ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೇನ್ ವಿಲಿಯಮ್ಸನ್, ಸೂಝಿ ಬೇಟ್ಸ್‌ಗೆ ಕಿವೀಸ್ ಒಡಿಐ ಪ್ಲೇಯರ್ ಪ್ರಶಸ್ತಿ

Kane Williamson, Suzie Bates named New Zealand ODI players

ವೆಲ್ಲಿಂಗ್ಟನ್, ಏಪ್ರಿಲ್ 30: ಕೇನ್ ವಿಲಿಯಮ್ಸನ್ ಮತ್ತು ಸೂಝಿ ಬೇಟ್ಸ್‌ಗೆ ನ್ಯೂಜಿಲೆಂಡ್‌ನ ವರ್ಷದ ಏಕದಿನ ಆಟಗಾರ/ರ್ತಿ ಪ್ರಶಸ್ತಿ ದೊರೆತಿದೆ. ವರ್ಷದುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ನ್ಯೂಜಿಲೆಂಡ್ ವರ್ಷದ ಪ್ರಶಸ್ತಿಗಾಗಿ ಗುರುವಾರ (ಏಪ್ರಿಲ್ 30) ವಿಲಿಯಮ್ಸನ್ ಮತ್ತು ಬೇಟ್ಸ್‌ ಗುರುತಿಸಿಕೊಂಡಿದ್ದಾರೆ.

ಸ್ಪಿನ್ ಬೌಲಿಂಗ್ ಎದುರಿಸುವುದರಲ್ಲಿ ಸ್ಮಿತ್‌ಗಿಂತ ಮಲಿಕ್ ಉತ್ತಮ: ಚಾಹಲ್ಸ್ಪಿನ್ ಬೌಲಿಂಗ್ ಎದುರಿಸುವುದರಲ್ಲಿ ಸ್ಮಿತ್‌ಗಿಂತ ಮಲಿಕ್ ಉತ್ತಮ: ಚಾಹಲ್

2019ರ ವಿಶ್ವಕಪ್‌ ಟೂರ್ನಿಯಲ್ಲಿನ ಪ್ರದರ್ಶನವನ್ನು ಪರಿಗಣಿಸಿ ಕೇನ್ ವಿಲಿಯಮ್ಸನ್ ಅವರನ್ನು ವರ್ಷದ ಏಕದಿನ ಕ್ರಿಕೆಟಿಗನಾಗಿ ಆರಿಸಲಾಗಿದೆ. ವಿಶ್ವಕಪ್‌ನಲ್ಲಿ ವಿಲಿಯಮ್ಸನ್ 82ರ ಸರಾಸರಿಯಲ್ಲಿ 578 ರನ್ ಗಳಿಸಿದ್ದರು. ಇದರಲ್ಲಿ 2 ಶತಕಗಳೂ ಸೇರಿದ್ದವು. ವಿಶ್ವಕಪ್‌ ವೇಳೆ ಟೂರ್ನಿಯ ಆಟಗಾರ ಪ್ರಶಸ್ತಿಯೂ ಕೇನ್ ಪಾಲಾಗಿತ್ತು.

ಪಾಕ್‌ ಮಾಜಿ ಕ್ರಿಕೆಟರ್ ಶೋಯೆಬ್ ಅಖ್ತರ್ ವಿರುದ್ಧ ಮಾನನಷ್ಟ ಮೊಕದ್ದಮೆಪಾಕ್‌ ಮಾಜಿ ಕ್ರಿಕೆಟರ್ ಶೋಯೆಬ್ ಅಖ್ತರ್ ವಿರುದ್ಧ ಮಾನನಷ್ಟ ಮೊಕದ್ದಮೆ

'ಕೇನ್ ವಿಲಿಯಮ್ಸನ್ ಅವರು ಐಸಿಸಿ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಅಸಾಧಾರಣ ಪ್ರದರ್ಶನ ನೀಡಿದ್ದರು. ಅಲ್ಲದೆ ತಂಡವನ್ನೂ ಮುನ್ನಡೆಸಿದ್ದರು. ಇದಕ್ಕಾಗಿ ಅವರನ್ನು ವರ್ಷದ ಕ್ರಿಕೆಟಿಗನಾಗಿ ಗುರುತಿಸಲಾಗಿದೆ,' ಎಂದು ಬ್ಲ್ಯಾಕ್ ಕ್ಯಾಪ್ಸ್ ಹೆಡ್ ಕೋಚ್ ಗ್ಯಾರಿ ಸ್ಟೆಡ್ ಹೇಳಿದ್ದಾರೆ.

ಭಾರತದ ಟಿ10 ಫ್ರಾಂಚೈಸಿ ಮಾಲಕನಿಗೆ ನಿಷೇಧ ಹೇರಿದ ಐಸಿಸಿಭಾರತದ ಟಿ10 ಫ್ರಾಂಚೈಸಿ ಮಾಲಕನಿಗೆ ನಿಷೇಧ ಹೇರಿದ ಐಸಿಸಿ

ನ್ಯೂಜಿಲೆಂಡ್ ರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡ 'ವೈಟ್ ಫರ್ನ್ಸ್' ನಾಯಕಿಯಾಗಿರುವ ಸೂಝಿ ಬೇಟ್ಸ್ ಈ ಬೇಸಿಗೆಯಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಆ ಸರಣಿಯಲ್ಲಿ 42ರ ಸರಾಸರಿಯಂತೆ 142 ಕಲೆ ಹಾಕಿದ್ದರು.

ಇನ್ನು ರಾಸ್ ಟೇಲರ್ ಮತ್ತು ಸೋಫಿ ಡಿವೈನ್ ಇಬ್ಬರೂ ವರ್ಷದ ಟಿ20 ಕ್ರಿಕೆಟಿಗರಾಗಿ ಗುರುತಿಸಿಕೊಂಡಿದ್ದಾರೆ. ಅಂದ್ಹಾಗೆ, ಕೊರೊನಾವೈರಸ್ ಕಾರಣ ಇದೇ ಮೊದಲ ಬಾರಿಗೆ ಪ್ರಶಸ್ತಿ ವಿತರಣಾ ಸಮಾರಂಭ ಆಲ್‌ಲೈನ್‌ನಲ್ಲಿ ನಡೆದಿದ್ದು ವಿಶೇಷವೆನಿಸಿತು.

Story first published: Thursday, April 30, 2020, 16:29 [IST]
Other articles published on Apr 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X