ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2023ರ ವಿಶ್ವಕಪ್‌ ಗೆಲ್ಲಲು ಇಂಗ್ಲೆಂಡ್ ತಂಡಕ್ಕೆ ಸಹಾಯ ಮಾಡುವೆ: ಜೊಫ್ರಾ ಆರ್ಚರ್

Jofra archer

ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೊಫ್ರಾ ಆರ್ಚರ್ ಇಂಜ್ಯುರಿಯಿಂದಾಗಿ ಬಹಳ ಸಮಯ ತಂಡದಿಂದ ದೂರ ಉಳಿದಿದ್ರು. ಆದ್ರೆ ಇದೀಗ ಆತ ತಂಡಕ್ಕೆ ಕಂಬ್ಯಾಕ್ ಮಾಡುವ ಮುನ್ಸೂಚನೆ ನೀಡಿದ್ದಾರೆ. ಪಾಕಿಸ್ತಾನ ಮತ್ತು ಇಂಗ್ಲೆಂಡ್ ಲಯನ್ಸ್ ಅಭ್ಯಾಸದ ಪಂದ್ಯದಲ್ಲಿ ತಂಡದಲ್ಲಿ ಸ್ಥಾನ ಪಡೆದಿರುವುದು ಇಂಗ್ಲೆಂಡ್‌ ತಂಡಕ್ಕೆ ಬೂಸ್ಟ್‌ ನೀಡಿದೆ.

2021ರಲ್ಲಿ ಭಾರತದ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿ ಬಳಿಕ ಜೊಫ್ರಾ ಆರ್ಚರ್‌ಗೆ ಇದು ಸ್ಪರ್ಧಾತ್ಮಕ ಪಂದ್ಯವಾಗಿದೆ. ಇಂಗ್ಲೆಂಡ್‌ನ ವೇಗದ ಬೌಲರ್‌ ಅನೇಕ ಇಂಜ್ಯುರಿಗಳನ್ನು ಒಳಗೊಂಡಿದ್ದಲ್ಲದೆ 18 ತಿಂಗಳುಗಳ ಕಾಲ ವಿಶ್ರಾಂತಿ ಪಡೆದರು. ಲೋವರ್ ಬ್ಯಾಕ್ ಇಂಜ್ಯುರಿಗೆ ತುತ್ತಾಗಿದ್ದ ಜೊಫ್ರಾ ಆರ್ಚರ್‌ ಇದೀಗ ಕಂಬ್ಯಾಕ್ ಮಾಡಲು ರೆಡಿಯಾಗಿದ್ದಾರೆ.

SA20: ವೈಲ್ಡ್‌ಕಾರ್ಡ್ ಪ್ಲೇಯರ್ ಆಗಿ MI ಕೇಪ್ ಟೌನ್‌ಗೆ ಸೇರಿದ ಜೋಫ್ರಾ ಆರ್ಚರ್SA20: ವೈಲ್ಡ್‌ಕಾರ್ಡ್ ಪ್ಲೇಯರ್ ಆಗಿ MI ಕೇಪ್ ಟೌನ್‌ಗೆ ಸೇರಿದ ಜೋಫ್ರಾ ಆರ್ಚರ್

2019ರ ವಿಶ್ವಕಪ್‌ ಗೆಲುವಿನಲ್ಲಿ ಇಂಗ್ಲೆಂಡ್ ಪರ ಪ್ರಮುಖ ಪಾತ್ರವಹಿಸಿದ್ದ ಜೊಫ್ರಾ ಮುಂಬರುವ 2023ರ ಏಕದಿನ ವಿಶ್ವಕಪ್‌ ಗೆಲ್ಲಲು ಇಂಗ್ಲೆಂಡ್ ತಂಡಕ್ಕೆ ಸಹಾಯ ಮಾಡುವ ಬಯಕೆ ಹೊಂದಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ಗೆ ಮಿಸ್ ಆಗಿದ್ದ ಜೊಫ್ರಾ ಏಕದಿನ ವಿಶ್ವಕಪ್‌ಗೆ ಕಂಬ್ಯಾಕ್ ಮಾಡುವ ಸಾಧ್ಯತೆಯಿದೆ.

'' ನಾನು ಈ ವರ್ಷ ಕಂಬ್ಯಾಕ್ ಮಾಡಲು ಸಾಕಷ್ಟು ಖುಷಿಯಾಗಿದ್ದೇನೆ. ಇತ್ತೀಚೆಗಷ್ಟೇ ನಾವು ಟಿ20 ವಿಶ್ವಕಪ್‌ ಗೆದ್ದಿದ್ದೇವೆ. 50 ಓವರ್‌ಗಳ ವಿಶ್ವಕಪ್ ಬರಲಿದೆ. ಟೈಟಲ್‌ ಅನ್ನು ಡಿಫೆಂಡ್ ಮಾಡಲು ನಾನು ಸಹಾಯ ಮಾಡುತ್ತೇನೆ ಎಂದು ನಂಬಿದ್ದೇನೆ'' ಎಂದು ಜೊಫ್ರಾ ಹೇಳಿದ್ದಾರೆ.

ಜೊಫ್ರಾ ಆರ್ಚರ್ 2023ರ ಜನವರಿಯಲ್ಲಿ ಪ್ರಾರಂಭವಾಗಲಿರುವದಕ್ಷಿಣ ಆಫ್ರಿಕಾ ಟಿ20 (SA20) ಲೀಗ್‌ ಉದ್ಘಾಟನಾ ಆವೃತ್ತಿಯಲ್ಲಿ ವೈಲ್ಡ್‌ಕಾರ್ಡ್ ಆಟಗಾರನಾಗಿ MI ಕೇಪ್ ಟೌನ್‌ ತಂಡಕ್ಕೆ ಸಹಿ ಹಾಕಿದ್ದಾರೆ. ಜೊತೆಗೆ ಅದೇ ವರ್ಷ ಐಪಿಎಲ್‌ನಲ್ಲೂ ಆಡುವ ಸಾಧ್ಯತೆಯಿದೆ.

Story first published: Thursday, November 24, 2022, 18:50 [IST]
Other articles published on Nov 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X