ರಣಜಿ ಕ್ರಿಕೆಟ್: ಯುಪಿ ವಿರುದ್ಧದ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟ

Posted By:

ಬೆಂಗಳೂರು, ನವೆಂಬರ್ 13 : ಉತ್ತರ ಪ್ರದೇಶ ಹಾಗೂ ರೈಲ್ವೇಸ್ ವಿರುದ್ಧ ನಡೆಯಲಿರುವ ರಣಜಿ ಪಂದ್ಯಗಳಿಗೆ 15 ಸದಸ್ಯರನ್ನೊಳಗೊಂಡ ಕರ್ನಾಟಕ ತಂಡ ಪ್ರಕಟಗೊಂಡಿದೆ.

ಶತಕ ವಂಚಿತ ರಾಹುಲ್, ದೆಹಲಿ ವಿರುದ್ಧ ರಾಜ್ಯಕ್ಕೆ 3 ಅಂಕ

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗಾಗಿ ಭಾರತ ತಂಡಕ್ಕೆ ಹಿಂದಿರುಗಿದ ಕೆ.ಎಲ್.ರಾಹುಲ್ ಬದಲಿಗೆ ಡಿ.ನಿಶ್ಚಲ್ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನುಳಿದಂತೆ ದೆಹಲಿ ವಿರುದ್ಧದ ಪಂದ್ಯದಲ್ಲಿ ಆಡಿದ ಆಟಗಾರರನ್ನೆ ಉಳಿಸಿಕೊಳ್ಳಲಾಗಿದೆ.

Karnataka announce squad for-ranji trophy against up and railways

ಕರ್ನಾಟಕ ತಂಡ ಇದೇ ನವೆಂಬರ್ 17 ರಿಂದ 20 ರವರೆಗೆ ಉತ್ತರ ಪ್ರದೇಶ ಮತ್ತು ನವೆಂಬರ್ 25 ರಿಂದ 28 ರವರೆಗೆ ರೈಲ್ವೇಸ್ ವಿರುದ್ಧ ಸೆಣಸಲಿದೆ.

ಈಗಾಗಲೇ ಮೂರು ಗೆಲುವು ಹಾಗೂ ಒಂದು ಪಂದ್ಯದಲ್ಲಿ ಡ್ರಾ ಸಾಧಿಸಿ 'ಎ' ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಆರ್. ವಿನಯ್ ಕುಮಾರ್ ನೇತೃತ್ವದ ಕರ್ನಾಟಕ ತಂಡ ರೈಲ್ವೇಸ್ ವಿರುದ್ಧ ಗೆಲ್ಲುವ ವಿಶ್ವಾಸದಲ್ಲಿದೆ.

ಕರ್ನಾಟಕ ತಂಡ ಇಂತಿದೆ: ವಿನಯ್ ಕುಮಾರ್ (ನಾಯಕ), ಮಯಾಂಕ್, ಸಮರ್ಥ್, ನಿಶ್ಚಲ್ ಡಿ, ಕರುಣ್, ಮನೀಶ್ ಪಾಂಡೆ, ಬಿನ್ನಿ, ಕೆ. ಗೌತಮ್, ಶ್ರೇಯಸ್ ಗೋಪಾಲ್, ಮಿಥುನ್, ಸಿ.ಎಂ. ಗೌತಮ್, ಪವನ್, ಸುಚಿತ್, ರೋನಿತ್, ಶರತ್ ಶ್ರೀನಿವಾಸ್.

Story first published: Monday, November 13, 2017, 23:11 [IST]
Other articles published on Nov 13, 2017
Please Wait while comments are loading...