ಬರ್ತ್‌ ಡೇ ಪರವಾಗಿ ಭಾರತೀಯರಿಗೆ ಅರ್ಥಪೂರ್ಣ ಗಿಫ್ಟ್‌ಕೊಟ್ಟ ಕೆಎಲ್ ರಾಹುಲ್!

ಬೆಂಗಳೂರು, ಏಪ್ರಿಲ್ 20: ಲಂಡನ್‌ನಲ್ಲಿ ಕಳೆದ ವರ್ಷ ನಡೆದಿದ್ದ ಐಸಿಸಿ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಬಳಸಿದ್ದ ಬ್ಯಾಟನ್ನು ಟೀಮ್ ಇಂಡಿಯಾದ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್, ಕನ್ನಡಿಗ ಕೆಎಲ್ ರಾಹುಲ್ ಹರಾಜಿಗಿಟ್ಟಿದ್ದಾರೆ. ಬಡ ಮಕ್ಕಳಿಗೆ ನೆರವು ನೀಡುವ ಉತ್ತಮ ಉದ್ದೇಶದಿಂದ ರಾಹುಲ್, ವಿಶ್ವಕಪ್ ಬ್ಯಾಟ್‌ ಹರಾಜಿಗಿಟ್ಟು ದೇಣಿಗೆ ಸಂಗ್ರಹಿಸಲು ಮುಂದಾಗಿದ್ದಾರೆ. ಮಂಗಳೂರಿನ ಕ್ರಿಕೆಟಿಗನ ಈ ಮಾನವೀಯ ನಡೆಗೆ ಕ್ರಿಕೆಟ್ ಪ್ರೇಮಿಗಳಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ಭಾರತದ ವೇಗಿಗೆ ಸಿಗಬೇಕಾದ ಮಾನ್ಯತೆ ಸಿಗಲಿಲ್ಲ ಎಂದು ಕನ್ನಡಿಗನ ಹೆಸರನ್ನು ಹೇಳಿದ ಶಾನ್ ಪೊಲಾಕ್ಭಾರತದ ವೇಗಿಗೆ ಸಿಗಬೇಕಾದ ಮಾನ್ಯತೆ ಸಿಗಲಿಲ್ಲ ಎಂದು ಕನ್ನಡಿಗನ ಹೆಸರನ್ನು ಹೇಳಿದ ಶಾನ್ ಪೊಲಾಕ್

ಏಪ್ರಿಲ್ 18ರ ಶನಿವಾರ ತನ್ನ 28ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ಕೆಎಲ್ ರಾಹುಲ್, ಇದೇ ದಿನ ಬಡತನದಲ್ಲಿರುವ ಮಕ್ಕಳಿಗೆ ನೆರವಾಗುವ ಸಂಸ್ಥೆಗೆ ತಾನು ಸಹಾಯ ಮಾಡಲು ಮುಂದಾಗಿರುವುದಾಗಿ ಹೇಳಿಕೊಂಡಿದ್ದರು.

ಮಾಜಿ ನಾಯಕ ಎಂಎಸ್ ಧೋನಿ-ಸಾಕ್ಷಿ ಧೋನಿಯ ಫೋಟೋ ವೈರಲ್ಮಾಜಿ ನಾಯಕ ಎಂಎಸ್ ಧೋನಿ-ಸಾಕ್ಷಿ ಧೋನಿಯ ಫೋಟೋ ವೈರಲ್

ಬ್ಯಾಟ್‌ ಜೊತೆಗೆ ಯಾವೆಲ್ಲ ವಸ್ತುಗಳನ್ನು ರಾಹುಲ್ ಹರಾಜಿಗಿಟ್ಟಿದ್ದಾರೆ? ಹರಾಜು ಆರಂಭ ಯಾವಾಗ ಎಂಬಿತ್ಯಾದಿಗಳನ್ನು ಕೆಳಗೆ ವಿವರಿಸಿದ್ದೇವೆ.

ಅವೇರ್ ಫೌಂಡೇಶನ್‌ಗೆ ದೇಣಿಗೆ

ಅವೇರ್ ಫೌಂಡೇಶನ್‌ಗೆ ದೇಣಿಗೆ

'ನನ್ನ ಕ್ರಿಕೆಟ್ ಪ್ಯಾಡ್‌ಗಳು, ಗ್ಲೌಸ್‌ಗಳು, ಹೆಲ್ಮೆಟ್‌ಗಳು ಮತ್ತು ಕೆಲವು ಜೆರ್ಸಿಗಳನ್ನು ನಮ್ಮ ಸಹಯೋಗ ಪಾಲುದಾರ ಭಾರತ್ ಆರ್ಮಿಗೆ ಕೊಡುಗೆಯಾಗಿ ನೀಡಲು ಬಯಸಿದ್ದೇನೆ. ಅವರು ಇವೆಲ್ಲವನ್ನೂ ಹರಾಜಿಗಿಟ್ಟು ಅವೇರ್ ಫೌಂಡೇಶನ್‌ಗೆ ದೇಣಿಗೆ ಸಂಗ್ರಹಿಸಲಿದ್ದಾರೆ,' ಎಂದು ರಾಹುಲ್ ಹೇಳಿದ್ದಾರೆ.

ಬೇರೆ ದಾರಿ ನನಗೆ ಕಾಣಿಸುತ್ತಿಲ್ಲ

ಬೇರೆ ದಾರಿ ನನಗೆ ಕಾಣಿಸುತ್ತಿಲ್ಲ

'ಅವೇರ್ ಫೌಂಡೇಶನ್ ಬಡ ಮಕ್ಕಳಿಗೆ ಸಹಾಯ ಮಾಡುತ್ತಿದೆ. ಹೀಗಾಗಿ ಈ ನಿರ್ಧಾರ ನನ್ನ ಪಾಲಿಗೆ ವಿಶೇಷವೆನಿಸಿದೆ. ಮಕ್ಕಳಿಗೆ ನೆರವು ನೀಡುವುದಕ್ಕಾಗಿ ಇದಕ್ಕಿಂತ ಉತ್ತಮವಾದ ಬೇರೆ ದಾರಿ ನನಗೆ ಕಾಣಿಸುತ್ತಿಲ್ಲ,' ಎಂದು ರಾಹುಲ್ ಖುಷಿ ತೋರಿಕೊಂಡಿದ್ದಾರೆ.

ಯಾವತ್ತಿಂದ ಹರಾಜು ಆರಂಭ?

ಯಾವತ್ತಿಂದ ಹರಾಜು ಆರಂಭ?

ಕೆಎಲ್ ರಾಹುಲ್ ಅವರ ಕ್ರಿಕೆಟ್ ಸಾಮಗ್ರಿಗಳಿಗೆ ಸೋಮವಾರ (ಏಪ್ರಿಲ್ 20)ದಿಂದ ಹರಾಜು ಆರಂಭವಾಗಲಿದೆ. ಹರಾಜಿಗಿಟ್ಟ ವಸ್ತುಗಳಲ್ಲಿ ರಾಹುಲ್ ಸಹಿಯಿರುವ 2019ರ ವಿಶ್ವಕಪ್ ಬ್ಯಾಟ್, ಟೆಸ್ಟ, ಏಕದಿನ ಮತ್ತು ಟಿ20 ಪಂದ್ಯಗಳ ಜೆರ್ಸಿ, ಬ್ಯಾಟಿಂಗ್‌ ಗ್ಲೌಸ್, ಹೆಲ್ಮೆಟ್ ಇರಲಿದೆ.

ರಾಹುಲ್ ಪ್ರೀತಿಯ ಸಂದೇಶ

ರಾಹುಲ್ ಪ್ರೀತಿಯ ಸಂದೇಶ

'ಹರಾಜಿನತ್ತ ಹೋಗಿ, ನನ್ನ ಮತ್ತು ಮಕ್ಕಳತ್ತ ಕೊಂಚ ಪ್ರೀತಿ ತೋರಿಸಿ. ಇಂಥ ಸಂಕಷ್ಟದ ಸಮಯದಲ್ಲಿ ನಾವೆಲ್ಲರೂ ಗಟ್ಟಿಯಾಗಬೇಕು. ನಾವೆಲ್ಲರೂ ಧೈರ್ಯದಿಂದಲೇ ಈ ಸಂದರ್ಭವನ್ನು ಎದುರಿಸಬೇಕಿದೆ,' ಎಂದು ಕೆಎಲ್ ರಾಹುಲ್ ಚಂದದ ಸಂದೇಶ ಅಭಿಮಾನಿಗಳಿಗೆ ನೀಡಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Monday, April 20, 2020, 18:39 [IST]
Other articles published on Apr 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X