ಡೆಮಾಕ್ರಾಸಿಸ್ XI ರಾಜ್ ದೀಪ್ ಪುಸ್ತಕ ಟ್ರೆಂಡಿಂಗ್!

Posted By:

ನವದೆಹಲಿ, ಅಕ್ಟೋಬರ್ 20: 2014ರಲ್ಲಿ 'ದಿ ಎಲೆಕ್ಷನ್ ದಟ್ ಚೇಂಜ್ಡ್ ಇಂಡಿಯಾ' ಎಂಬ ಕೃತಿ ರಚಿಸಿದ್ದ ಪತ್ರಕರ್ತ ರಾಜ್ ದೀಪ್ ಸರ್ದೇಸಾಯಿ ಅವರು ತಮ್ಮ ಹೊಚ್ಚ ಹೊಸ ಪುಸ್ತಕವನ್ನು ಇಂದು ಪ್ರಕಟಿಸಿದ್ದಾರೆ. ಭಾರತೀಯ ಕ್ರಿಕೆಟ್ ಜಗತ್ತಿನ ಒಳ-ಹೊರಗುಗಳನ್ನು ತಿಳಿಸುವ 'ಡೆಮಾಕ್ರಾಸಿಸ್ XI' ಸಾಮಾಜಿಕ ಜಾಲ ತಾಣಗಳಲ್ಲಿ ಸದ್ಯಕ್ಕೆ ಟ್ರೆಂಡಿಂಗ್ ನಲ್ಲಿದೆ.

ಭಾರತ ಹಾಗೂ ಕ್ರಿಕೆಟ್ ಕುರಿತಾದ ಪುಸ್ತಕ ಇದಾಗಿದೆ ನಿಮ್ಮ ಬೆಂಬಲ ಬೇಕು ಗೆಳೆಯರೇ ಎಂದು ಹೊಸ ಪುಸ್ತಕದ ಪ್ರತಿಯ ಚಿತ್ರವನ್ನು ಪತ್ರಕರ್ತ ರಾಜ್ ದೀಪ್ ಟ್ವೀಟ್ ಮಾಡಿದ್ದಾರೆ.

ಅಜರ್, ಸಚಿನ್, ಗವಾಸ್ಕರ್, ಕಪಿಲ್, ಸೌರವ್, ಕೊಹ್ಲಿ, ಪಟೌಡಿ, ದ್ರಾವಿಡ್, ಧೋನಿ, ದಿಲೀಪ್ ಸರ್ದೇಸಾಯಿ, ಬೇಡಿ ಅವರ ಚಿತ್ರಗಳನ್ನು ಪುಸ್ತಕದ ಮುಖಪುಟದಲ್ಲಿ ಹಾಕಲಾಗಿದೆ.

ಮಾಜಿ ಕ್ರಿಕೆಟರ್ ದಿಲೀಪ್ ಸರ್ದೇಸಾಯಿ ಅವರ ಪುತ್ರ ರಾಜ್ ದೀಪ್ ಸರ್ದೇಸಾಯಿ ಅವರು ಆಕ್ಸ್ ಫರ್ಡ್ ವಿವಿಯಿಂದ ಎಂಎ, ಎಲ್ಎಲ್ ಬಿ ಪಡೆದಿದ್ದು, ಕ್ರಾಫರ್ಡ್ ಬೈಲಿ ಎಂಬ ಸಂಸ್ಥೆಯ ಪರ ವಕೀಲರಾಗಿ ಕೆಲಕಾಲ ಕಾರ್ಯ ನಿರ್ವಹಿಸಿದ್ದರು.

ರಾಜ್ ದೀಪ್ ಕೂಡಾ ಕ್ರಿಕೆಟರ್ ಆಗಿದ್ದರು

ರಾಜ್ ದೀಪ್ ಕೂಡಾ ಕ್ರಿಕೆಟರ್ ಆಗಿದ್ದರು

ವಿಶ್ವವಿದ್ಯಾಲಯದ ಅಂಡರ್ 19 ಕ್ರಿಕೆಟರ್ ಕೂಡಾ ಆಗಿದ್ದ ರಾಜ್ ದೀಪ್ ಅವರಿಗೆ ಸಹಜವಾಗಿ ಕ್ರಿಕೆಟ್ ಬಗ್ಗೆ ಆಸಕ್ತಿ ಇದ್ದೆ ಇದೆ. ಮುದ್ರಣ ಮಾಧ್ಯಮ, ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಸಾಕಷ್ಟು ಅನುಭವ ಹೊಂದಿರುವ ಸರ್ದೇಸಾಯಿ ಅವರು ಸದ್ಯ ಇಂಡಿಯಾ ಟುಡೇಯ ಕನ್ಸಲ್ಟಿಂಗ್ ಎಡಿಟರ್ ಆಗಿದ್ದಾರೆ.

ನಿಮ್ಮ ಬೆಂಬಲ ಬೇಕು ಎಂದಿದ್ದ ರಾಜದೀಪ್

ಪುಸ್ತಕದ ಬಗ್ಗೆ ಟ್ವೀಟ್ ಮಾಡಿ ನಿಮ್ಮ ಬೆಂಬಲ ಬೇಕು ಎಂದು ಅಭಿಮಾನಿಗಳನ್ನು ಕೇಳಿಕೊಂಡಿದ್ದಾರೆ.

90ರ ದಶಕದಲ್ಲಿ ಕ್ರಿಕೆಟರ್ ಗಳ ವರಮಾನ

90ರ ದಶಕದಲ್ಲಿ ಕ್ರಿಕೆಟರ್ ಗಳ ವರಮಾನ ವಿವರ ಲಭ್ಯವಿದೆ. ಟೆಸ್ಟ್ ಆಟಗಾರರರಿಗೆ ದಿನವೊಂದಕ್ಕೆ 10 ಸಾವಿರ ರು ಲಭಿಸುತ್ತಿತ್ತು.

ಧೋನಿ ಅವರ ಬಗ್ಗೆ ಮಾಹಿತಿ

ಧೋನಿ ಬಗ್ಗೆ ಈಗಾಗಲೇ ಸಿನಿಮಾ ಬಂದಿದೆ. ಆರಂಭದ ದಿನಗಳಲ್ಲಿ ಪೂರ್ವ ವಲಯದ ಪರ ಧೋನಿ ಅವರು ಆಡಲಾಗಲಿಲ್ಲ ಏಕೆ? ಎಂಬುದು ಈಗಾಗಲೇ ಅಭಿಮಾನಿಗಳಿಗೆ ಗೊತ್ತಾಗಿದೆ. ಇದು ಇಲ್ಲಿ ವಿವರವಾಗಿ ಲಭ್ಯವಿದೆ.

ಪುಸ್ತಕದ ಹೆಸರಿಗೆ ಆಕ್ಷೇಪ

ಮೋದಿ ಹಾಗೂ ಹಿಂದೂಗಳ ವಿರುದ್ಧ ಹಲವು ಬಾರಿ ದನಿಯೆತ್ತಿರುವ ರಾಜ್ ದೀಪ್ ಅವರ ವಿರುದ್ಧ ಅನೇಕರು ಕಿಡಿಕಾರಿದ್ದಾರೆ. ಪುಸ್ತಕದ ಶೀರ್ಷಿಕೆಯಲ್ಲಿ ಪ್ರಜಾಪ್ರಭುತ್ವ ಎಂದು ಬಳಸಿ 11 ಜನ ಮಾತ್ರ ಇರುವಂತೆ ಮಾಡಿದ್ದೀರಿ ಅದು ಹೇಗೆ ಎಂದು ಪ್ರಶ್ನಿಸಿದ್ದಾರೆ.

Story first published: Friday, October 20, 2017, 16:03 [IST]
Other articles published on Oct 20, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ