ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'19 ಕೋಟಿಗೆ ತಕ್ಕ ಆಟ ಬರಲಿಲ್ಲ': ಇಬ್ಬರು ಸ್ಟಾರ್ ಆಟಗಾರರನ್ನು ಕೈಬಿಡಲು ಮುಂದಾದ 'ಕಿಂಗ್ಸ್'

Kings xi punjab decide to release glenn maxwell and Sheldon Cottrell in Ipl 2020

ಐಪಿಎಲ್ 2020ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಉತ್ತಮ ಪ್ರದರ್ಶನ ನೀಡಿದೆ. ಆರಂಭಿಕ ಹಂತದಲ್ಲಿ ಗೆಲ್ಲುವ ಪಂದ್ಯಗಳನ್ನು ಕೈಚೆಲ್ಲಿದ್ದರಿಂದ ಕೊನೆಯಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿತ್ತು. ಒಳ್ಳೆಯ ಹೋರಾಟ ಮಾಡಿದರೂ ಪ್ಲೇ ಆಫ್ ಹಂತ ತಲುಪಲಿಲ್ಲ.

ಆಟಗಾರರ ವಿಚಾರದಲ್ಲಿ ಕಿಂಗ್ಸ್ ತಂಡ ಕೆಲವು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿತ್ತು ಎಂಬ ಅಭಿಪ್ರಾಯಗಳು ಕೇಳಿ ಬಂದಿತ್ತು. ಪ್ರಮುಖವಾಗಿ ಆಸ್ಟ್ರೇಲಿಯಾ ತಂಡದ ಆಲ್‌ ರೌಂಡರ್ ಗ್ಲೇನ್ ಮ್ಯಾಕ್ಸ್ ವೆಲ್ ಮತ್ತು ವೆಸ್ಟ್ ಇಂಡೀಸ್ ತಂಡದ ಶೇನ್ ಕಾಟ್ರೆಲ್ ಅವರಿಂದ ನಿರೀಕ್ಷೆಯ ಆಟ ಬಂದಿಲ್ಲ.

Kings xi punjab decide to release glenn maxwell and Sheldon Cottrell in Ipl 2020

ಇದು ಸಹಜವಾಗಿ ಕಿಂಗ್ಸ್ ಮ್ಯಾನೇಜ್‌ಮೆಂಟ್ ನಿರಾಸೆಯಾಗಿದೆ. ಮ್ಯಾಕ್ಸ್ ವೆಲ್ 10.75 ಕೋಟಿ ಮತ್ತು ಕಾಟ್ರೆಲ್ ಅವರಿಗೆ 8.5 ಕೋಟಿ ನೀಡಿ ಖರೀದಿಸಿದ್ದರು. ಈ ಇಬ್ಬರು ಮೇಳೆ 19 ಕೋಟಿ ಹೂಡಿದ್ದರು. ಆದ್ರೆ, ಅದಕ್ಕೆ ತಕ್ಕಂತೆ ಆಟ ಪ್ರದರ್ಶಿಸಿಲ್ಲ.

ಐಪಿಎಲ್ 2021: ವರ್ಲ್ಡ್ ಟಾಪ್ ಬೌಲರ್‌ಗೆ ಆಫರ್ ನೀಡಿದ ಕಿಂಗ್ಸ್ ಪಂಜಾಬ್ಐಪಿಎಲ್ 2021: ವರ್ಲ್ಡ್ ಟಾಪ್ ಬೌಲರ್‌ಗೆ ಆಫರ್ ನೀಡಿದ ಕಿಂಗ್ಸ್ ಪಂಜಾಬ್

ಹಾಗಾಗಿ, 2021ರ ಹರಾಜಿನಲ್ಲಿ ಈ ಇಬ್ಬರು ಆಟಗಾರರನ್ನು ತಂಡದಿಂದ ಕೈಬಿಡಲು ಪಂಜಾಬ್ ತಂಡ ನಿರ್ಧರಿಸಿದೆ ಎಂಬ ಸುದ್ದಿ ಹೊರಬಿದ್ದಿದೆ. ಮ್ಯಾಕ್ಸ್ ವೆಲ್ ಆಡಿದ 13 ಪಂದ್ಯಗಳಲ್ಲಿ ಕೇವಲ 15.42 ಸರಾಸರಿಯಿಂದ 108 ರನ್ ಮಾತ್ರ ಗಳಿಸಿದ್ದರು.

Kings xi punjab decide to release glenn maxwell and Sheldon Cottrell in Ipl 2020

"ಇಬ್ಬರಿಂದಲೂ ನಿರೀಕ್ಷಿತ ಮಟ್ಟದ ಪ್ರದರ್ಶನ ಬರಲಿಲ್ಲ. ಅವರೊಂದಿಗೆ ಮುಂದುವರಿಯುವುದು ಕಠಿಣವಾಗಿರುತ್ತದೆ. ತಂಡದ ಪರಿಶೀಲನಾ ಸಭೆಯಲ್ಲಿ ಅವರ ಭವಿಷ್ಯದ ಬಗ್ಗೆ ಕರೆ ನಿರ್ಧರಿಸಲಾಗುವುದು'' ಎಂದು ಮೂಲಗಳು ತಿಳಿಸಿವೆ.

ಅಂದ್ಹಾಗೆ, 2021ರ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಐಪಿಎಲ್ ನಡೆಯಲಿದ್ದು, ಅದಕ್ಕೂ ಮುಂಚೆ ಹರಾಜು ಪ್ರಕ್ರಿಯೆ ನಡೆಯಲಿದೆ ಎನ್ನಲಾಗಿದೆ. ದೊಡ್ಡ ಮಟ್ಟದಲ್ಲಿ ಹರಾಜು ಪ್ರಕ್ರಿಯೆ ನಡೆಯದಿದ್ದರೂ ಸರಳವಾಗಿ ಆಕ್ಷನ್ ಆಯೋಜಿಸಬಹುದು.

Story first published: Tuesday, November 10, 2020, 20:44 [IST]
Other articles published on Nov 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X