ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

100 ಎಸೆತಗಳ ಕ್ರಿಕೆಟ್ ಪ್ರಯೋಗಕ್ಕೆ ವಿರಾಟ್ ಕೊಹ್ಲಿ ಟೀಕೆ

virat kohli : 100 ಎಸೆತಗಳ ಕ್ರಿಕೆಟ್ ಪ್ರಯೋಗಕ್ಕೆ ಟೀಕೆ | Oneindia Kannada
Kohli hits out at 100-ball format: Commercial aspect hurting quality of cricket

ಲಂಡನ್, ಆಗಸ್ಟ್ 29: ವಾಣಿಜ್ಯಾತ್ಮಕ ಕಾರಣಗಳಿಂದಾಗಿ ಕ್ರಿಕೆಟ್ ತನ್ನ ಗುಣಮಟ್ಟವನ್ನು ಕಳೆದುಕೊಳ್ಳುತ್ತಿದೆ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

100 ಎಸೆತಗಳ ಚುಟುಕು ಕ್ರಿಕೆಟ್ ಟೂರ್ನಿಯ ಪ್ರಯೋಗ ನಡೆಸುವ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಪ್ರಸ್ತಾವವನ್ನು ಕೊಹ್ಲಿ ಟೀಕಿಸಿದ್ದಾರೆ.

'ನಾನು ಈಗಾಗಲೇ ಬೇಸರಗೊಂಡಿದ್ದೇನೆ. ಇದನ್ನು ಹತಾಶೆ ಎನ್ನುವುದಿಲ್ಲ. ಆದರೆ, ಈ ಪರಿಸ್ಥಿತಿ ನೀವು ನಿರಂತರವಾಗಿ ಹೆಚ್ಚು ಕ್ರಿಕೆಟ್ ಆಡುವುದನ್ನು ಅಪೇಕ್ಷಿಸುತ್ತದೆ. ಕ್ರಿಕೆಟ್‌ನ ನೈಜ ಗುಣಮಟ್ಟವನ್ನು ವಾಣಿಜ್ಯಾತ್ಮಕ ಅಂಶವು ಕಿತ್ತುಕೊಳ್ಳುತ್ತಿದೆ ಎಂದು ನನಗೆ ಅನಿಸುತ್ತಿದೆ. ಇದು ನನಗೆ ನೋವುಂಟು ಮಾಡುತ್ತಿದೆ' ಎಂದು ಕೊಹ್ಲಿ ವಿಸ್ಡನ್ ಕ್ರಿಕೆಟ್ ಮಾಸಿಕಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

 'ಇಸಿಬಿಯ 100 ಎಸೆತಗಳ ಕ್ರಿಕೆಟ್ 12 ವರ್ಷಗಳಿಗೂ ಹಳೆಯದು' 'ಇಸಿಬಿಯ 100 ಎಸೆತಗಳ ಕ್ರಿಕೆಟ್ 12 ವರ್ಷಗಳಿಗೂ ಹಳೆಯದು'

ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಗಳು ಸಹಯೋಗದಲ್ಲಿ 100 ಚೆಂಡುಗಳ ಹೊಸ ಮಾದರಿಯನ್ನು ಆರಂಭಿಸುತ್ತಿವೆ. ಇದು ಜಗತ್ತಿನ ಎಲ್ಲೆಡೆಯ ಕ್ರಿಕೆಟ್ ಮಂಡಳಿಗಳ ಗಮನ ಸೆಳೆಯುತ್ತಿದೆ. ಆದರೆ, ತಾವು ಕ್ರಿಕೆಟ್‌ನ ಇನ್ನೂ ಒಂದು ಮಾದರಿಯ ಭಾಗವಾಗಲಾರೆ ಎಂದು ಕೊಹ್ಲಿ ಸ್ಪಷ್ಟಪಡಿಸಿದ್ದಾರೆ.

ಈ ಹೊಸ ಮಾದರಿಯ ಸಂಪೂರ್ಣ ಪ್ರಕ್ರಿಯೆಯಲ್ಲಿ ಭಾಗಿಯಾದ ಜನರಲ್ಲಿ ಮತ್ತು ಅದರ ಸಂಯೋಜನೆಯಲ್ಲಿ ಈ ಬಗ್ಗೆ ಖಂಡಿತಾ ಕಾತರ ಇದೆ. ಆದರೆ, ಪ್ರಾಮಾಣಿಕವಾಗಿ ಹೇಳುವುದಾದರೆ ನಾನು ಇನ್ನೊಂದು ಹೊಸ ಮಾದರಿಯ ಕ್ರಿಕೆಟ್‌ನಲ್ಲಿ ಆಡಲಾರೆ ಎಂದಿದ್ದಾರೆ.

ನಾನು ಯಾವುದೇ ಹೊಸ ಮಾದರಿ ಕ್ರಿಕೆಟ್‌ನ ಪರೀಕ್ಷೆಯ ಕ್ರಿಕೆಟಿಗನಾಗಲು ಬಯಸುವುದಿಲ್ಲ. 100 ಚೆಂಡುಗಳ ಮಾದರಿಯ ಕ್ರಿಕೆಟ್‌ಅನ್ನು ಆರಂಭಿಸುವ ಮತ್ತು ಆಡುವ ವಿಶ್ವ ಇಲೆವೆನ್ ತಂಡದಲ್ಲಿ ನಾನು ಆಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಐಪಿಎಲ್ ಅಥವಾ ಬಿಗ್ ಬ್ಯಾಶ್ ಲೀಗ್‌ಗಳಿಗೂ 100 ಎಸೆತಗಳ ಕ್ರಿಕೆಟ್ ಮಾದರಿಗೂ ವ್ಯತ್ಯಾಸವಿದೆ ಎಂದು ಕೊಹ್ಲಿ ವಿವರಿಸಿದ್ದಾರೆ.

'ಐಪಿಎಲ್ ಆಡುವುದನ್ನು ಮತ್ತು ಬಿಗ್‌ಬ್ಯಾಶ್ ನೋಡುವುದನ್ನು ನಾನು ಇಷ್ಟಪಡುತ್ತೇನೆ. ಏಕೆಂದರೆ ಇಲ್ಲಿ ನೀವು ಯಾವುದಾದರೂ ಒಂದರ ಕುರಿತು ಕೆಲಸ ಮಾಡುತ್ತಿರುತ್ತೀರಿ, ಉತ್ತಮ ಗುಣಮಟ್ಟದ ತಂಡದ ಎದುರು ಸ್ಪರ್ಧಿಸುತ್ತಿರುತ್ತೀರಿ. ಇದರಿಂದ ನಿಮ್ಮಲ್ಲಿ ಸ್ಪರ್ಧಾತ್ಮಕತೆಯ ಹರಿವು ಇರುತ್ತದೆ. ಕ್ರಿಕೆಟಿಗನಾಗಿ ನಾವು ಬಯಸುವುದು ಇದನ್ನೇ. ನಾನು ಎಲ್ಲ ಲೀಗ್‌ಗಳಿಗೂ ಮುಕ್ತವಾಗಿದ್ದೇನೆ, ಆದರೆ ಪ್ರಯೋಗಗಳಿಗಲ್ಲ' ಎಂದಿದ್ದಾರೆ.

ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು 100 ಎಸೆತಗಳ ಹೊಸ ಮಾದರಿಯ ಕ್ರಿಕೆಟ್ ಯೋಜನೆಯ ಪ್ರಸ್ತಾವವನ್ನು ಐಸಿಸಿ ಮುಂದಿಟ್ಟಿದೆ. ಇದರಲ್ಲಿ 15 ಓವರ್‌ಗಳು ಎಂದಿನಂತೆಯೇ 6 ಎಸೆತಗಳದ್ದಾಗಿರಲಿದ್ದು, ಕೊನೆಯ ಓವರ್ 10 ಚೆಂಡಿನದ್ದಾಗಿರಲಿದೆ.

Story first published: Wednesday, August 29, 2018, 16:02 [IST]
Other articles published on Aug 29, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X