ಮೊದಲ ಟೆಸ್ಟ್ : ಭಾರತದ ವಿರುದ್ಧ ಲಂಕಾಕ್ಕೆ 122ರನ್ ಗಳ ಮುನ್ನಡೆ

Posted By:

ಕೋಲ್ಕತಾ, ನವೆಂಬರ್ 19: ಇಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನವಾದ ಭಾನುವಾರದಂದು ಪ್ರವಾಸಿ ಶ್ರೀಲಂಕಾ ತಂಡವು 294ರನ್ ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಭಾರತ ವಿರುದ್ಧ 122ರನ್ ಗಳ ಇನ್ನಿಂಗ್ಸ್ ಮುನ್ನಡೆ ಪಡೆದುಕೊಂಡಿದೆ.

ಸ್ಕೋರ್ ಕಾರ್ಡ್

ಮೂರನೇ ದಿನದ ಅಂತ್ಯಕ್ಕೆ ನಾಯಕ ದಿನೇಶ್ ಚಂಡಿಮಾಲ್ ಮತ್ತು ನಿರೋಷನ್ ಡಿಕ್ವೆಲ್ಲಾ ಔಟಾಗದೆ ಉಳಿದಿದ್ದರು. 165/4 ಸ್ಕೋರ್ ಮಾಡಿತ್ತು.

Kolkata Test, Day 4, Live: Herath notches up fifty; Sri Lanka extend lead against India

ಲಹಿರು ತಿರಿಮನ್ನೆ 51 ರನ್(94 ಎಸೆತ, 8 ಬೌಂಡರಿ) ಮತ್ತು ಏಂಜೆಲೊ ಮ್ಯಾಥ್ಯೂಸ್‌ 52ರನ್(94 ಎಸೆತ, 8 ಬೌಂಡರಿ) ಹಾಗೂ ರಂಗಣಾ ಹೆರಾತ್ 67ರನ್ ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.

172 ರನ್ ಗಳಿಗೆ ಸರ್ವಪತನ ಕಂಡ ಭಾರತ

ಭಾರತ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 172ಸ್ಕೋರಿಗೆ ಆಲೌಟ್ ಆಗಿತ್ತು. ಭುವನೇಶ್ವರ್ ಕುಮಾರ್ ಹಾಗೂ ಮೊಹಮ್ಮದ್ ಶಮಿ ತಲಾ 4ವಿಕೆಟ್ ಗಳನ್ನು ಗಳಿಸಿದರೆ, ಉಮೇಶ್ ಯಾದವ್ 2 ವಿಕೆಟ್ ಪಡೆದುಕೊಂಡರು.

Story first published: Sunday, November 19, 2017, 13:07 [IST]
Other articles published on Nov 19, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ