ಕೆಕೆಆರ್ ಸ್ಪಿನ್ನರ್ ಕುಲ್‌ದೀಪ್ ಯಾದವ್‌ಗೆ ಗಾಯ, ಭಾರತಕ್ಕೆ ವಾಪಾಸ್: ವರದಿ

ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಪಿನ್ನರ್ ಕುಲ್‌ದೀಪ್ ಯಾದವ್ ಯುಎಇನಿಂದ ಭಾರತಕ್ಕೆ ವಾಪಾಸಾಗಿದ್ದಾರೆ ಎಂದು ವರದಿಯಾಗಿದೆ. ಕುಲ್‌ದೀಪ್ ಯಾದವ್‌ಗೆ ಅಭ್ಯಾಸದ ಸಂದರ್ಭದಲ್ಲಿ ಮುಣಕಾಲಿನ ಗಂಭೀರ ಗಾಯಕ್ಕೆ ಒಳಗಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಚೈನಾಮನ್ ಖ್ಯಾತಿಯ ಸ್ಪಿನ್ನರ್ ಕುಲ್ದೀಪ್ ಯಾದವ್ ಈ ಭಾರಿಯ ದೇಶೀಯ ಕ್ರಿಕೆಟ್ ಋತುವನ್ನು ಕೂಡ ಬಹುತೇಕ ಕಳೆದುಕೊಳ್ಳುವ ಸಾಧ್ಯತೆಯಿದೆ.

26ರ ಹರೆಯದ ಕುಲ್‌ದೀಪ್ ಯಾದವ್ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಕೆಕೆಆರ್ ತಂಡದ ಪರವಾಗಿ ಒಂದೇ ಒಂದು ಪ-ಂದ್ಯದಲ್ಲಿ ಕೂಡ ಆಡುವ ಅವಕಾಶವನ್ನು ಪಡೆದುಕೊಂಡಿಲ್ಲ. ಕೆಕೆಆರ್ ತಂಡ ವರುಣ್ ಚಕ್ರವರ್ತಿ ಹಾಗೂ ಸುನಿಲ್ ನರೈನ್‌ಗೆ ಅವಕಾಶ ನಿಡುತ್ತಿದ್ದು ಈ ಇಬ್ಬರು ಕೂಡ ಅದ್ಭುತವಾಗಿ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಕುಲ್‌ದೀಪ್ ಯಾದವ್‌ಗೆ ಆಡುವ ಬಳಗದಲ್ಲಿ ಸ್ಥಾನ ಇಲ್ಲದಂತಾಗಿತ್ತು. ಪಿಟಿಐ ವರದಿಯ ಪ್ರಕಾರ ಕುಲ್‌ದೀಪ್ ಯಾದವ್ ಮತ್ತೆ ಕ್ರಿಕೆಟ್‌ಗೆ ಮರಳುವ ಮುನ್ನ ಸುದೀರ್ಘ ರಿಹ್ಯಾಬಿಲಿಟೇಶನ್‌ನ ಅಗತ್ಯವಿದೆ.

ರೈನಾ ಹೊರಗಿಟ್ಟು ಈತನನ್ನೇ ಪ್ರಮುಖ ಬ್ಯಾಟರ್ ಆಗಿ ಕಣಕ್ಕಿಳಿಸಿ: ಮಂಜ್ರೇಕರ್ ಹೇಳಿದ ಅಚ್ಚರಿಯ ಹೆಸರು!ರೈನಾ ಹೊರಗಿಟ್ಟು ಈತನನ್ನೇ ಪ್ರಮುಖ ಬ್ಯಾಟರ್ ಆಗಿ ಕಣಕ್ಕಿಳಿಸಿ: ಮಂಜ್ರೇಕರ್ ಹೇಳಿದ ಅಚ್ಚರಿಯ ಹೆಸರು!

ಇನ್ನು ಪಿಟಿಐ ಈ ವಿಚಾರವಾಗಿ ಬಿಸಿಸಿಐ ಅಧಿಕಾರಿಯೊಬ್ಬರ ಪ್ರತಿಕ್ರಿಯೆಯನ್ನು ಉಲ್ಲೇಖಿಸಿದೆ. "ಹೌದು, ಕುಲದೀಪ್ ಯಾದವ್ ಯುಎಇನಲ್ಲಿ ಅಭ್ಯಾಸದ ಸಂದರ್ಭದಲ್ಲಿ ಮೊಣಕಾಲಿನ ಗಾಯಕ್ಕೆ ಒಳಗಾದ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ. ಫೀಲ್ಡಿಂಗ್ ಮಾಡುವಾಗ ಅವರ ಮೊಣಕಾಲು ಉಳುಕಿದೆ. ಇದು ಸ್ವಲ್ಪ ಗಂಭೀರವಾಗಿದ್ದಂತಿದೆ. ಹೀಗಾಗಿ ಅವರು ಟೂರ್ನಿಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ನಿರ್ಧರಿಸಿ ಭಾರತಕ್ಕೆ ವಾಪಾಸ್ ಕಳುಹಿಸಲಾಗಿದೆ" ಎಂದು ಬಿಸಿಸಿಐನ ಅಧಿಕಾರಿ ಪ್ರತಿಕ್ರಿಯಿಸಿದ್ದಾರೆ.

ಈ ಕೆಲಸ ಮಾಡಿದ್ರೆ ಧೋನಿ ಕಳಪೆ ಫಾರ್ಮ್‌ನಿಂದ ಹೊರಬಂದು ಹೆಚ್ಚು ರನ್ ಗಳಿಸಬಹುದು: ಗಂಭೀರ್ಈ ಕೆಲಸ ಮಾಡಿದ್ರೆ ಧೋನಿ ಕಳಪೆ ಫಾರ್ಮ್‌ನಿಂದ ಹೊರಬಂದು ಹೆಚ್ಚು ರನ್ ಗಳಿಸಬಹುದು: ಗಂಭೀರ್

ಮೂಲಗಳ ಮಾಹಿತಿಯ ಪ್ರಕಾರ ಮುಂಬೈನಲ್ಲಿ ಕುಲ್‌ದೀಪ್ ಯಾದವ್ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಬಳಿಕ ನಾಲ್ಕರಿಂದ ಆರು ತಿಂಗಳ ಕಾಲ ವಿಶ್ರಾಂತಿ ಅವರಿಗೆ ಅಗತ್ಯವಿದೆ ಎನ್ನಲಾಗಿದೆ. ಈ ಬಗ್ಗೆ ಐಪಿಎಲ್ ಮೂಲಗಳ ಹೇಳಿಕೆಯನ್ನು ಕೂಡ ಪಿಟಿಐ ಉಲ್ಲೇಖಿಸಿದೆ. "ಸಾಮಾನ್ಯವಾಗಿ ಮೊಣಕಾಲಿನ ಗಾಯಗಳು ಗಂಭೀರವಾಗಿರುತ್ತದೆ. ಸಾಮಾನ್ಯ ಸ್ಥಿತಿಗೆ ಮರಳಲು ಹೆಚ್ಚಿನ ಕಾಲಾವಕಾಶವನ್ನು ತೆಗೆದುಕೊಳ್ಳುತ್ತದೆ. ಅದಾದ ಬಳಿಕ ಸಾಮರ್ಥ್ಯವನ್ನು ವಾಪಾಸ್ ಪಡೆಯಲು ಎನ್‌ಸಿಎನಲ್ಲಿ ಫಿಸಿಯೋ ಥೆರಪಿಸ್ಟ್ ಜೊತೆ ಕಡಿಮೆ ತೀವ್ರತೆಯ ತೆರಬೇತಿಯನ್ನು ಆರಂಭಿಸಬೇಕಾಗುತ್ತದೆ. ಅದಾದ ನಂತರವೇ ಅವರು ನೆಟ್ ಅಭ್ಯಾಸದಲ್ಲಿ ಪಾಲ್ಗೊಳ್ಳಲು ಸಮರ್ಥರಾಗುತ್ತಾರೆ. ಹೀಗಾಗಿ ಮುಂಬರುವ ರಣಜಿ ಟ್ರೋಫಿ ಮುಕ್ತಾಯವಾಗುವ ಮುನ್ನ ಕುಲ್‌ದೀಪ್ ತಂಡಕ್ಕೆ ಮರಳುತ್ತಾರ ಎಂಬ ಬಗ್ಗೆ ಈಗಲೇ ಹೇಳುವುದು ಅಸಾಧ್ಯ" ಎಂದಿದ್ದಾರೆ.

ಸಾಕಷ್ಟು ವೈಫಲ್ಯವನ್ನು ಅನುಭವಿಸಿದ್ದ ಕುಲ್‌ದೀಪ್ ಯಾದವ್ ಇತ್ತೀಚೆಗೆ ತಂಡದಲ್ಲಿ ಸ್ಥಾನವನ್ನು ಪಡೆಯುವುದೇ ಕಠಿಣವಾಗಿತ್ತು. ಟೀಮ್ ಇಂಡಿಯಾ ಪರವಾಗಿ ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ಸರಣಿಯಲ್ಲಿ ಯಾದವ್ ಆಡಿದ್ದರು. ಆಡಿದ ಒಂದು ಏಕದಿನ ಪಂದ್ಯದಲ್ಲಿ 2/48 ವಿಕೆಟ್ ಪಡೆದಿದ್ದ ಕುಲ್ದೀಪ್ ಟಿ20ಯ ಒಂದು ಪಂದ್ಯದಲ್ಲಿ 2/30 ವಿಕೆಟ್ ಪಡೆದಿದ್ದರು. ಉಳಿದ ಎರಡು ಪಂದ್ಯಗಳಲ್ಲಿ ವಿಕೆಟ್ ಪಡೆಯದೆ ನಿರಾಸೆ ಅನುಭವಿಸಿದ್ದರು.

ಅರ್ಧಶತಕಕ್ಕಾಗಿ ಚೆನ್ನೈ ವಿರುದ್ಧ ಬ್ಯಾಟ್ ಬೀಸಿದ್ರಾ ಕೊಹ್ಲಿ?; ಮಾಜಿ ಕ್ರಿಕೆಟಿಗನ ಅಸಮಾಧಾನಅರ್ಧಶತಕಕ್ಕಾಗಿ ಚೆನ್ನೈ ವಿರುದ್ಧ ಬ್ಯಾಟ್ ಬೀಸಿದ್ರಾ ಕೊಹ್ಲಿ?; ಮಾಜಿ ಕ್ರಿಕೆಟಿಗನ ಅಸಮಾಧಾನ

ಮಾಡು ಇಲ್ಲವೇ ಮಡಿ ಪಂದ್ಯ ಇದು | Oneindia Kannada

ಸಂವಹನ ಸಮಸ್ಯೆ ಬಗ್ಗೆ ಮಾತನಾಡಿದ್ದ ಕುಲ್‌ದೀಪ್: ಇನ್ನು ಈ ಬಾರಿಯ ಐಪಿಎಲ್ ಆವೃತ್ತಿಯ ಆರಂಭವಾಗುವುದಕ್ಕೆ ಕೆಲವೇ ದಿನಗಳ ಮುನ್ನ ಕುಲ್ದೀಪ್ ಕೆಕೆಆರ್ ತಂಡದಲ್ಲಿ ಆಗುತ್ತಿರುವ ಸಮಸ್ಯೆಯ ಬಗ್ಗೆ ಹೇಳಿಕೊಂಡಿದ್ದರು. ಇಯಾನ್ ಮಾರ್ಗನ್ ತಂಡದ ನಾಯಕನಾಗಿರುವುದರಿಮದ ತಂಡದಲ್ಲಿ ಸಂವಹನದ ಸಮಸ್ಯೆಯಾಗುತ್ತಿದೆ. ಭಾಷೆಯ ಸಮಸ್ಯೆಯಿರುವುದರಿಂದ ನಾಯಕನ ಬಳಿ ಸೂಕ್ತ ರೀತಿಯಲ್ಲಿ ಸಂವಹನ ನಡೆಸಲು ಸಾಧ್ಯವಾಗುತ್ತಿಲ್ಲ ಎಂದಿದ್ದರು.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 22 - October 28 2021, 07:30 PM
ಆಸ್ಟ್ರೇಲಿಯಾ
ಶ್ರೀಲಂಕಾ
Predict Now

For Quick Alerts
ALLOW NOTIFICATIONS
For Daily Alerts
Story first published: Monday, September 27, 2021, 17:50 [IST]
Other articles published on Sep 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X