ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೀಮಿತ ಓವರ್‌ಗಳ ಸರಣಿಯಿಂದ ಹಿಂದಕ್ಕೆ ಸರಿದ ರಿಚರ್ಡ್ಸನ್ ನಿರ್ಧಾರಕ್ಕೆ ಆಸಿಸ್ ಕೋಚ್ ಬೆಂಬಲ

Justin Langer praised Kane Richardsons decision to withdraw from limited-overs series against India

ಆಸ್ಟ್ರೇಲಿಯಾದ ವೇಗದ ಬೌಲರ್ ಕೇನ್ ರಿಚರ್ಡ್ಸನ್ ಟೀಮ್ ಇಂಡಿಯಾ ವಿರುದ್ದದ ಸೀಮಿತ ಓವರ್‌ಗಳ ಸರಣಿಯಿಂದ ಹಿಂದಕ್ಕೆ ಸರಿದಿದ್ದಾರೆ. ಕುಟುಂಬದೊಮದಿಕೆ ಕಾಲ ಕಳೆಯುವ ದೃಷ್ಟಿಯಿಂದ ಈ ನಿರ್ಧಾರವನ್ನು ಕೇನ್ ರಿಚರ್ಡ್ಸನ್ ತೆಗೆದುಕೊಂಡಿದ್ದಾರೆ. ಆಸಿಸ್ ವೇಗಿಯ ಈ ನಿರ್ಧಾರಕ್ಕೆ ಆಸ್ಟ್ರೇಲಿಯಾ ಕೋಚ್ ಜಸ್ಟಿನ್ ಲ್ಯಾಂಗರ್ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಕೇನ್ ರಿಚರ್ಡ್ಸನ್ ಇತ್ತೀಚೆಗಷ್ಟೆ ತಮ್ಮ ಮೊದಲನೇ ಮಗುವಿನ ತಂದೆಯಾಗಿದ್ದಾರೆ. ಹೀಗಾಗಿ ಮುಂಬರುವ ಭಾರತದ ವಿರುದ್ಧದ ಸರಣಿಯಿಂದ ಹೊರಗುಳಿದು ಕುಟುಂಬದೊಂದಿಗೆ ಕಾಲ ಕಳೆಯಲು ಕೇನ್ ಬಯಸಿದ್ದಾರೆ. ಇದಕ್ಕೆ ಆಸಿಸ್ ಕೋಚ್ "ಕುಟುಂಬದ ವಿಚಾರಕ್ಕೆ ಬಂದಾಗ ಒಬ್ಬರನ್ನೊಬ್ಬರು ನೋಡಿಕೊಳ್ಳಲು ಕೇನ್ ವಿಲಿಯಮ್ಸನ್ ಧೈರ್ಯಶಾಲಿ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಈ ಸರಣಿಯನ್ನು ಆಡದಿರಲು ಹಾಗೂ ಕುಟುಂಬದೊಂದಿಗೆ ಸಮಯವನ್ನು ಕಳೆಯಲು ಅವರು ತೀರ್ಮಾನಿಸಿದ್ದಾರೆ" ಎಂದು ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ.

ಭಾರತ vs ಆಸ್ಟ್ರೇಲಿಯಾ: NCAನಲ್ಲಿ ತರಬೇತಿ ಆರಂಭಿಸಿದ ಇಶಾಂತ್ ಶರ್ಮಾಭಾರತ vs ಆಸ್ಟ್ರೇಲಿಯಾ: NCAನಲ್ಲಿ ತರಬೇತಿ ಆರಂಭಿಸಿದ ಇಶಾಂತ್ ಶರ್ಮಾ

ಕೇನ್ ರಿಚರ್ಡ್ಸನ್ ಅವರು ತೆಗೆದುಕೊಂಡಿರುವ ಈ ನಿರ್ಧಾರದಿಂದಾಗಿ ಕ್ರಿಕೆಟ್ ಆಸ್ಟ್ರೇಲಿಯ ತಂಡದಲ್ಲಿ ಬದಲಾವಣೆ ಮಾಡಿಕೊಂಡಿದೆ. ರಿಚರ್ಡ್ಸನ್ ಸ್ಥಾನಕ್ಕೆ ಆಂಡ್ರ್ಯೋ ಟೈ ಅವರನ್ನು ಏಕದಿನ ಹಾಗೂ ಟಿ20 ತಂಡಕ್ಕೆ ಸೇರ್ಪಡೆಗೊಳಿಸಿದೆ.

ಕೇನ್ ರಿಚರ್ಡ್ಸನ್ ತೆಗೆದುಕೊಂಡ ಈ ನಿರ್ಧಾರ ತುಂಬಾ ಕಠಿಣವಾಗಿತ್ತು. ಆದರೆ ಈ ನಿರ್ಧಾರಕ್ಕೆ ಆಯ್ಕೆಗಾರರು ಹಾಗೂ ತಂಡದ ಸಂಪೂರ್ಣ ಬೆಂಬಲವನ್ನು ಹೊಂದಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಆಯ್ಕೆಗಾರರಲ್ಲಿ ಒಬ್ಬರಾಗಿರುವ ಟ್ರೇವರ್ ಹಾನ್ಸ್ ಬುಧವಾರ ಮಾಧ್ಯಮಗಳಿಗೆ ಹೇಳಿಕೆಯನ್ನು ನೀಡಿದ್ದಾರೆ.

ಟೀಮ್ ಇಂಡಿಯಾದ ನಾಯಕತ್ವ ವಿಭಜನೆ ಬಗ್ಗೆ ಅಭಿಪ್ರಾಯ ಮಂಡಿಸಿದ ಶೋಯೆಬ್ ಅಖ್ತರ್ಟೀಮ್ ಇಂಡಿಯಾದ ನಾಯಕತ್ವ ವಿಭಜನೆ ಬಗ್ಗೆ ಅಭಿಪ್ರಾಯ ಮಂಡಿಸಿದ ಶೋಯೆಬ್ ಅಖ್ತರ್

"ಕೇನ್ ಅಡಿಲೆಡ್‌ನಲ್ಲಿ ತಮ್ಮ ಪತ್ನಿ ನೈಕಿ ಹಾಗೂ ಇತ್ತೀಚೆಗಷ್ಟೇ ಜನಿಸಿರುವ ಪುತ್ರನೊಂದಿಗೆ ಉಳಿದುಕೊಳ್ಳಲು ಬಯಸಿದ್ದಾರೆ. ನಾವು ನಮ್ಮ ಆಟಗಾರರಿಗೆ ಹಾಗೂ ಅವರ ಕುಟುಂಬಕ್ಕೆ ಯಾವಾಗಲೂ ಬೆಂಬಲವಾಗಿರುತ್ತೇವೆ. ತಂಡಕ್ಕೆ ಅವರಿಂದ ಸಿಗಬೆಕಿದ್ದ ಬೆಂಬಲವನ್ನು ನಾವು ಕಳೆದುಕೊಳ್ಳಲಿದ್ದೇವೆ. ಆದರೆ ಅವರನ್ನು ನಾವು ಅರ್ಥಮಾಡಿಕೊಂಡಿದ್ದು ಅವರ ನಿರ್ಧಾರಕ್ಕೆ ಬೆಮಭಲವನ್ನು ನೀಡಿದ್ದೇವೆ" ಎಂದು ಟ್ರೇವರ್ ಹಾನ್ಸ್ ವಿವರಿಸಿದ್ದಾರೆ.

Story first published: Thursday, November 19, 2020, 10:43 [IST]
Other articles published on Nov 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X