ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಎಸ್‌ಸಿಎ ಸಂಸ್ಥೆಗೇ ಉರುಳಾಗುತ್ತಾ ಕೆಪಿಎಲ್ ಫಿಕ್ಸಿಂಗ್ ಹಗರಣ

kpl fixing: ksca in trouble

ಬೆಂಗಳೂರು ನವೆಂಬರ್ 28: ಕೆಪಿಎಲ್ ಫಿಕ್ಸಿಂಗ್ ಪ್ರಕರಣ ಬಗೆದಷ್ಟೂ ಆಳಕ್ಕಿಳಿಯುತ್ತಿದೆ. ಇದು ಕೇವಲ ಆಟಗಾರರಿಗೆ ಮಾತ್ರವಲ್ಲಾ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್‌ಗೇ ಉರುಳಾದರೂ ಅಚ್ಚರಿಯಿಲ್ಲ. ಯಾಕಂದರೆ ಸ್ವತಃ ಕೆಎಸ್‌ಸಿಎ ವಿರುದ್ಧವೇ ಆರೋಪ ಕೇಳಿ ಬರುತ್ತಿದೆ. ಹೀಗಾಗಿ ಕೆಎಸ್‌ಸಿಎ ಸಂಸ್ಥೆಯನ್ನೇ ಸೂಪರ್‌ಸೀಡ್ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲು ಪೊಲೀಸ್ ಇಲಾಖೆ ಮುಂದಾಗಿದೆ.

ಕೆಪಿಎಲ್ ಫಿಕ್ಸಿಂಗ್‌ ಪ್ರಕರಣಕ್ಕೆ ಸಂಬಧಿಸಿದಂತೆ ಸಿಸಿಬಿ ತನಿಖೆಯನ್ನು ಚುರುಕುಗೊಳಿಸಿದೆ. ಆದರೆ ಪ್ರಕರಣದ ತನಿಖೆಗೆ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳು ಸಹಕರಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿದೆ. ಇದೇ ಕಾರಣಕ್ಕೆ ರಾಜ್ಯ ಸರ್ಕಾರಕ್ಕೆ ನಗರ ಮುಖ್ಯ ಪೊಲೀಸ್ ಆಯುಕ್ತರು ಪತ್ರ ಬರೆಯಲು ಮುಂದಾಗಿದ್ದಾರೆ.

ಕೆಪಿಎಲ್ ಫಿಕ್ಸಿಂಗ್: ಎಲ್ಲಾ ಆಟಗಾರಿಗೂ ಸಮನ್ಸ್ ನೀಡಿದ ಸಿಸಿಬಿಕೆಪಿಎಲ್ ಫಿಕ್ಸಿಂಗ್: ಎಲ್ಲಾ ಆಟಗಾರಿಗೂ ಸಮನ್ಸ್ ನೀಡಿದ ಸಿಸಿಬಿ

ಕೆಪಿಎಲ್ ಫಿಕ್ಸಿಂಗ್ ಪ್ರಕರಣದಲ್ಲಿ ಕೆಎಸ್‌ಸಿಎ ಅಧಿಕಾರಿಗಳು ಕೂಡ ಭಾಗಿಯಾಗಿರುವ ಶಂಕೆಯಿದೆ. ತನಿಖೆಗೆ ಸರಿಯಾದ ದಾಖಲೆಗಳನ್ನು ಸಿಸಿಬಿ ಅಧಿಕಾರಿಗಳಿಗೆ ನೀಡುತ್ತಿಲ್ಲ. ಈ ಕಾರಣವನ್ನಿಟ್ಟು ಸರ್ಕಾರಕ್ಕೆ ಸೂಪರ್ ಸೀಡ್ ಮಾಡುವಂತೆ ಮನವಿ ಮಾಡಲಿದ್ದಾರೆ.

ತನಿಖೆ ಸಂಪೂರ್ಣ ಮುಗಿಯುವವರೆಗೂ ಸಂಸ್ಥೆಯನ್ನು ಸೂಪರ್ ಸೀಡ್ ಮಾಡಬೇಕು, ಐಎಎಸ್‌ ದರ್ಜೆಯ ಅಧಿಕಾರಿಯನ್ನು ನೇಮಿಸಿ ಆಡಳಿತ ನಿರ್ವಹಣೆಯ ಜವಾಬ್ಧಾರಿಯನ್ನು ನೀಡಬೇಕು ಎಂದು ಬೆಂಗಳೂರು ನಗರ ಮುಖ್ಯಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಪತ್ರವನ್ನು ಬರೆದು ಮನವಿ ಮಾಡಿಕೊಳ್ಳಲಿದ್ದಾರೆ.

Story first published: Thursday, November 28, 2019, 13:32 [IST]
Other articles published on Nov 28, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X