ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ODI rankings: ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ನಂ.1 ಸ್ಥಾನಕ್ಕೆ ಕುತ್ತು!

Kohli remains on top but Rohit bridges gap in ODI rankings

ಲಂಡನ್‌, ಜುಲೈ 07: ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ, ಪ್ರಸಕ್ತ ಚಾಲ್ತಿಯಲ್ಲಿರುವ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಸತತ 5 ಅರ್ಧಶತಕಗಳನ್ನು ದಾಖಲಿಸುವ ಮೂಲಕ ಐಸಿಸಿ ಒಡಿಐ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ತಮ್ಮ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಆದರೆ, ಕೊಹ್ಲಿ ಅವರ ಈ ಅಗ್ರಸ್ಥಾನ ಭದ್ರವಾಗಿಲ್ಲ. ಏಕೆಂದರೆ ಇದೇ ವಿಶ್ವಕಪ್‌ನಲ್ಲಿ 5 ಶತಕಗಳೊಂದಿಗೆ ಅಬ್ಬರಿಸಿರುವ ಭಾರತ ತಂಡದ ಉಪ ನಾಯಕ ರೋಹಿತ್‌ ಶರ್ಮಾ ಅಗ್ರಸ್ಥಾನದ ಕಡೆಗೆ ದಾಪುಗಾಲಿಟ್ಟಿದ್ದು, ಕೊಹ್ಲಿಗಿಂತಲೂ ಕೇವಲ 6 ಅಂಕ ಮಾತ್ರವೇ ಹಿನ್ನಡೆಯಲ್ಲಿದ್ದಾರೆ.

ವಿರಾಟ್‌, 63.14ರ ಸರಾಸರಿಯಲ್ಲಿ ಒಟ್ಟು 442 ರನ್‌ಗಳನ್ನ ಗಳಿಸಿದ್ದು ಈ ಮೂಲಕ ಐಸಿಸಿ ಒಡಿಐ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕ ಪಟ್ಟಿಯಲ್ಲಿ ಒಟ್ಟು 891 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿ ಉಳಿದಿದ್ದಾರೆ.

ವಿಶ್ವಕಪ್‌ 2019: ಯಶಸ್ಸಿನ ಉತ್ತಂಗದ ಕಾಲಘಟ್ಟದಲ್ಲಿ ರೋಹಿತ್‌ ಶರ್ಮಾವಿಶ್ವಕಪ್‌ 2019: ಯಶಸ್ಸಿನ ಉತ್ತಂಗದ ಕಾಲಘಟ್ಟದಲ್ಲಿ ರೋಹಿತ್‌ ಶರ್ಮಾ

ಇದೇ ವೇಳೆ ಒಟ್ಟು 51 ಅಂಕಗಳ ಹಿನ್ನಡೆಯಲ್ಲಿದ್ದ ರೋಹಿತ್‌ ಶರ್ಮಾ, ವಿಶ್ವಕಪ್‌ನಲ್ಲಿ ದಾಖಲಿಸಿದ 5 ಅದ್ಭುತ ಶತಕಗಳ ಮೂಲಕ ನಾಯಕನ ಜೊತೆಗಿನ ಅಂತರವನ್ನು ಕಡಿಮೆ ಮಾಡಿದ್ದಾರೆ. ಭಾರತ ತಂಡವನ್ನು ವಿಶ್ವಕಪ್‌ ಸೆಮಿಫೈನಲ್ಸ್‌ ತಲುಪಿಸುವಲ್ಲಿ ಮಹತ್ವದ ಪಾತ್ರವಹಿಸಿರುವ ರೋಹಿತ್‌, ಒಡಿಐ ಶ್ರೇಯಾಂಕ ಪಟ್ಟಿಯಲ್ಲಿ ತಮ್ಮ ವೃತ್ತಿ ಬದುಕಿನ ಶ್ರೇಷ್ಠ ಸಾಧನೆಯಾಗಿ ಒಟ್ಟು 855 ಅಂಕಗಳನ್ನು ಸಂಪಾದಿಸಿದ್ದಾರೆ.

ಇದೇ ವೇಳೆ ಪಾಕಿಸ್ತಾನ ತಂಡ ಯುವ ಬ್ಯಾಟ್ಸ್‌ಮನ್‌ ಬಾಬರ್‌ ಆಝಮ್‌ ಕೂಡ ಒಡಿಐ ಕ್ರಿಕೆಟ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಒಡಿಐ ಶ್ರೇಯಾಂಕ ಪಟ್ಟಿಯಲ್ಲಿ ಒಟ್ಟು ನಾಲ್ಕು ಸ್ಥಾನ ಜಿಗಿಯುವ ಮೂಲಕ 3ನೇ ಸ್ಥಾನ ಪಡೆದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ನಾಯಕ ಫಾಫ್‌ ಡು'ಪ್ಲೆಸಿಸ್‌ (820) ಎರಡು ಸ್ಥಾನ ಮೇಲೇರಿ ನಾಲ್ಕನೇ ಸ್ಥಾನ ಪಡೆದರೆ, ಅಷ್ಟೇ ಸ್ಥಾನ ಕಳೆದುಕೊಂಡಿರುವ ನ್ಯೂಜಿಲೆಂಡ್‌ನ ಅನುಭವಿ ಬ್ಯಾಟ್ಸ್‌ಮನ್‌ ರಾಸ್‌ ಟೇಲರ್‌ (813) ಐದನೇ ಸ್ಥಾನಕ್ಕೆ ಜಾರಿದ್ದಾರೆ.

ವಿಶ್ವಕಪ್‌: ದಾಖಲೆಗಳ ಸರದಾರ 'ಹಿಟ್‌ಮ್ಯಾನ್‌' ರೋಹಿತ್‌ ಶರ್ಮಾವಿಶ್ವಕಪ್‌: ದಾಖಲೆಗಳ ಸರದಾರ 'ಹಿಟ್‌ಮ್ಯಾನ್‌' ರೋಹಿತ್‌ ಶರ್ಮಾ

ಇನ್ನು ಪ್ರಸಕ್ತ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಪರ 638 ರನ್‌ಗಳನ್ನು ಚೆಚ್ಚಿರುವ ಎಡಗೈ ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ ಶ್ರೇಯಾಂಕಪಟ್ಟಿಗೆ ಮರಳಿ ಕಾಲಿಟ್ಟಿದ್ದು, 6ನೇ ಸ್ಥಾನ ಗಿಟ್ಟಿಸಿದ್ದಾರೆ. ನ್ಯೂಜಿಲೆಂಡ್‌ ತಮಡದ ನಾಯಕ ಕೇನ್‌ ವಿಲಿಯಮ್ಸನ್‌ ಕೂಡ ತಮ್ಮ ಸ್ಥಿರ ಪ್ರದರ್ಶನದ ನೆರವಿನಿಂದ ನಾಲ್ಕು ಸ್ಥಾನ ಜಿಗಿದು ಟಾಪ್‌-10 ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ.

ಏಕದಿನ ಕ್ರಿಕೆಟ್‌ ವಿಶ್ವಕಪ್‌ ಸೆಮಿಫೈನಲ್ಸ್‌ ಪಂದ್ಯ ಎಲ್ಲಿ? ಯಾವಾಗ?ಏಕದಿನ ಕ್ರಿಕೆಟ್‌ ವಿಶ್ವಕಪ್‌ ಸೆಮಿಫೈನಲ್ಸ್‌ ಪಂದ್ಯ ಎಲ್ಲಿ? ಯಾವಾಗ?

ಒಡಿಐ ಬೌಲರ್ಸ್‌ ಪಟ್ಟಿಯಲ್ಲಿ ಭಾರತದ ಜಸ್‌ಪ್ರೀತ್‌ ಬುಮ್ರಾ ತಮಮ್ ಅಗ್ರಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದ್ದಾರೆ. ಪ್ರಸಕ್ತ ವಿಶ್ವಕಪ್‌ನಲ್ಲಿ 17 ವಿಕೆಟ್‌ಗಳನ್ನು ಉರುಳಿಸಿರುವ ಬುಮ್ರಾ, ಒಟ್ಟಾರೆ 56 ಅಂಕಗಳ ಮುನ್ನಡೆ ಗಳಿಸಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಕಿವೀಸ್‌ ವೇಗಿ ಟ್ರೆಂಟ್‌ ಬೌಲ್ಟ್‌ ಇದ್ದಾರೆ. ಬೌಲ್ಟ್‌ ಆಸ್ಟ್ರೇಲಿಯಾ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಪಡೆದು ಮಿಂಚಿದ್ದರು.

ತಂಡಗಳ ವಿಭಾಗದಲ್ಲಿ 123 ಅಂಕಗಳನ್ನು ಹೊಂದಿರುವ ಇಂಗ್ಲೆಂಡ್‌ ತಂಡ ಅಗ್ರಸ್ಥಾನದಲ್ಲಿದ್ದರೆ, 122 ಅಂಕಗಳೊಂದಿಗೆ ಭಾರತ 2ನೇ ಶ್ರೇಯಾಂಕ ಹೊಂದಿದೆ.

Story first published: Sunday, July 7, 2019, 19:40 [IST]
Other articles published on Jul 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X