ಟಿ20 ವಿಶ್ವಕಪ್ ವೇಳೆ ಕ್ರಿಕೆಟ್ ಪ್ರೇಮಿಗಳಿಗೆ ವಿಶೇಷ ವೇದಿಕೆ ಒದಗಿಸಲಿದೆ 'ಕೂ ಕ್ರಿಯೇಟರ್ ಕಪ್'

By ಪ್ರತಿನಿಧಿ

ಬೆಂಗಳೂರು: ಟಿ20 ವಿಶ್ವಕಪ್‌ನ ಸೂಪರ್ 12 ಹಂತದ ಪಂದ್ಯಗಳು ಶನಿವಾರದಿಂದ ಆರಂಭವಾಗಲಿದ್ದು ಅಭಿಮಾನಿಗಳ ಕಾತುರತೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಇಂಥಾ ಸಂದರ್ಭದಲ್ಲಿ ಬಹು ಭಾಷೆಯ ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಕೂ ಅಭಿಮಾನಿಗಳಿಗಾಗಿ ವಿಶೇಷ ವೇದಿಕೆಯನ್ನು ಒದಗಿಸಿದೆ. #ಅತಿದೊಡ್ದಕ್ರೀಡಾಂಗಣ ಅಭಿಯಾನದ ಮೂಲಕ ಕೂ ಆಪ್ ಸ್ಥಳೀಯ ಭಾರತೀಯ ಭಾಷೆಗಳ ತೊಡಗಿಸಿಕೊಳ್ಳುವಿಕೆ ಮತ್ತು ಸ್ಥಳೀಯ ವಿಶ್ವಕಪ್ ಅನುಭವವನ್ನು ಬಳಕೆದಾರರಿಗೆ ಒದಗಿಸಲಿದೆ.

ಸಂವಾದಾತ್ಮಕ ವಿಷಯಗಳೊಂದಿಗೆ ವೇದಿಕೆ ಸಕ್ರಿಯವಾಗಿರಲಿದೆ. ಕೂ ಬಳಕೆದಾರರೊಂದಿಗೆ ಕ್ರಿಕೆಟಿಗರು, ವೀಕ್ಷಕ ವಿವರಣೆಗಾರರು, ಸೆಲೆಬ್ರಿಟಿಗಳು ಮತ್ತು ಮಾಧ್ಯಮಗಳು ಈ ವೇದಿಕೆಯಲ್ಲಿ ಚರ್ಚೆ ಸಂವಾದವನ್ನು ನಡೆಸಲಿದ್ದಾರೆ. ಇವುಗಳ ಜೊತೆಗೆ ಲೈವ್ ಮ್ಯಾಚ್ ಅಪ್‌ಡೇಟ್‌ಗಳನ್ನು ಹಂಚಿಕೊಳ್ಳುವುದನ್ನು ಇಲ್ಲಿ ಕಾಣಬಹುದಾಗಿದೆ.

ಟಿ20 ವಿಶ್ವಕಪ್: ಭಾರತ vs ಪಾಕಿಸ್ತಾನ ಪಂದ್ಯದ ಬಗ್ಗೆ ಯಾರು ಏನು ಹೇಳಿದ್ದಾರೆ?ಟಿ20 ವಿಶ್ವಕಪ್: ಭಾರತ vs ಪಾಕಿಸ್ತಾನ ಪಂದ್ಯದ ಬಗ್ಗೆ ಯಾರು ಏನು ಹೇಳಿದ್ದಾರೆ?

'ಪಂದ್ಯದ ಕೂ', 'ಪಂದ್ಯದ ಕೂ ಫ್ಯಾನ್', 'ಕೂ ಪೋಸ್ಟರ್‌ನ ಕೂಲ್ ಪೋಲ್‌'ನಂತಹ ಪಂದ್ಯಗಳ ಒಳನೋಟವುಳ್ಳ ವಿಶ್ಲೇಷಣೆಯನ್ನು ವೀಕ್ಷಕ ವಿವರಣೆಗಾರರು ಹಂಚಿಕೊಳ್ಳುತ್ತಾರೆ. ಹೀಗಾಗಿ ಒಟ್ಟಾರೆ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಅಭಿಯಾನದ ಭಾಗವಾಗಿ, ಕೂ ಅಪ್ಲಿಕೇಶನ್ 'ಕೂ ಕ್ರಿಯೇಟರ್ ಕಪ್' ಎಂಬ ಒಂದು ರೋಚಕ ಬಳಕೆದಾರ ಸ್ಪರ್ಧೆಯನ್ನು ಆಯೋಜಿಸಿದೆ. ಇದರ ಅಡಿಯಲ್ಲಿ ಕಂಟೆಂಟ್ ಕ್ರಿಯೇಟರ್ಸ್ ತಮ್ಮ ಸೃಜನಶೀಲತೆಯಿಂದ #ಕೂಮೆಂಟರಿ ಮೂಲಕ ಪಂದ್ಯಗಳು ಅಥವಾ ಆಟಗಾರರ ಕುರಿತು ನೈಜ ಸಮಯದಲ್ಲಿ ಹಾಸ್ಯಭರಿತ ಮೀಮ್ಸ್, ವೀಡಿಯೋಗಳನ್ನು ಹಂಚಿಕೊಳ್ಳುತ್ತಾರೆ.

ವಿಜೇತರು ಹಾಲಿಡೇ ಟು ಮಾಲ್ಡಿವ್ಸ್, ಮ್ಯಾಕ್‌ಬುಕ್ ಏರ್ ಗಳಂತಹ ಇನ್ನಿತರ ಅತ್ಯಾಕರ್ಷಕ ಬಹುಮಾನಗಳನ್ನು ಗೆಲ್ಲಲಿದ್ದಾರೆ. ಜೊತೆಗೆ, ಪ್ಲಾಟ್‌ಫಾರ್ಮ್‌ ಉತ್ಪನ್ನ ವರ್ಧನೆಗಳನ್ನು ಹೊಂದಿದ್ದು, ಇದು ಅಭಿಮಾನಿಗಳಿಗೆ ಒಂದು ಸಾಟಿಯಿಲ್ಲದ ಅನುಭವವನ್ನು ನೀಡುವ ಮೂಲಕ ಭಾರತ ತಂಡವನ್ನು ಹುರಿದುಂಬಿಸುವಂತೆ ಮಾಡುತ್ತದೆ.

ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಕುರಿತ ಸಂಭಾಷಣೆಗಳು ಕೂ ಆಪ್‌ನಲ್ಲಿ ಪ್ರಚಂಡ ಆವೇಗವನ್ನು ಪಡೆದುಕೊಂಡಿವೆ ಮತ್ತು ಅನನ್ಯ ಸ್ಥಳೀಯ ಅಭಿರುಚಿಗಳನ್ನು ಹೊಂದಿವೆ. ವೀರೇಂದ್ರ ಸೆಹ್ವಾಗ್, ವೆಂಕಟೇಶ್ ಪ್ರಸಾದ್, ನಿಖಿಲ್ ಚೋಪ್ರಾ, ಸೈಯದ್ ಸಬಾ ಕರೀಂ, ಪಿಯೂಷ್ ಚಾವ್ಲಾ, ಹನುಮ ವಿಹಾರಿ, ಜೋಗಿಂದರ್ ಶರ್ಮಾ, ಪ್ರವೀಣ್ ಕುಮಾರ್, ವಿಆರ್‌ವಿ ಸಿಂಗ್, ಅಮೋಲ್ ಮುಜುಮ್ದಾರ್, ವಿನೋದ್ ಕಾಂಬ್ಳಿ, ವಾಸಿಂ ಜಾಫರ್, ಆಕಾಶ್ ಚೋಪ್ರಾ, ದೀಪ್ ದಾಸ್‌ಗುಪ್ತಾ ಮುಂತಾದ ಶ್ರೇಷ್ಠ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಕೂ ವೇದಿಕೆಯೊಂದಿಗೆ ಸಕ್ರಿಯವಾಗಿ ಅಭಿಮಾನಿಗಳೊಂದಿಗೆ ಸಂಪರ್ಕ ಸಾಧಿಸುತ್ತಾ ಆನಂದಿಸುತ್ತಿದ್ದಾರೆ.

ಟಿ20 ವಿಶ್ವಕಪ್ 2021: ಶ್ರೀಲಂಕಾ ನಂತರ ಸೂಪರ್ 12 ಹಂತಕ್ಕೆ ಪ್ರವೇಶಿಸಿದ ಸ್ಕಾಟ್ಲೆಂಡ್ಟಿ20 ವಿಶ್ವಕಪ್ 2021: ಶ್ರೀಲಂಕಾ ನಂತರ ಸೂಪರ್ 12 ಹಂತಕ್ಕೆ ಪ್ರವೇಶಿಸಿದ ಸ್ಕಾಟ್ಲೆಂಡ್

"ಭಾರತದಲ್ಲಿ ಕ್ರಿಕೆಟ್ ಅತ್ಯಂತ ಜನಪ್ರಿಯವಾದ ಆಟ - ಇದು ವರ್ಷವಿಡೀ ವಿವಿಧ ಸ್ವರೂಪಗಳಲ್ಲಿ ಆಚರಿಸಲ್ಪಡುವ ಹಬ್ಬವಾಗಿದ್ದು, ದೇಶದ ಮೂಲೆ ಮೂಲೆಯ ಜನರನ್ನು ಒಟ್ಟುಗೂಡಿಸುತ್ತದೆ. ಭಾರತೀಯರು ತಮ್ಮ ನೆಚ್ಚಿನ ಆಟಗಾರರನ್ನು ಹುರಿದುಂಬಿಸಲು ಅಥವಾ ತಮ್ಮ ಮಾತೃಭಾಷೆಯಲ್ಲಿ ಕ್ರಿಕೆಟ್ ವಿಡಂಬನೆಯಲ್ಲಿ ತೊಡಗಲು ಹಿಂದೆಂದೂ ಇಷ್ಟೊಂದು ಅವಕಾಶವನ್ನು ಹೊಂದಿರಲಿಲ್ಲ. ಇತ್ತೀಚಿನ ಐಪಿಎಲ್ ಸಮಯದಲ್ಲಿ ನಾವು ಬಳಕೆದಾರರಿಂದ ಅದ್ಭುತ ಪ್ರತಿಕ್ರಿಯೆಯನ್ನು ಸ್ವೀಕರಿಸಿದ್ದೇವೆ. ಸ್ಟಾರ್ ಕ್ರಿಕೆಟಿಗರಾದ ಸೆಹ್ವಾಗ್, ಆಕಾಶ್ ಚೋಪ್ರಾ ಮತ್ತು ಇತರರು ತಮ್ಮ ಸ್ಥಳೀಯ ಭಾಷೆಯಲ್ಲಿ ಅಭಿಮಾನಿಗಳೊಂದಿಗೆ ತೊಡಗಿಸಿಕೊಂಡಿದ್ದಾರೆ ಮತ್ತು ಅನುಭವವನ್ನು ಹೊಸ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. 2021ರ ಟಿ20 ವಿಶ್ವಕಪ್‌ನೊಂದಿಗೆ ಇನ್ನೂ ಹೆಚ್ಚಿನ ಸಂವಾದಾತ್ಮಕ ಅನುಭವವನ್ನು ರೂಪಿಸಲು ಐಪಿಎಲ್‌ನ ಯಶಸ್ಸು ನಮಗೆ ಉತ್ತೇಜನ ನೀಡಿದೆ. ಕ್ರಿಕೆಟ್ ಅಭಿಮಾನಿಗಳು #ಅತಿದೊಡ್ದಕ್ರೀಡಾಂಗಣ ದಲ್ಲಿ ಪಾಲ್ಗೊಳ್ಳಲು ಕೂ ಸಾಮಾಜಿಕ ಮಾಧ್ಯಮ ವೇದಿಕೆಯಾಗಿದೆ' ಎಂದು ಕೂ ವಕ್ತಾರರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಳಕೆದಾರರು 'ಕೂ ಕ್ರಿಯೇಟರ್ ಕಪ್' ಮೂಲಕ ತಮ್ಮ ಸೃಜನಶೀಲತೆಯನ್ನು ಹೊರಹಾಕಲು ಮತ್ತು ತಮ್ಮ ಮಾತೃಭಾಷೆಯಲ್ಲಿ ಕ್ರಿಕೆಟಿಗರೊಂದಿಗೆ ತೊಡಗಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

India vs Pakistan ಪಂದ್ಯಕ್ಕೆ ಆಟಗಾರರಲ್ಲಿ Ticket ಬೇಡಿಕೆ | Oneindia Kannada

For Quick Alerts
ALLOW NOTIFICATIONS
For Daily Alerts
Story first published: Friday, October 22, 2021, 11:53 [IST]
Other articles published on Oct 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X