ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಯುಎಇ ಆವೃತ್ತಿಯಿಂದ ಹಿಂದಕ್ಕೆ ಸರಿದ ಮತ್ತಷ್ಟು ಇಂಗ್ಲೆಂಡ್ ಆಟಗಾರರು

India and england 2021, ipl 2021, david malan, Jonny Bairstow, ಇಂಗ್ಲೆಂಡ್, ಜಾನಿ ಬೈರ್‌ಸ್ಟೋವ್, ಐಪಿಎಲ್ 2021

ಈ ಬಾರಿಯ ಐಪಿಎಲ್‌ನ ಎರಡನೇ ಚರಣದ ಪಂದ್ಯಗಳು ಯುಎನಲ್ಲಿ ಆರಂಭವಾಗಲು ಕೆಲವೇ ದಿನಗಳು ಮಾತ್ರವೇ ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಕ್ರಿಕೆಟ್ ಪ್ರೇಮಿಗಳ ಚಿತ್ತ ಈಗ ದುಬೈನತ್ತ ನೆಟ್ಟಿದೆ. ಈ ಮಧ್ಯೆ ಇಂಗ್ಲೆಂಡ್‌ನ ಸಾಲು ಸಾಲು ಆಟಗಾರರು ಐಪಿಎಲ್‌ನಿಂದ ಹೊರಗುಳಿಯುವ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದಾರೆ. ಈ ಮೂಲಕ ಐಪಿಎಲ್ ಫ್ರಾಂಚೈಸಿಗಳಿಗೆ ಕಡೇ ಕ್ಷಣದಲ್ಲಿ ಸವಾಲುಗಳು ಎದುರಾಗುತ್ತಿದೆ.

ಈಗಾಗಲೇ ಇಂಗ್ಲೆಂಡ್‌ನ ಕೆಲ ಆಟಗಾರರು ಐಪಿಎಲ್‌ನಿಂದ ಹಿಂದಕ್ಕೆ ಸರಿಯುವ ನಿರ್ಧಾರವನ್ನು ತೆಗೆದುಕೊಂಡಿದ್ದರು. ಇದಕ್ಕೆಈಗ ಮತ್ತಷ್ಟು ಆಟಗಾರರು ಸೇರ್ಪಡೆಯಾಗುತ್ತಿದ್ದಾರೆ. ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್ ಜೋಸ್ ಬಟ್ಲರ್ ಅವರಂತಾ ಸ್ಟಾರ್ ಆಟಗಾರರು ಈ ಮೊದಲೇ ಐಪಿಎಲ್‌ನ ಉಳಿದ ಪಂದ್ಯಗಳಿಂದ ಹೊರಗುಳಿಯುವ ನಿರ್ಧಾರ ಪ್ರಕಟಿಸಿದ್ದರು. ಈಗ ಆ ಪಟ್ಟಿಗೆ ಮತ್ತಷ್ಟು ಸ್ಟಾರ್ ಆಟಗಾರರು ಸೇರ್ಪಡೆಯಾಗುತ್ತಿದ್ದಾರೆ.

ಟೆಸ್ಟ್ ರದ್ದಿಗೆ ಐಪಿಎಲ್ ದೂರಿದ ಮೈಕಲ್ ವಾನ್‌ಗೆ ಅಭಿಮಾನಿಗಳು ತರಾಟೆಟೆಸ್ಟ್ ರದ್ದಿಗೆ ಐಪಿಎಲ್ ದೂರಿದ ಮೈಕಲ್ ವಾನ್‌ಗೆ ಅಭಿಮಾನಿಗಳು ತರಾಟೆ

ಹಾಗಾದರೆ ಈ ಬಾರಿಯ ಐಪಿಎಲ್ ಆವೃತ್ತಿಯ ಎರಡನೇ ಚರಣದ ಪಂದ್ಯಗಳಿಂದ ಹೊರಗುಳಿಯುವ ನಿರ್ಧಾರ ತೆಗೆದುಕೊಂಡ ಇಂಗ್ಲೆಂಡ್‌ನ ಮತ್ತಷ್ಟು ಆಟಗಾರರು ಯಾರ್ಯಾರು? ಮುಂದೆ ಓದಿ..

ವೈಯಕ್ತಿಕ ಕಾರಣಗಳನ್ನು ನೀಡಿ ಹಿಂದಕ್ಕೆ ಸರಿಯುತ್ತಿದ್ದಾರೆ ಆಟಗಾರರು

ವೈಯಕ್ತಿಕ ಕಾರಣಗಳನ್ನು ನೀಡಿ ಹಿಂದಕ್ಕೆ ಸರಿಯುತ್ತಿದ್ದಾರೆ ಆಟಗಾರರು

ಐಪಿಎಲ್ 14ನೇ ಆವೃತ್ತಿಯ ಮೊದಲಾರ್ಧ ಭಾಗದ ಪಂದ್ಯಗಳು ಭಾರತದಲ್ಲಿ ನಡೆದ ಬಳಿಕ ಕೊರೊನಾವೈರಸ್ ಐಪಿಎಲ್ ಟೂರ್ನಿಗೆ ಆಘಾತ ನೀಡಿತ್ತು. ಹೀಗಾಗಿ ಅನಿರ್ದಿಷ್ಟಾವಧಿಗೆ ಐಪಿಎಲ್ ಪಂದ್ಯಗಳನ್ನು ಮುಂದೂಡಲಾಗಿತ್ತು. ಹೀಗಾಗಿ ಈ ಪಂದ್ಯಗಳನ್ನು ಈಗ ಯುಎಇನಲ್ಲಿ ಆಯೋಜನೆ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ ಟೂರ್ನಿಯ ಮೊದಲಾರ್ಧದಲ್ಲಿ ಭಾಗಿಯಾಗಿದ್ದ ಕೆಲ ಆಟಗಾರರು ಈಗ ವೈಯಕ್ತಿಕ ಕಾರಣಗಳನ್ನು ನೀಡಿ ಹಿಂದಕ್ಕೆ ಸರಿಯುತ್ತಿದ್ದಾರೆ.

ಆಟಗಾರರಿಗೆ ಗ್ರೀನ್ ಸಿಗ್ನಲ್ ನೀಡಿದ್ದ ಇಸಿಬಿ

ಆಟಗಾರರಿಗೆ ಗ್ರೀನ್ ಸಿಗ್ನಲ್ ನೀಡಿದ್ದ ಇಸಿಬಿ

ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಇಂಗ್ಲೆಂಡ್ ಆಟಗಾರರು ಐಪಿಎಲ್‌ನ ಎರಡನೇ ಚರಣಗಳ ಪಂದ್ಯಗಳಲ್ಲಿ ಪಾಲ್ಗೊಳ್ಳಲು ಒಪ್ಪಿರಲಿಲ್ಲ. ಅಂತಾರಾಷ್ಟ್ರೀಯ ಪಂದ್ಯಗಳು ಮೊದಲೇ ಆಯೋಜನೆಯಾಗಿದ್ದ ಕಾರಣ ಅದನ್ನು ಬದಲಿಸಲು ಸಾಧ್ಯವಿಲ್ಲ ಹಾಗಾಗಿ ಇಂಗ್ಲೆಂಡ್ ಆಟಗಾರರಿಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿತ್ತು. ಆದರೆ ಈ ವಿಚಾರವಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇಂಗ್ಲೆಂಡ್ ಮಂಡಳಿಯ ಜೊತೆಗೆ ಸತತ ಮಾತುಕತೆ ನಡೆಸಿ ಇಂಗ್ಲೆಂಡ್ ಮಂಡಳಿಯ ಮನವೊಲಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಇಂಗ್ಲೆಂಡ್‌ನ ಆಟಗಾರರು ಐಪಿಎಲ್‌ನ ಉಳಿದ ಪಂದ್ಯಗಳಲ್ಲಿ ಭಾಗಿಯಾಗಲಿ ಅನುಮತಿ ನೀಡಿದೆ.

ಹಿಂದಕ್ಕೆ ಸರಿಯುವ ನಿರ್ಧಾರ ಪ್ರಕಟಿಸಿದ ಆಟಗಾರರು ಇವರು

ಹಿಂದಕ್ಕೆ ಸರಿಯುವ ನಿರ್ಧಾರ ಪ್ರಕಟಿಸಿದ ಆಟಗಾರರು ಇವರು

ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಐಪಿಎಲ್‌ನ ಉಳಿದ ಪಂದ್ಯಗಳಲ್ಲಿ ಭಾಗಿಯಾಗಲು ಅನುಮತಿ ನೀಡಿದರೂ ಇಂಗ್ಲೆಂಡ್ ತಂಡದ ಕೆಲ ಪ್ರಮುಖ ಆಟಗಾರರು ಭಾಗಿಯಾಗುತ್ತಿಲ್ಲ. ಸನ್‌ರೈಸರ್ಸ್ ಹೈದರಾಬಾದ್ ತಂಡದ ಪ್ರಮುಖ ಆಟಗಾರ ಜಾನಿ ಬೈರ್‌ಸ್ಟೋವ್ ಪಂಜಾಬ್ ಕಿಂಗ್ಸ್ ತಂಡದ ಆಟಗಾರ ಡೇವಿಡ್ ಮಲನ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಲ್‌ರೌಂಡರ್ ಕ್ರಿಸ್ ವೋಕ್ಸ್ ಐಪಿಎಲ್ 14ನೇ ಆವೃತ್ತಿಯ ಎರಡನೇ ಚರಣದ ಪಂದ್ಯಗಳಿಂದ ಹಿಂದಕ್ಕೆ ಸರಿಯುವ ನಿರ್ಧಾರವನ್ನು ಕೊನೆಯ ಕ್ಷಣದಲ್ಲಿ ಪ್ರಕಟಿಸಿದ್ದಾರೆ.

ಕ್ವಾರಂಟೈನ್ ಕಾರಣ ನೀಡಿದ ಮಲನ್, ಬೈರ್‌ಸ್ಟೋವ್

ಕ್ವಾರಂಟೈನ್ ಕಾರಣ ನೀಡಿದ ಮಲನ್, ಬೈರ್‌ಸ್ಟೋವ್

ಇನ್ನು ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಕೊರೊನಾವೈರಸ್‌ನ ಕಾರಣದಿಂದಾಗ ರದ್ದಾಗಿದೆ. ಹೀಗಾಗಿ ಐಪಿಎಲ್‌ನಲ್ಲಿ ಭಾಗಿಯಾಗಲಿರುವ ಆಟಗಾರರು ದುಬೈಗೆ ತೆರಳಿದ್ದು ಅಲ್ಲಿ ಕಡ್ಡಾಯವಾಗಿ ಆರು ದಿನಗಳ ಕ್ವಾರಂಟೈನ್‌ ಪೂರೈಸಬೇಕಿದೆ. ಆದರೆ ಇದಕ್ಕೂ ಮುನ್ನ ಈ ಆಟಗಾರರು ಇಂಗ್ಲೆಂಡ್ ಸರಣಿಯ ಬಬಲ್‌ನಿಂದ ಐಪಿಎಲ್‌ ಬಬಲ್‌ಗೆ ಸೇರ್ಪಡೆಯಾಗುವ ಅವಕಾಶವಿತ್ತು. ಆದರೆ ಇಂಗ್ಲೆಂಡ್ ಟೆಸ್ಟ್ ಸರಣಿಯ ಬಬಲ್‌ನಲ್ಲಿ ಕೊರೊನಾವೈರಸ್ ಕಾಣಿಸಿಕೊಂಡಿರುವ ಕಾರಣದಿಂದಾಗಿ ಐಪಿಎಲ್‌ನಲ್ಲಿ ಭಾಗಿಯಾಗಬೇಕಿರುವ ಆಟಗಾರರು ಕಡ್ಡಾಯ ಕ್ವಾರಂಟೈನ್‌ಗೆ ಒಳಗಾಗಬೇಕಿದೆ. ಹೀಗಾಗಿ ಇಂಗ್ಲೆಂಡ್ ತಂಡದ ಆಟಗಾರರಾದ ಡೇವಿಡ್ ಮಲನ್ ಹಾಗೂ ಬೈರ್‌ಸ್ಟೋವ್ ಐಪಿಎಲ್‌ನಿಂದ ಹಿಂದಕ್ಕೆ ಸರಿಯುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಸ್ಟೋಕ್ಸ್, ಆರ್ಚರ್, ಬಟ್ಲರ್ ಕೂಡ ಆಡಲ್ಲ

ಸ್ಟೋಕ್ಸ್, ಆರ್ಚರ್, ಬಟ್ಲರ್ ಕೂಡ ಆಡಲ್ಲ

ಈ ಬಾರಿಯ ಐಪಿಎಲ್ ಪಂದ್ಯಗಳಿಂದ ಇಂಗ್ಲೆಂಡ್‌ನ ಪ್ರಮುಖ ಆಟಗಾರರಾದ ಜೋಫ್ರಾ ಆರ್ಚರ್, ಬೆನ್ ಸ್ಟೋಕ್ಸ್ ಹಾಗೂ ಜೋಸ್ ಬಟ್ಲರ್ ಕೂಡ ಹಿಂದಕ್ಕೆ ಸರಿದಿದ್ದಾರೆ. ಜೋಫ್ರಾ ಆರ್ಚರ್ ಗಾಯದ ಕಾರಣದಿಂದಾಗಿ ಐಪಿಎಲ್‌ನಿಂದ ಹಿಂದಕ್ಕೆ ಸರಿದಿದ್ದರೆ ಬೆನ್ ಸ್ಟೋಕ್ಸ್ ಮಾನಸಿಕ ಆರೋಗ್ಯದ ಕಾರಣಕ್ಕೆ ವಿಶ್ರಾಂತಿ ಪಡೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ಎರಡನೇ ಮಗುವಿಗೆ ತಂದೆಯಾದ ಸಂಭ್ರಮದಲ್ಲಿರುವ ಜೋಸ್ ಬಟ್ಲರ್ ಐಪಿಎಲ್‌ನಿಂದ ಹೊರಗುಳಿದು ಕುಟುಂಬದ ಜೊತೆಗೆ ಕಾಲ ಕಳೆಯಲು ಬಯಸಿದ್ದಾರೆ.

Story first published: Sunday, September 12, 2021, 9:48 [IST]
Other articles published on Sep 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X