ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಓ....ಮೈ... ಗಾಡ್... ಆರು ಬಾಲ್‌ಗೆ ಐದು ವಿಕೆಟ್ ಕಿತ್ತ ಕರ್ನಾಟಕದ ಅಭಿಮನ್ಯು!!

Abhimanyu Mithun bowls a magical over and takes 5 wickets in 6 balls | Oneindia Kannada
karnataka bowler abhimanyu mithun on fir

ಕರ್ನಾಟಕ ಮತ್ತು ಹರಿಯಾಣ ನಡುವೆ ಸೆಮಿಫೈನಲ್ ಕದನ ನಡೆಯುತ್ತಿದೆ. ಪಂದ್ಯದ ಆರಂಭದಲ್ಲಿ ಭಾರತದ ಬೌಲರ್‌ಗಳನ್ನು ಬೆವರಿಸಿಳಿದ ಹರಿಯಾಣ ಪಂದ್ಯವನ್ನು ಸಂಪೂರ್ಣ ತನ್ನ ಹಿಡಿತಕ್ಕೆ ತೆಗೆದುಕೊಂಡಿತ್ತು. 220ರ ಗಡಿ ದಾಟುವ ಸೂಚನೆಯನ್ನು ನೀಡಿತ್ತು. ಆದರೆ ಅಂತಿಮ ಓವರ್ ಎಸೆಲು ಬಂದ ಅಭಿಮನ್ಯು ಮಿಥುನ್ ಕಮಾಲ್ ಮಾಡಿದಿದರು.

ಅಂತಿಮ ಓವರ್‌ನಲ್ಲಿ ಅಭಿಮನ್ಯು ಮಿಥುಮ್ ಹ್ಯಾಟ್ರಿಕ್ ಸಹಿತ ಐದು ವಿಕೆಟ್‌ ಕಿತ್ತು ದಾಖಲೆ ಮಾಡಿದ್ದಾರೆ. ಮೊದಲ ನಾಲ್ಕು ಎಸೆತಗಳಲ್ಲಿ ಸತತ ನಾಲ್ಕು ವಿಕೆಟ್ ಪಡೆದರೆ ಅಂತಿಮ ಎಸೆತದಲ್ಲೂ ವಿಕೆಟನ್ನು ಪಡೆದು ಹರಿಯಾಣವನ್ನು 194ರನ್ನಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು.

ಭರ್ಜರಿ ಆಟವಾಡಿ ಇನ್ನೂರರ ಗಡಿ ದಾಟುವ ಪ್ರಯತ್ನದಲ್ಲಿದ್ದ ಹರಿಯಾಣದ ಪರವಾಗಿ ಸ್ಪೋಟಕವಾಗಿ ಆಡುತ್ತಿದ್ದ ಹಿಮಾನ್ಶು ರಾಣಾ ಅವರನ್ನು ಮೊದಲ ಎಸೆತಕ್ಕೇ ಔಟ್‌ ಮಾಡಿದರು. ಮುಂದಿನ ಎಸೆತಕ್ಕೆ ಹಿಮಾನ್ಶುಗೆ ಉತ್ತಮ ಸಾಥ್ ನೀಡುತ್ತಿದ್ದ ರಾಹುಲ್ ತೆವಾಟಿಯಾ ಅವರನ್ನು ಮಿಥುನ್ ಬಲಿ ಪಡೆದರು. ಮುಂದಿನ ಎಸೆತಕ್ಕೆ ಸುಮಿತ್ ಕುಮಾರ್ ಅವರನ್ನು ಔಟ್‌ ಮಾಡಿದ ಮಿಥುನ್ ಹ್ಯಾಟ್ರಿಕ್ ಸಾಧಿಸಿ ಸಂಭ್ರಮಿಸಿದ್ರು.

ಹ್ಯಾಟ್ರಿಕ್‌ಗೇ ಮುಗೀತು ಅಂದುಕೊಂಡ್ರೆ ಮಿಥುನ್ ಮುಂದಿನ ಎಸೆತದಲ್ಲಿ ಮತ್ತೊಂದು ವಿಕೆಟ್ ಬುಟ್ಟಿಗೆ ಹಾಕಿಕೊಂಡರು. ಅಲ್ಲಿಗೆ ಸತತ ನಾಲ್ಕು ಎಸೆತಕ್ಕೆ ನಾಲ್ಕು ವಿಕೆಟ್ ಕಿತ್ತು ಹರಿಯಾಣದ ಇನ್ನೂರರ ಕನಸಿಗೆ ಎಳ್ಳು ನೀರು ಬಿಟ್ಟಿದ್ದರು. 5ನೇ ಎಸತಕ್ಕೆ ಜಿತೇಂದ್ರ ಸರೋಹ ಒಂದು ರನ್ ಕದಿಯುವಲ್ಲಿ ಯಶಸ್ಸಾದರು. ಕಡೆಯ ಎಸೆತವನ್ನು ಎದುರಿಸಲು ಕ್ರೀಸ್‌ನಲ್ಲಿದ್ದಿದ್ದು ಜಯಂತ್ ಯಾದವ್. ಬೀಸಿ ಹೊಡೆಯುವ ಪ್ರಯತ್ನ ಮಾಡಿದ ಜಯಂತ್ ಯಾದವ್ ಕೂಡ ಕೀಪರ್ ಕೆ ಎಲ್ ರಾಹುಲ್ ಕೈಗೆ ಕ್ಯಾಚ್ ನೀಡಿ ಔಟಾದರು.

ಕಡೆಯ ಓವರ್‌ನಲ್ಲಿ ಕನಿಷ್ಠ ಇಪ್ಪತ್ತು ರನ್‌ಗಳ ಗುರಿ ಹೊಂದಿದ್ದ ಹರಿಯಾಣ ಕೇವಲ ಒಂದು ರನ್‌ಗಳಿಸಿ ಐದು ವಿಕೆಟ್ ಕಳೆದುಕೊಂಡಿತು. ಅಂತಿಮವಾಗಿ 194 ರನ್‌ಗೆ 8 ವಿಕೆಟ್ ಕಳೆದುಕೊಂಡಿದೆ. ಹರಿಯಾಣ ನೀಡಿದ ಈ ಗುರಿ ಬೆನ್ನತ್ತಿರುವ ಕರ್ನಾಟಕ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಭರ್ಜರಿಯಾಗಿ ಗೆದ್ದುಕೊಂಡಿದೆ.

Story first published: Friday, November 29, 2019, 17:38 [IST]
Other articles published on Nov 29, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X