ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಾ. ಸುಂದರ್‌ಗೆ ಕೊರೊನಾ, ಜಯಂತ್‌ ಯಾದವ್‌ಗೆ ದಕ್ಷಿಣ ಆಫ್ರಿಕಾದಲ್ಲೇ ಇರಲು ಸೂಚನೆ!

Jayant yadav

ಟೀಮ್ ಇಂಡಿಯಾ ಟೆಸ್ಟ್ ಸ್ಕ್ವಾಡ್‌ನಲ್ಲಿರುವ ಆಲ್‌ರೌಂಡರ್ ಜಯಂತ್ ಯಾದವ್‌ಗೆ, ಟೆಸ್ಟ್ ಸರಣಿ ಬಳಿಕ ದಕ್ಷಿಣ ಆಫ್ರಿಕಾದಲ್ಲೇ ಉಳಿದುಕೊಳ್ಳುವಂತೆ ಬಿಸಿಸಿಐ ತಿಳಿಸಿದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ತಮಿಳುನಾಡು ಮೂಲದ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಹರಿಣಗಳ ನಾಡಿಗೆ ಎಂಟ್ರಿ ಕೊಡುವ ಮೊದಲೇ, ಕೋವಿಡ್-19 ಪಾಸಿಟಿವ್ ಆಗಿರುವ ಕಾರಣ ಜಯಂತ್‌ ಯಾದವ್‌ ಏಕದಿನ ತಂಡದ ಜೊತೆ ಸೇರಿಕೊಳ್ಳಲು ಸೂಚನೆ ನೀಡಲಾಗಿದೆ.

ಅದೃಷ್ಟವಶಾತ್, ಸುಂದರ್ ಅವರೊಂದಿಗೆ ಪ್ರಯಾಣಿಸಿದ ಇತರ ಭಾರತೀಯ ಆಟಗಾರರು ಕೋವಿಡ್-19 ನೆಗೆಟಿವ್ ಪರೀಕ್ಷೆಯನ್ನು ನಡೆಸಿದ್ದು, ಜಯಂತ್‌ಗೆ ಕಂಬ್ಯಾಕ್ ಮಾಡಲು ಇದು ಉತ್ತಮ ಅವಕಾಶವಾಗಿದೆ. ಜಯಂತ್ ಯಾದವ್ 2016ರಲ್ಲಿ ಕೊನೆಯ ಬಾರಿಗೆ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾಗಿಯಾಗಿದ್ರು.

ಬಯೋ ಬಬಲ್‌ನಲ್ಲಿ ಆಟಗಾರರಾದ ಸೂರ್ಯಕುಮಾರ್ ಯಾದವ್, ರುತುರಾಜ್ ಗಾಯಕ್ವಾಡ್, ಶಿಖರ್ ಧವನ್, ಭುವನೇಶ್ವರ್ ಕುಮಾರ್, ವೆಂಕಟೇಶ್ ಅಯ್ಯರ್, ಇಶನ್ ಕಿಶನ್, ಯುಜುವೇಂದ್ರ ಚಹಾಲ್ ಮತ್ತು ಪ್ರಸಿದ್ಧ್ ಕೃಷ್ಣ ಅವರು ಬೆಂಗಳೂರಿನಿಂದ ಇಂದು ವಿಮಾನದಲ್ಲಿ ದಕ್ಷಿಣ ಆಫ್ರಿಕಾಗೆ ಪ್ರಯಾಣಿಸಿದ ಇತರ ಆಟಗಾರರಾಗಿದ್ದಾರೆ.

ಜನವರಿ 19 ಮೂರು ಪಂದ್ಯಗಳ ಏಕದಿನ ಸರಣಿ ಆರಂಭಗೊಳ್ಳಲಿದ್ದು, 23 ಜನವರಿಗೆ ಮುಕ್ತಾಯಗೊಳ್ಳಲಿದೆ. ಕಳೆದ ಬಾರಿ ದಕ್ಷಿಣ ಆಫ್ರಿಕಾದಲ್ಲಿ 2018ರಲ್ಲಿ ನಡೆದ ಏಕದಿನ ಸರಣಿಯಲ್ಲಿ ಭಾರತವು ಪ್ರಾಬಲ್ಯ ಮೆರೆದಿದ್ದು, ಸರಣಿಯನ್ನ ಗೆದ್ದಿತ್ತು.

ಕೇವಲ 1 ಏಕದಿನ ಪಂದ್ಯವನ್ನಾಡಿರುವ ಜಯಂತ್ ಯಾದವ್

ಕೇವಲ 1 ಏಕದಿನ ಪಂದ್ಯವನ್ನಾಡಿರುವ ಜಯಂತ್ ಯಾದವ್

ಏಕದಿನ ಕ್ರಿಕೆಟ್‌ನಲ್ಲಿ ಕೇವಲ 1 ಪಂದ್ಯವನ್ನಾಡಿರುವ ಜಯಂತ್ ಯಾದವ್ ದೇಶೀಯ ಕ್ರಿಕೆಟ್‌ನಲ್ಲಿ ಹೆಚ್ಚು ಅನುಭವ ಹೊಂದಿರುವ ಕ್ರಿಕೆಟಿಗ. 2016ರಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಿದ ಏಕೈಕ ಪಂದ್ಯದಲ್ಲಿ ಯಾದವ್ 8 ರನ್ ನೀಡಿ 1 ವಿಕೆಟ್ ಪಡೆದಿದ್ದರು. ಸದ್ಯ ವಾಷಿಂಗ್ಟನ್ ಸುಂದರ್ ಬದಲು ಅವರು ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಮತ್ತು ಸ್ಪಿನ್ನರ್‌ ಆಗಿ ತಂಡದ ಬೌಲಿಂಗ್‌ ಬಲ ಹೆಚ್ಚಿಸುವ ಸಾಮರ್ಥ್ಯ ಹೊಂದಿದ್ದಾರೆ.

"ಅವರು ಕೆಲವು ದಿನಗಳ ಹಿಂದೆ ಪಾಸಿಟಿವ್ ಪರೀಕ್ಷೆ ನಡೆಸಿದರು ಮತ್ತು ಅವರು ತಂಡದೊಂದಿಗೆ ಪ್ರಯಾಣಿಸುವುದಿಲ್ಲ ಎಂದು ನಿರ್ಧರಿಸಲಾಗಿದೆ." ಎಂದು ಮೂಲಗಳು ತಿಳಿಸಿವೆ.

ಆತನ ಬ್ಯಾಟಿಂಗ್ ಯಾವತ್ತಿಗೂ ನಮಗೆ ಕಳವಳವನ್ನುಂಟು ಮಾಡಿರಲಿಲ್ಲ: ಬ್ಯಾಟಿಂಗ್ ಕೋಚ್ ರಾಥೋರ್

ಈಗಾಗಲೇ ಗಾಯಾಳುಗಳಾಗಿರುವ ಜಡೇಜಾ, ಅಕ್ಷರ್ ಪಟೇಲ್

ಈಗಾಗಲೇ ಗಾಯಾಳುಗಳಾಗಿರುವ ಜಡೇಜಾ, ಅಕ್ಷರ್ ಪಟೇಲ್

ಹೌದು, ಈಗಾಗಲೇ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಗಾಯಗೊಂಡಿರುವುದರಿಂದ ಭಾರತಕ್ಕೆ ಸರಿಯಾದ ಸ್ಪಿನ್ ಆಲ್‌ರೌಂಡರ್‌ಗಳ ಅಗತ್ಯವಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಮುಂಬರುವ ಸರಣಿಗಾಗಿ ಆರ್. ಅಶ್ವಿನ್ ಅವರನ್ನು ಏಕದಿನ ತಂಡಕ್ಕೆ ಪಡೆಯಲಾಗಿದ್ದು, ಜಯಂತ್ ಯಾದವ್ ಕೂಡ ಐದು ವರ್ಷಗಳ ಬಳಿಕ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಟೀಂ ಇಂಡಿಯಾ ಲಿಮಿಟೆಡ್ ಓವರ್ ಕ್ಯಾಪ್ಟನ್ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕೆ.ಎಲ್ ರಾಹುಲ್ ನಾಯಕತ್ವ ವಹಿಸಲಿದ್ದಾರೆ.

ಭಾರತ vs ದ.ಆಫ್ರಿಕಾ: ಕೊಹ್ಲಿ ಪೆವಿಲಿಯನ್‌ನಲ್ಲಿ ಬ್ಯಾಟ್ ಬೀಸಿದ ಕೂಡಲೇ ವಿಕೆಟ್ ಒಪ್ಪಿಸಿದ ಅಗರ್ವಾಲ್, ವಿಡಿಯೋ ವೈರಲ್

ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಏಕದಿನ ತಂಡ:

ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಏಕದಿನ ತಂಡ:

ಕೆ.ಎಲ್ ರಾಹುಲ್ (ಸಿ), ಶಿಖರ್ ಧವನ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಇಶನ್ ಕಿಶನ್ (ವಿಕೆಟ್ ಕೀಪರ್), ಯುಜವೇಂದ್ರ ಚಾಹಲ್, ಆರ್. ಅಶ್ವಿನ್, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ (ಉಪನಾಯಕ) , ಭುವನೇಶ್ವರ್ ಕುಮಾರ್, ದೀಪಕ್ ಚಹಾರ್, ಪ್ರಸಿದ್ಧ ಕೃಷ್ಣ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್

Dravid ಹಾಗು Virat ಇಬ್ಬರಿಗೂ ಈಗ Pantರದ್ದೇ ಚಿಂತೆ | Oneindia Kannada
ಏಕದಿನ ಸರಣಿ ವೇಳಾಪಟ್ಟಿ

ಏಕದಿನ ಸರಣಿ ವೇಳಾಪಟ್ಟಿ

ಭಾರತವು ಮೂರು ಏಕದಿನ ಪಂದ್ಯಗಳನ್ನು ಸಹ ಆಡುತ್ತದೆ. ಆದರೆ ಬಿಸಿಸಿಐ ಮೊದಲೇ ಘೋಷಿಸಿದಂತೆ ನಾಲ್ಕು ಪಂದ್ಯಗಳ ಟಿ20 ಸರಣಿಯನ್ನು ಮತ್ತೆ ನಿಗದಿಪಡಿಸಲಾಗುತ್ತದೆ.

ಮೊದಲ ಏಕದಿನ: ಜನವರಿ 19 , ಪಾರ್ಕ್, ಪಾರ್ಲ್, ಸಮಯ - 2.00 PM
ಎರಡನೇ ಏಕದಿನ: ಜನವರಿ 21, ಪಾರ್ಕ್, ಪಾರ್ಲ್, ಸಮಯ - 2.00 PM
ಮೂರನೇ ಏಕದಿನ: ಜನವರಿ 23, ನ್ಯೂಲ್ಯಾಂಡ್ಸ್, ಕೇಪ್‌ ಟೌನ್, ಸಮಯ - 2.00 PM

Story first published: Wednesday, January 12, 2022, 10:40 [IST]
Other articles published on Jan 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X