ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ Ranking: ಕೊಹ್ಲಿ ನಂ.1, ಪೂಜಾರ 3ನೇ ಸ್ಥಾನ, ಪೆರೆರಾ ದಾಖಲೆ ಜಿಗಿತ!

Kohli maintains top spot in ICC Test batsmen chart, Pujara in third spot

ನವದೆಹಲಿ, ಫೆಬ್ರವರಿ 18: ಐಸಿಸಿ ಪ್ರಕಟಿಸಿರುವ ಪುರುಷರ ವಿಭಾಗದ ನೂತನ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಅಗ್ರಸ್ಥಾನದಲ್ಲೇ ಮುಂದುವರೆದಿದ್ದಾರೆ. ಭಾರತದ ಮತ್ತೊಬ್ಬ ಬ್ಯಾಟ್ಸ್ಮನ್ ತೇಚೇಶ್ವರ ಪೂಜಾರ 3ನೇ ಸ್ಥಾನ ಪಡೆದುಕೊಂಡಿದ್ದಾರೆ.

ಡರ್ಬನ್: ಶ್ರೀಲಂಕಾಕ್ಕೆ ಐತಿಹಾಸಿಕ ಜಯ ತಂದಿತ್ತ ಕುಸಲ್ ಪೆರೇರಾಡರ್ಬನ್: ಶ್ರೀಲಂಕಾಕ್ಕೆ ಐತಿಹಾಸಿಕ ಜಯ ತಂದಿತ್ತ ಕುಸಲ್ ಪೆರೇರಾ

ಒಟ್ಟು 922 ರೇಟಿಂಗ್ ಪಾಯಿಂಟ್ಸ್ ಕಲೆ ಹಾಕಿರುವ ಕೊಹ್ಲಿ, ಟೆಸ್ಟ್ ರ್ಯಾಂಕಿಂಗ್‌ನ ನಂ.1 ಸ್ಥಾನದಲ್ಲಿದ್ದರೆ, ನ್ಯೂಜಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್ 897 ಪಾಯಿಂಟ್‌ಗಳೊಂದಿಗೆ ದ್ವಿತೀಯ ಮತ್ತು ಪೂಜಾರ 881 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಗೆ ವಿಂಡೀಸ್ ಸ್ಟಾರ್ ಬ್ಯಾಟ್ಸ್ಮನ್ ಗೇಲ್ ನಿರ್ಧಾರ!ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಗೆ ವಿಂಡೀಸ್ ಸ್ಟಾರ್ ಬ್ಯಾಟ್ಸ್ಮನ್ ಗೇಲ್ ನಿರ್ಧಾರ!

ನೂತನ ರ್ಯಾಂಕಿಂಗ್‌ನಲ್ಲಿ ಶ್ರೀಲಂಕಾ ಬ್ಯಾಟ್ಸ್ಮನ್ ಕುಸಾಲ್ ಪೆರೆರಾ ದಾಖಲೆಯ ಜಿಗಿತ ಕಂಡಿದ್ದಾರೆ. ಪೆರೆರಾ ಈಗ 40ನೇ ಸ್ಥಾನ ಆವರಿಸಿಕೊಂಡಿದ್ದಾರೆ.

58 ಸ್ಥಾನ ಜಿಗಿದ ಪೆರೆರಾ

58 ಸ್ಥಾನ ಜಿಗಿದ ಪೆರೆರಾ

ಶ್ರೀಲಂಕಾ ಬ್ಯಾಟ್ಸ್ಮನ್ ಕುಸಾಲ್ ಪೆರೆರಾ ಬರೋಬ್ಬರಿ 58 ಸ್ಥಾನಗಳ ಜಿಗಿತ ಕಾಣುವ ಮೂಲಕ ಗಮನ ಸೆಳೆದಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಶ್ರೀಲಂಕಾ ಶನಿವಾರ (ಫೆ.16) ಆತಿಥೇಯ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ನಲ್ಲಿ 1 ವಿಕೆಟ್ ಗೆಲುವನ್ನಾಚರಿಸಿತ್ತು. ಇದರಲ್ಲಿ ಪೆರೆರಾ 51 ಮತ್ತು ಅಜೇಯ 153 ರನ್ ಬಾರಿಸಿದ್ದರು. ಪೆರೆರಾ ಈ ಸಾಧನೆ ರ್ಯಾಂಕಿಂಗ್ ನಲ್ಲಿ 40ನೇ ಸ್ಥಾನ ಪಡೆಯಲು ನೆರವಾಗಿದೆ.

ಸ್ಮಿತ್‌ಗೆ 4ನೇ ಸ್ಥಾನ

ಸ್ಮಿತ್‌ಗೆ 4ನೇ ಸ್ಥಾನ

ಇನ್ನುಳಿದಂತೆ ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್‌ನಲ್ಲಿ ನಿಷೇಧಿಕ ಆಟಗಾರ ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ), ಹೆನ್ರಿ ನಿಕೋಲ್ಸ್ (ಆಸೀಸ್), ಜೋ ರೂಟ್ (ಇಂಗ್ಲೆಂಡ್), ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ), ಕ್ವಿಂಟನ್ ಡಿಕಾಕ್ (ಸೌತ್ ಆಫ್ರಿಕಾ), ಏಡನ್ ಮಾರ್ಕ್ರಮ್ (ಸೌತ್ ಆಫ್ರಿಕಾ) ಮತ್ತು ದಿಮಿತ್ ಕರುಣರತ್ನೆ (ಶ್ರೀಲಂಕಾ) ಕ್ರಮವಾಗಿ 4ರಿಂದ 10ರೊಳಗೆ ಸ್ಥಾನ ಪಡೆದಿದ್ದಾರೆ.

ಪ್ಯಾಟ್ ಕಮಿನ್ಸ್ ಮೊದಲಿಗ

ಪ್ಯಾಟ್ ಕಮಿನ್ಸ್ ಮೊದಲಿಗ

ಟೆಸ್ಟ್ ಬೌಲಿಂಗ್ ರ್ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ನಂ.1 ಸ್ಥಾನಿಗ. ಇನ್ನು ಇಂಗ್ಲೆಂಡ್ ನ ಜೇಮ್ಸ್ ಆ್ಯಂಡರ್ಸನ್, ದಕ್ಷಿಣ ಆಫ್ರಿಕಾದ ಕಾಗಿಸೋ ರಬಾಡಾ, ಆಫ್ರಿಕಾದ ವರ್ನನ್ ಫಿಲಾಂಡರ್, ಭಾರತದ ರವೀಂದ್ರ ಜಡೇಜಾ ಮೊದಲ ಐದು ಸ್ಥಾನಗಳಲ್ಲಿದ್ದಾರೆ.

ಜಡೇಜಾ 3ನೇ ಆಲ್ ರೌಂಡರ್

ಜಡೇಜಾ 3ನೇ ಆಲ್ ರೌಂಡರ್

ಇನ್ನು ಆಲ್ ರೌಂಡರ್‌ಗಳಲ್ಲಿ ಜೇಸನ್ ಹೋಲ್ಡರ್ (ವೆಸ್ಟ್ ಇಂಡೀಸ್), ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ), ರವೀಂದ್ರ ಜಡೇಜಾ (ಭಾರತ), ಬೆನ್ ಸ್ಟೋಕ್ಸ್ (ಇಂಗ್ಲೆಂಡ್), ವರ್ನನ್ ಫಿಲಾಂಡರ್ (ದಕ್ಷಿಣ ಆಫ್ರಿಕಾ) ಆರಂಭಿಕ ಐದರೊಳಗೆ ಸ್ಥಾನ ಪಡೆದುಕೊಂಡಿದ್ದಾರೆ.

Story first published: Monday, February 18, 2019, 12:05 [IST]
Other articles published on Feb 18, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X