್ದರು. ಆವತ್ತು ಆಸ್ಟ್ರೇಲಿಯಾದ 2 ವಿಕೆಟ್ ಉರುಳಿಸಿದ್ದು ಸ್ಪಿನ್ನರ್ ಹರ್ಭಜನ್ ಸಿಂಗ್ ಒಬ್ಬರೆ. ಇನ್ನು ಝಹೀರ್ ಖಾನ್ 67, ಜಾವಗಲ್ ಶ್ರೀನಾಥ್ 87, ಆಶಿಷ್ ನೆಹ್ರಾ 57 ರನ್ ನೀಡಿದ್ದರು, ಆದರೆ ಒಂದೂ ವಿಕೆಟ್ ಪಡೆದಿರಲಿಲ್ಲ.

Story first published: Monday, June 15, 2020, 14:02 [IST]
Other articles published on Jun 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X