"ತಂಡದಲ್ಲಿರುವ ಆಟಗಾರರಿಗೆ ಮಾಡುವ ಅವಮಾನ": ಪೃಥ್ವಿ ಶಾ ಸೇರ್ಪಡೆಗೆ ಕಪಿಲ್ ದೇವ್ ವಿರೋಧ

ಕನ್ನಡಿಗರನ್ನು ಕಡೆಗಣಿಸಿದ್ದಕ್ಕೆ ಕೋಪಗೊಂಡ ಕಪಿಲ್ ದೇವ್ | Oneindia Kannada

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್ ಸರಣಿಗೆ ತೆರಳಿರುವ ಭಾರತೀಯ ತಂಡದ ಆಟಗಾರ ಶುಬ್ಮನ್ ಗಿಲ್ ಗಾಯಗೊಂಡಿದ್ದು ಇಂಗ್ಲೆಂಡ್ ವಿರುದ್ಧದ ಸರಣಿಯಿಂದ ಸಂಪೂರ್ಣ ಹೊರಗುಳಿಯುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆರಂಭಿಕನಾಗಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ಆರಂಭವಾಗಿದೆ. ಮಯಾಂಕ್ ಅಗರ್ವಾಲ್ ಕೆಎಲ್ ರಾಹುಲ್ ಮಧ್ಯೆ ರೋಹಿತ್ ಶರ್ಮಾಗೆ ಆರಂಭಿಕನಾಗಿ ಯಾರು ಸಾಥ್ ನೀಡಲಿದ್ದಾರೆ ಎಂಬುದು ಪ್ರಶ್ನೆಯಾಗಿದೆ.

ಈ ಮಧ್ಯೆ ಶನಿವಾರದಿಂದ ಈ ಚರ್ಚೆಗೆ ಮತ್ತೊಂದು ಆಯಾಮ ದೊರೆತಿದೆ. ಶುಬ್ಮನ್ ಗಿಲ್ ಅಲಭ್ಯತೆಯ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗದ ಪೃಥ್ವಿ ಶಾ ಅವರನ್ನು ಕರೆತರಲು ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಯೋಚಿಸುತ್ತಿದೆ ಎನ್ನಲಾಗಿದೆ. ಇದಕ್ಕೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

2ನೇ ಹಂತದ ಐಪಿಎಲ್ 2021ರ ಪಂದ್ಯಗಳಲ್ಲಿ ಸ್ಟೀವ್ ಸ್ಮಿತ್ ಆಡುತ್ತಿಲ್ಲ!2ನೇ ಹಂತದ ಐಪಿಎಲ್ 2021ರ ಪಂದ್ಯಗಳಲ್ಲಿ ಸ್ಟೀವ್ ಸ್ಮಿತ್ ಆಡುತ್ತಿಲ್ಲ!

ಬೇರೆ ಆಟಗಾರರನ್ನು ಕರೆತರುವ ಅಗತ್ಯವಿಲ್ಲ

ಬೇರೆ ಆಟಗಾರರನ್ನು ಕರೆತರುವ ಅಗತ್ಯವಿಲ್ಲ

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ಮತ್ತೋರ್ವ ಆರಂಭಿಕ ಆಟಗಾರನನ್ನು ಕರೆತರುವ ನಿರ್ಧಾರಕ್ಕೆ ಕಪಿಲ್‌ದೇವ್ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿ ಯುನೈಟೆಡ್ ಕಿಂಗ್‌ಡಂನಲ್ಲಿರುವ 20 ಆಟಗಾರರನ್ನು ಹೊರತುಪಡಿಸಿ ಉಳೀದ ಆಟಗಾರರತ್ತ ಚಿತ್ತ ಹರಿಸುವ ಅಗತ್ಯವೇ ಇಲ್ಲ ಎಂದು ಕಪಿಲ್ ದೇವ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಆಯ್ಕೆಗಾರರಿಗೂ ನಾವು ಗೌರವ ನೀಡಬೇಕು

ಆಯ್ಕೆಗಾರರಿಗೂ ನಾವು ಗೌರವ ನೀಡಬೇಕು

"ನನ್ನ ಪ್ರಕಾರ ಬೇರೆ ಆರಂಭಿಕನನ್ನು ಸೇರ್ಪಡೆಗೊಳಿಸುವ ಯಾವುದೇ ಅಗತ್ಯಗಳು ಕಾಣಿಸುತ್ತಿಲ್ಲ. ಆಯ್ಕೆಗಾರರಿಗೂ ನಾವು ಗೌರವವನ್ನು ನೀಡಬೇಕಾಗುತ್ತದೆ. ಅವರು ತಂಡವನ್ನು ಆಯ್ಕೆ ಮಾಡಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ರವಿಶಾಸ್ತ್ರಿ ಅವರನ್ನು ಸಂಪರ್ಕಿಸದೆ ಈ ತಂಡವನ್ನು ಆಯ್ಕೆ ಮಾಡಿರುವುದಿಲ್ಲ. ನಿಮ್ಮ ಬಳಿ ಮಯಾಂಕ್ ಅಗರ್ವಾಲ್ ಹಾಗೂ ಕೆಎಲ್ ರಾಹುಲ್ ಅವರಂತಾ ಇಬ್ಬರು ಖ್ಯಾತ ಆರಂಭಿಕ ಆಟಗಾರರು ಇದ್ದಾರೆ. ನಿಜಕ್ಕೂ ಮೂರನೇ ಆರಂಭಿಕ ಆಟಗಾರನ ಆಯ್ಕೆಯ ಅಗತ್ಯವನ್ನು ಕಾಣುತ್ತಿದ್ದೀರಾ? ನನಗೆ ಇದು ಸರಿ ಎಂದು ಎನಿಸುತ್ತಿಲ್ಲ" ಎಂದು ಕಪಿಲ್ ದೇವ್ ತಮ್ಮ ನೇರ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಈ ಸಿದ್ಧಾಂತ ನನಗೆ ಅರ್ಥವಾಗುತ್ತಿಲ್ಲ!

ಈ ಸಿದ್ಧಾಂತ ನನಗೆ ಅರ್ಥವಾಗುತ್ತಿಲ್ಲ!

"ಈ ಸಿದ್ಧಾಂತ ನನಗೆ ಅರ್ಥವಾಗುತ್ತಿಲ್ಲ. ಅವರು ಆಯ್ಕೆ ಮಾಡಿದ ತಂಡ ಈಗಾಗಲೇ ಆರಂಭಿಕ ಆಟಗಾರರನ್ನು ಹೊಂದಿದೆ. ಹೀಗಾಗಿ ಆಡಬೇಕಾಗಿರುವವರು ಅವರೇ ಎಂದು ನಾನು ಭಾವಿಸುತ್ತೇನೆ. ಇಲ್ಲವಾದಲ್ಲಿ ಈಗಾಗಲೇ ತಂಡದಲ್ಲಿರುವ ಆಟಗಾರರನ್ನು ನೀವು ಅವಮಾನ ಮಾಡಿದಂತೆ" ಎಂದು ಕಪಿಲ್ ದೇವ್ ಈ ನಿರ್ಧಾರದ ಬಗ್ಗೆ ಕಿಡಿ ಕಾರಿದ್ದಾರೆ.

ನೀವು ಆಯ್ಕೆ ಮಾಡಿದ ಆಟಗಾರರಿಗೆ ಅವಮಾನ ಮಾಡುವಂತಿಲ್ಲ

ನೀವು ಆಯ್ಕೆ ಮಾಡಿದ ಆಟಗಾರರಿಗೆ ಅವಮಾನ ಮಾಡುವಂತಿಲ್ಲ

"ನನ್ನ ಪ್ರಕಾರ ಇದೊಂದು ತಪ್ಪು ದಾರಿಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ. ನೀವು ಆಯ್ಕೆ ಮಾಡಿದ ಆಟಗಾರರನ್ನು ನೀವು ಅವಮಾನ ಮಾಡುವಂತಿಲ್ಲ. ಅವರು ಅತ್ಯುತ್ತಮ ಆಟಗಾರರು. ಈ ರೀತಿಯ ಬೆಳವಣಿಗೆ ನಡೆಯುವುದನ್ನು ನಾನು ಬಯಸುವುದಿಲ್ಲ. ಇಲ್ಲಿ ಯಾವುದೇ ವಿವಾದಗಳು ಅನಗತ್ಯ" ಎಂದಿದ್ದಾರೆ ಕಪಿಲ್ ದೇವ್.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Sunday, July 4, 2021, 11:20 [IST]
Other articles published on Jul 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X