ಕೆಪಿಎಲ್‌ 2019: ಪಾಂಡೆ ಶತಕ ವ್ಯರ್ಥ, ಟೈಗರ್ಸ್‌ಗೆ ರೋಚಕ ಗೆಲುವು

ಬೆಂಗಳೂರು, ಆಗಸ್ಟ್‌ 21: ಸ್ಟಾರ್‌ ಬ್ಯಾಟ್ಸ್‌ಮನ್‌ ಮನೀಶ್ ಪಾಂಡೆ (102 ರನ್, 50 ಎಸೆತಗಳು) ಅವರ ಸ್ಫೋಟಕ ಶತಕದ ಹೊರತಾಗಿಯೂ ಬೆಳಗಾವಿ ಪ್ಯಾಂಥರ್ಸ್ ತಂಡ ಎಂಟನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್‌ನ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ವಿರುದ್ಧ ಸೋಲನುಭವಿಸಿದೆ.

ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೆಳಗಾವಿ ಪ್ಯಾಂಥರ್ಸ್ ತಂಡ ನಿಗದಿತ 20 ಓವರ್‌ಗಳಿಗೆ ಏಳು ವಿಕೆಟ್ ಕಳೆದುಕೊಂಡು 180 ರನ್ಗಳ ಬೃಹತ್‌ ಮೊತ್ತ ದಾಖಲಿಸಿತು. ಬಳಿಕ ಗುರಿ ಬೆನ್ನತ್ತಿದ ಟೈಗರ್ಸ್ 19.5 ಓವರ್‌ಗಳಲ್ಲಿ ಐದು ವಿಕೆಟ್‌ಗೆ 181 ರನ್‌ಗಳಿಸಿ ಪ್ರಸಕ್ತ ಆವೃತ್ತಿಯಲ್ಲಿ ಮೊದಲು ಜಯ ದಾಖಲಿಸಿತು.

ಕೆಪಿಎಲ್‌ 2019: ಭರತ್‌ ಚಿಪ್ಲಿ ಭರ್ಜರಿ ಬ್ಯಾಟಿಂಗ್‌, ಬುಲ್ಸ್ ಗೆ ಸುಲಭ ಜಯಕೆಪಿಎಲ್‌ 2019: ಭರತ್‌ ಚಿಪ್ಲಿ ಭರ್ಜರಿ ಬ್ಯಾಟಿಂಗ್‌, ಬುಲ್ಸ್ ಗೆ ಸುಲಭ ಜಯ

ಮ್ಯಾಚ್‌ ವಿನ್ನರ್‌ ಮೊಹಮ್ಮದ್‌ ತಾಹ
181 ರನ್ ಗುರಿ ಬೆನ್ನತ್ತಿದ ಹುಬ್ಬಳ್ಳಿ ಟೈಗರ್ಸ್ ಪರ ಆಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ ಲವನೀತ್ ಸಿಸೋಡಿಯಾ 29 ಹಾಗೂ ಕೆ.ಬಿ ಪವನ್ 22 ರನ್‌ಗಳಿಗೆ ಸೀಮಿತರಾದರು. ತಂಡದ ಜವಾಬ್ದಾರಿ ಹೊತ್ತ ಆರಂಭಿಕ ಮೊಹಮ್ಮದ್ ತಾಹ ಟೈಗರ್ಸ್ ಪರ ಏಕಾಂಗಿ ಹೋರಾಟ ನಡೆಸಿದರು. 55 ಎಸೆತಗಳಲ್ಲಿ ಐದು ಸಿಕ್ಸರ್ ಹಾಗೂ ನಾಲ್ಕು ಬೌಂಡರಿಯೊಂದಿಗೆ 75 ರನ್ ಗಳಿಸಿ ಮುನ್ನುಗ್ಗುತ್ತಿದ್ದ ವೇಳೆ ಅವಿನಾಶ್ ಎಸೆತದಲ್ಲಿ ಔಟ್ ಆದರು. ಇವರು ಔಟ್ ಆಗುತ್ತಿದ್ದಂತೆ ಹುಬ್ಬಳ್ಳಿ ಟೈಗರ್ಸ್ ಮೊದಲ ಗೆಲುವಿನ ಕನಸು ಕಮರಿತ್ತು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಕೇವಲ 18 ಎಸೆತಗಳಲ್ಲಿ 33 ರನ್ ಸಿಡಿಸಿದ ಪ್ರವೀಣ್ ದುಬೆ ಇನ್ನೂ ಒಂದು ಎಸೆತ ಬಾಕಿ ಇರುವಾಗಲೇ ಹುಬ್ಬಳ್ಳಿಗೆ ಗೆಲುವು ತಂದುಕೊಟ್ಟರು. ಬೆಳಗಾವಿ ಪರ ಸ್ಟ್ಯಾಲಿನ್ ಹೂವರ್ ಎರಡು ಹಾಗೂ ಶುಭಾಂಗ್ ಹೆಗ್ಡೆ ಮತ್ತು ಡಿ. ಅವಿನಾಶ್ ತಲಾ ಒಂದು ವಿಕೆಟ್ ಕಿತ್ತರು.

ಪ್ರೊ ಕಬಡ್ಡಿ 2019: ಪಲ್ಟನ್‌ ವಿರುದ್ಧವೂ ಪಲ್ಟಿ ಹೊಡೆದ ಬೆಂಗಳೂರು ಬುಲ್ಸ್‌ಪ್ರೊ ಕಬಡ್ಡಿ 2019: ಪಲ್ಟನ್‌ ವಿರುದ್ಧವೂ ಪಲ್ಟಿ ಹೊಡೆದ ಬೆಂಗಳೂರು ಬುಲ್ಸ್‌

ಮನೀಶ್ ಪಾಂಡೆ ಶತಕ ವೈಭವ
ಟಾಸ್ ಗೆದ್ದು ಬೆಳಗಾವಿ ಪ್ಯಾಂಥರ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದ ಹುಬ್ಬಳ್ಳಿ ನಾಯಕ ವಿನಯ್ ಕುಮಾರ್ ರೂಪಿಸಿದ್ದ ವ್ಯೂಹಕ್ಕೆ ಮನೀಶ್ ಪಾಂಡೆ ಹೊರತುಪಡಿಸಿ ಉಳಿದವರು ಬಿದ್ದರು. ಆದರೆ, ತಂಡದ ಜವಾಬ್ದಾರಿ ಹೊತ್ತ ಮನೀಶ್ ಪಾಂಡೆ ಹುಬ್ಬಳ್ಳಿ ಬೌಲರ್‌ಗಳನ್ನು ಮನಬಂದಂತೆ ಥಳಿಸಿದರು. ತಮ್ಮ ಸ್ಫೋಟಕ ಬ್ಯಾಟಿಂಗ್ ನಿಂದ ನೆರೆದಿದ್ದ ಅಪಾರ ಅಭಿಮಾನಿಗಳನ್ನು ರಂಜಿಸಿದರು. 50 ಎಸೆತಗಳು ಎದುರಿಸಿದ ಅವರು ಏಳು ಸಿಕ್ಸರ್ ಹಾಗೂ ಏಳು ಬೌಂಡರಿಯೊಂದಿಗೆ ಎಂಟನೇ ಆವೃತ್ತಿಯ ಮೊದಲ ಶತಕ ಸಿಡಿಸಿ ತಂಡದ ಮೊತ್ತ 180 ರನ್ ತಲುಪಲು ನೆರವಾದರು.

ಭಾರತ vs ವೆಸ್ಟ್‌ ಇಂಡೀಸ್‌: ಪ್ರಥಮ ಟೆಸ್ಟ್‌ಗೆ ಟೀಮ್‌ ಇಂಡಿಯಾದ ಸಂಭಾವ್ಯ XIಭಾರತ vs ವೆಸ್ಟ್‌ ಇಂಡೀಸ್‌: ಪ್ರಥಮ ಟೆಸ್ಟ್‌ಗೆ ಟೀಮ್‌ ಇಂಡಿಯಾದ ಸಂಭಾವ್ಯ XI

ಸಂಕ್ಷಿಪ್ತ ಸ್ಕೋರ್
ಬೆಳಗಾವಿ ಪ್ಯಾಂಥರ್ಸ್ : 20 ಓವರ್‌ಗಳಲ್ಲಿ 180/7 (ಮನೀಶ್‌ ಪಾಂಡೆ 102; ಡೇವಿಡ್‌ ಮಥಾಯಿಸ್‌ 18ಕ್ಕೆ 2, ವಿದ್ಯಾಧರ್‌ ಪಾಟಿಲ್‌ 41ಕ್ಕೆ 2).
ಹುಬ್ಬಳ್ಳಿ ಟೈಗರ್ಸ್: 19.5 ಓವರ್‌ಗಳಲ್ಲಿ 181/7 (ಮೊಹಮ್ಮದ್ ತಾಹ 75, ಪ್ರವೀಣ್ ದುಬೆ 33*, ಲವನೀತ್ ಸಿಸೋಡಿಯಾ 29; ಸ್ಟ್ಯಾಲಿನ್ ಹೂವರ್ 35ಕ್ಕೆ 2, ಶುಭಾಂಗ್‌ ಹೆಗ್ಡೆ 23 ಕ್ಕೆ 1).

For Quick Alerts
ALLOW NOTIFICATIONS
For Daily Alerts
Story first published: Wednesday, August 21, 2019, 23:35 [IST]
Other articles published on Aug 21, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X