ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತನ್ನ ಟೆಸ್ಟ್ ದಾಖಲೆ ಮುರಿದ ಆರ್ ಅಶ್ವಿನ್ ಬಗ್ಗೆ ದೊಡ್ಡ ಭವಿಷ್ಯ ನುಡಿದ ಕಪಿಲ್ ದೇವ್

Kapil Dev makes big prediction on R Ashwin after spinner breaking his record

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಭಾರತೀಯ ತಂಡದ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಮಹತ್ವದ ದಾಖಲೆಯನ್ನು ಬರೆದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್‌ಗಳ ಪಟ್ಟಿಯಲ್ಲಿ ಆರ್ ಅಶ್ವಿನ್ ಕಪಿಲ್‌ದೇವ್ ಅವರನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆರಿದ್ದಾರೆ. ಈ ಐತಿಹಾಸಿಕ ಸಾಧನೆ ಮಾಡಿದ ಒಂದು ದಿನದ ಬಳಿಕ ಸ್ವತಃ ಕಪಿಲ್‌ದೇವ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಭಾರತದ ಪರವಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಕಪಿಲ್‌ದೇವ್ ಹೆಸರಿನಲ್ಲಿ ಸುಮಾರು 10 ವರ್ಷಗಳ ಕಾಲ ಇತ್ತು. 2004ರಲ್ಲಿ ಅನಿಲ್ ಕುಂಬ್ಳೆ ಈ ದಾಖಲೆಯನ್ನು ಮುರಿದಿದ್ದರು. ಇದೀಗ ಆ ಸಾಧನೆಯ 18 ವರ್ಷಗಳ ನಂತರ ಕಪಿಲ್‌ದೇವ್ ಅವರನ್ನು ಆರ್ ಅಶ್ವಿನ್ ಹಿಂದಿಕ್ಕಿದ್ದಾರೆ. ಈ ಸಾಧನೆಯಗಾಗಿ ಕಪಿಲ್‌ದೇವ್ ಆರ್ ಅಶ್ವಿನ್ ಅವರನ್ನು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ. ಅವರಿಗೆ ಹೆಚ್ಚಿನ ಅವಕಾಶಗಳು ದೊರೆತಿದ್ದರು ಇದಕ್ಕೂ ಮೊದಲೇ ಈ ದಾಖಲೆಯನ್ನು ಆರ್ ಅಶ್ವಿನ್ ಮುರಿಯುತ್ತಿದ್ದರು ಎಂದು ಕಪಿಲ್‌ದೇವ್ ಪ್ರತಿಕ್ರಿಯಿಸಿದ್ದಾರೆ.

ರಣಜಿ ಟ್ರೋಫಿ: ಮಿಂಚಿದ ಪಡಿಕ್ಕಲ್, ಪುದುಚೆರಿಗೆ ಸೋಲುಣಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟ ಕರ್ನಾಟಕರಣಜಿ ಟ್ರೋಫಿ: ಮಿಂಚಿದ ಪಡಿಕ್ಕಲ್, ಪುದುಚೆರಿಗೆ ಸೋಲುಣಿಸಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟ ಕರ್ನಾಟಕ

"ಇತ್ತೋಚಿನ ದಿನಗಳಲ್ಲಿ ಸಾಕಷ್ಟು ಅವಕಾಶ ದೊರೆಯದಿದ್ದರೂ ಆರ್ ಅಶ್ವಿನ್ ಅವರ ಸಾಧನೆ ಅಮೋಘವಾದದ್ದು. ಅವರಿಗೆ ಹೆಚ್ಚಿನ ಅವಕಾಶಗಳು ದೊರೆತಿದ್ದರೆ ಈ ಮೊದಲೇ ಈ ದಾಖಲೆಯನ್ನು ಅವರು ಹಿಂದಿಕ್ಕುತ್ತಿದ್ದರು. ಆತನ ಸಾಧನೆಗೆ ನಾನು ಸಂತಸಪಡುತ್ತೇನೆ. ಆತನಿಂದ ಎಷ್ಟು ಕಾಳ ನಾನು ಎರಡನೇ ಸ್ಥಾನವನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯ. ನನ್ನ ಸಮಯ ಸರಿದಿದೆ" ಎಂದು ಕಪಿಲ್‌ದೇವ್ ಮಿಡ್‌ಡೇ ಪತ್ರುಕೆಗೆ ನೀಡಿದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

ಆರ್ ಅಶ್ವಿನ್ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಈ ಸಾಧನೆ ಮಾಡಿದರು. ಮೂರನೇ ದಿನದಲ್ಲಿಯೇ ಈ ಪಂದ್ಯವೂ ಅಂತ್ಯ ಕಂಡಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಚರಿತ್ ಅಸಲಂಕಾ ಅವರನ್ನು 20 ರನ್‌ಗಳಿಸಿದ್ದಾಗ ಔಟ್ ಮಾಡಿ ಈ ಸಾಧನೆ ಮಾಡಿದರು. ಈ ಪಂದ್ಯದಲ್ಲಿ ಆರ್ ಅಶ್ವಿನ್ 6 ವಿಕೆಟ್‌ಗಳನ್ನು ಕಬಳಿಸುವಲ್ಲಿ ಯಶಸ್ವಿಯಾಗಿದ್ದು ಭಾರತ ಪಂದ್ಯವನ್ನು ಗೆಲ್ಲುವ ಮೂಲಕ 1-0 ಅಂತರದಿಂದ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.

ಭಾರತ vs ಶ್ರೀಲಂಕಾ: ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಟಿಕೆಟ್ಸ್ ಸೋಲ್ಡ್ಔಟ್ಭಾರತ vs ಶ್ರೀಲಂಕಾ: ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಟಿಕೆಟ್ಸ್ ಸೋಲ್ಡ್ಔಟ್

ಸ್ಪಿನ್ ಮಾಂತ್ರಿಕನ ನಿಧನಕ್ಕೆ ಶೋಕ ಸಾಗರದಲ್ಲಿ ಕ್ರೀಡಾ ಜಗತ್ತು!! | Oneindia Kannada

ಈ ಸಾಧನೆಯ ಬಗ್ಗೆ ಕಪಿಲ್‌ದೇವ್ ಮಾತನಾಡಿದ್ದು ಆರ್ ಅಶ್ವಿನ್ ಓರ್ವ ಅದ್ಭುತವಾದ ಹಾಗೂ ಬುದ್ದಿವಂತಿಕೆಯ ಸ್ಪಿನ್ನರ್ ಆಗಿದ್ದಾರೆ. ಈಗ ಅವರ ಮುಂದಿನ ಗುರಿ 500 ಟೆಸ್ಟ್ ವಿಕೆಟ್‌ಗಳಾಗಿದ್ದು ಅವರು ಅದನ್ನು ಖಂಡಿತಾ ಸಾಧಿಸಲಿದ್ದಾರೆ. ಅದಕ್ಕಿಂತಲೂ ಬಹಳ ಹೆಚ್ಚಿನ ವಿಕೆಟ್‌ಗಳು ಅವರ ಪಾಲಾಗಲಿದೆ" ಎಂದು ಕಪಿಲ್‌ದೇವ್ ಭವಿಷ್ಯ ನುಡಿದಿದ್ದಾರೆ.

ಈ ಸಾಧನೆಯಿಂದಿಗೆ ಆರ್ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಟಾಪ್ 10ರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ದಿಗ್ಗಜ ಕಪಿಲ್‌ದೇವ್ ಅವರ ಮೈಲುಗಲ್ಲನ್ನು ಹಿಂದಿಕ್ಕಿದ ಬಳಿಕ ಅಶ್ವಿನ್ ಭಾವನಾತ್ಮಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು. "28 ವರ್ಷಗಳ ಹಿಂದೆ ಶ್ರೇಷ್ಠ ಆಟಗಾರ ಕಪಿಲ್‌ದೇವ್ ವಿಕೆಟ್‌ಗಳ ದಾಖಲೆಯನ್ನು ಬರೆದಾಗ ಅವರಿಗಾಗಿ ನಾನು ಚಿಯರ್ ಮಾಡುತ್ತಿದ್ದೆ" ಎಂದು ಬರೆದಿದ್ದಾರೆ. ನಂತರ ಆರ್ ಅಶ್ವಿನ್ "ನಾನು ಆಫ್ ಸ್ಪಿನ್ನರ್ ಆಗುತ್ತೇನೆ, ನನ್ನ ದೇಶಕ್ಕಾಗಿ ಆಡುತ್ತೇನೆ ಮತ್ತು ಶ್ರೇಷ್ಠ ಕ್ರಿಕೆಟಿಗನ ವಿಕೆಟ್‌ಗಳ ಸಂಖ್ಯೆಯನ್ನು ಮೀರಿ ಹೋಗುತ್ತೇನೆ ಎಂಬ ಸಣ್ಣ ಕಲ್ಪನೆಯೂ ನನಗೆ ಇರಲಿಲ್ಲ. ಈ ಆಟವು ಇಲ್ಲಿಯವರೆಗೆ ನನಗೆ ನೀಡಿದ ಎಲ್ಲಾ ಸಂಗತಿಗಳಿಗೂ ನಾನು ಸಂತೋಷಪಡುತ್ತೇನೆ ಮತ್ತು ತುಂಬಾ ಕೃತಜ್ಞನಾಗಿದ್ದೇನೆ" ಎಂದು ಆರ್ ಅಶ್ವಿನ್ ಬರೆದುಕೊಂಡಿದ್ದರು.

Story first published: Tuesday, March 8, 2022, 9:59 [IST]
Other articles published on Mar 8, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X