ಭರ್ಜರಿ ಫಾರ್ಮ್‌ನಲ್ಲಿ ಕೆ.ಎಲ್ ರಾಹುಲ್: ಕೊಹ್ಲಿ ದಾಖಲೆ ಮುರಿದ ಕನ್ನಡಿಗ

IIND vs NZ 5th T20 : Rahul breaks Kohli's record | K L Rahul | Virat Kohli | Oneindia kannada

ಟೀಮ್ ಇಂಡಿಯಾ ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯನ್ನು 5-0 ಅಂತರದಿಂದ ವಶಕ್ಕೆ ಪಡೆದುಕೊಂಡಿದೆ. ಈ ಮೂಲಕ ನ್ಯೂಜಿಲ್ಯಾಂಡ್‌ ತಂಡಕ್ಕೆ ತವರಿನಲ್ಲೇ ಭಾರೀ ಮುಖಭಂಗ ಅನುಭವಿಸುವಂತೆ ಮಾಡಿದೆ. ಟೀಮ್ ಇಂಡಿಯಾ ಎಲ್ಲಾ ವಿಭಾಗಗಳಲ್ಲೂ ಈ ಸರಣಿಯಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿದೆ.

ಆದರೆ ಈ ಸರಣಿಯಲ್ಲಿ ಕನ್ನಡಿಗ ರಾಹುಲ್ ಅದ್ಭುತ ಪ್ರದರ್ಶನವನ್ನು ನೀಡಿದ್ದಾರೆ. ಅಂತಿಮ ಪಂದ್ಯದಲ್ಲೂ 45 ರನ್‌ಗಳಿಸುವ ಮೂಲಕ ರಾಹುಲ್ ಅರ್ಧ ಶತಕದ ಅಂಚಿನಲ್ಲಿ ಎಡವಿದರು. ನಾಯಕ ರೋಹಿತ್ ಶರ್ಮಾಗೆ ಈ ಪಂದ್ಯದಲ್ಲಿ ಉತ್ತಮವಾಗಿ ಸಾಥ್ ನೀಡಿದ್ದರು.

ಬ್ಯಾಟಿಂಗ್ ಆರ್ಡರ್ 6ರ ಬಗ್ಗೆ ತುಟಿ ಬಿಚ್ಚಿದ ಕನ್ನಡಿಗ ಮನೀಶ್ ಪಾಂಡೆಬ್ಯಾಟಿಂಗ್ ಆರ್ಡರ್ 6ರ ಬಗ್ಗೆ ತುಟಿ ಬಿಚ್ಚಿದ ಕನ್ನಡಿಗ ಮನೀಶ್ ಪಾಂಡೆ

ರಾಹುಲ್ ಈ ಸರಣಿಯಲ್ಲಿ ಎರಡು ಅರ್ಧ ಶತಕವನ್ನು ಸಿಡಿಸಿದ್ದಾರೆ. ಈ ಮೂಲಕ ತನ್ನ ಮೇಲಿಟ್ಟ ನಂಬಿಕೆಯನ್ನು ರಾಹುಲ್ ಉಳಿಸಿಕೊಂಡಿದ್ದಾರೆ. ಅಂತಿಮ ಪಂದ್ಯದಲ್ಲೂ ಭರ್ಜರಿ ಆಡುವ ಮೂಲಕ ದಾಖಲೆಯೊಂದನ್ನು ಮಾಡಿದ್ದಾರೆ ಕೆಎಲ್ ರಾಹುಲ್.

ರಾಹುಲ್ ದಾಖಲೆಯೇನು

ರಾಹುಲ್ ದಾಖಲೆಯೇನು

ಕೆ.ಎಲ್ ರಾಹುಲ್ ಸರಣಿಯಲ್ಲಿ ಒಟ್ಟಾರೆ 224 ರನ್‌ ಗಳಿಸಿದ್ದಾರೆ. ದ್ವಿಪಕ್ಷೀಯ ಟಿ20 ಸರಣಿಯಲ್ಲಿ ಇದು ಭಾರತೀಯ ಆಟಗಾರನೋರ್ವನ ಅತಿ ಹೆಚ್ಚು ರನ್‌ ಆಗಿದೆ. ಈ ಹಿಂದೆ ವಿರಾಟ್ ಕೊಹ್ಲಿ ಈ ದಾಖಲೆಯನ್ನು ತನ್ನ ಹೆಸರಿನಲ್ಲಿ ಬರೆದುಕೊಂಡಿದ್ದರು. 3 ಪಂದ್ಯಗಳ ಸರಣಿಯಲ್ಲಿ ಕೊಹ್ಲಿ 199 ರನ್ ಗಳಿಸಿದ್ದು ದಾಖಲೆಯಾಗಿತ್ತು.

ಒಟ್ಟಾರೆ 2ನೇ ಸ್ಥಾನದಲ್ಲಿ ರಾಹುಲ್

ಒಟ್ಟಾರೆ 2ನೇ ಸ್ಥಾನದಲ್ಲಿ ರಾಹುಲ್

ಕೆ.ಎಲ್ ರಾಹುಲ್ ಈ ದಾಖಲೆಯ ಪಟ್ಟಿಯಲ್ಲಿ ಒಟ್ಟಾರೆಯಾಗಿ ಎರಡನೇ ಸ್ಥಾನದಲ್ಲಿದ್ದಾರೆ. ಮೊದಲನೇ ಸ್ಥಾನದಲ್ಲಿ ಸರಣಿಯೊಂದರಲ್ಲಿ 233 ರನ್ ಗಳಿಸಿರುವ ಮೊಝಾಂಬಿಕ್ ದೇಶದ ಡ್ಯಾಮಿಯಾವೋ ಕುವಾನಾ ಎಂಬ ಆಟಗಾರ ಈ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಅಲಂಕರಿಸಿದ್ದಾರೆ. ಮೂರನೇ ಸ್ಥಾನದಲ್ಲಿ ನ್ಯೂಜಿಲ್ಯಾಂಡ್ ತಂಡದ ಕಾಲಿನ್ ಮನ್ರೋ ಇದ್ದಾರೆ.

ಸರಣಿಯಲ್ಲಿ ಎರಡು ಜವಾಬ್ಧಾರಿ ವಹಿಸಿಕೊಂಡು ಗೆದ್ದ ರಾಹುಲ್

ಸರಣಿಯಲ್ಲಿ ಎರಡು ಜವಾಬ್ಧಾರಿ ವಹಿಸಿಕೊಂಡು ಗೆದ್ದ ರಾಹುಲ್

ಈ ಸರಣಿಯಲ್ಲಿ ಕೆಎಲ್ ರಾಹುಲ್‌ಗೆ ಎರಡು ಜವಾಬ್ಧಾರಿಯನ್ನು ನೀಡಲಾಗಿತ್ತು. ಆರಂಭಿಕನಾಗಿ ಭಡ್ತಿ ಪಡೆದ ರಾಹುಲ್ ಈ ಸರಣಿಯುದ್ದಕ್ಕೂ ವಿಕೆಟ್ ಕೀಪರ್ ಆಗಿಯೂ ಜವಾಬ್ಧಾರಿಯನ್ನು ಹೊತ್ತಿದ್ದರು. ಈ ಎರಡೂ ಜವಾಬ್ಧಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿ ಮನಗೆದ್ದರು.

ಅಂತಿಮ ಪಂದ್ಯದಲ್ಲಿ ನಾಯಕನೂ ಆದ ರಾಹುಲ್

ಅಂತಿಮ ಪಂದ್ಯದಲ್ಲಿ ನಾಯಕನೂ ಆದ ರಾಹುಲ್

ಕೆಎಲ್ ರಾಹುಲ್ ತನಗೆ ನೀಡಿದ ಎಲ್ಲಾ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಈ ಮೂಲಕ ತಂಡದ ಆಪತ್ಭಾಂಧವ ಎಂಬ ಹೆಗ್ಗಳಿಕೆಯನ್ನೂ ಪಡೆದುಕೊಂಡಿದ್ದಾರೆ. ಇಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದ ಕಾರಣ ರೋಹಿತ್ ನಾಯಕರಾಗಿದ್ದರು. ಆದರೆ ಬ್ಯಾಟಂಗ್ ವೇಳೆ ಗಾಯಗೊಂಡಕಾರಣ ಫೀಲ್ಡಿಂಗ್ ವೇಳೆ ಅಂಗಳಕ್ಕೆ ಇಳಿಯಲಿಲ್ಲ. ಈ ಸಂದರ್ಭದಲ್ಲಿ ಬದಲಿ ನಾಯಕನಾಗಿಯೂ ರಾಹುಲ್ ಕರ್ತವ್ಯ ನಿರ್ವಹಿಸಿ ಸೈ ಎನಿಸಿಕೊಂಡರು.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 20 - October 27 2021, 03:30 PM
ಇಂಗ್ಲೆಂಡ್
ಬಾಂಗ್ಲಾದೇಶ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Sunday, February 2, 2020, 17:31 [IST]
Other articles published on Feb 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X