ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20, ಏಕದಿನ ಎರಡರಲ್ಲೂ ಇಲ್ಲ ಸ್ಥಾನ; ಭಾರತ, ಪಾಕ್, ಇಂಗ್ಲೆಂಡ್‌ನ ಈ ಕ್ರಿಕೆಟಿಗರಿಗೆ ಟೆಸ್ಟ್ ಒಂದೇ ಗತಿ!

List of players who are currently playing only test cricket for their respective countries

ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಕ್ಷೇತ್ರದಲ್ಲಿ ಪೈಪೋಟಿಯ ಮಟ್ಟ ತೀರಾ ಹೆಚ್ಚಾಗಿದೆ ಎಂದೇ ಹೇಳಬಹುದು. ಯುವ ಆಟಗಾರರು ಅಂತರರಾಷ್ಟ್ರೀಯ ತಂಡಗಳಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುತ್ತಿರುವ ಕಾರಣ ಅನೇಕ ಅನುಭವಿ ಕ್ರಿಕೆಟಿಗರು ತಂಡಗಳಲ್ಲಿ ಸ್ಥಾನವಿಲ್ಲದೇ ಹೊರಬಿದ್ದಿದ್ದಾರೆ.

Ind vs WI 2nd ODI: ಪ್ರಿವ್ಯೂ, ಪ್ಲೇಯಿಂಗ್ 11, ಡ್ರೀಂ ಟೀಂ, ಪಿಚ್ ರಿಪೋರ್ಟ್‌Ind vs WI 2nd ODI: ಪ್ರಿವ್ಯೂ, ಪ್ಲೇಯಿಂಗ್ 11, ಡ್ರೀಂ ಟೀಂ, ಪಿಚ್ ರಿಪೋರ್ಟ್‌

ಅದರಲ್ಲಿಯೂ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಂತಹ ಫ್ರಾಂಚೈಸಿ ಕ್ರಿಕೆಟ್ ಲೀಗ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಆಯ್ಕೆಗಾರರ ಮನ ಗೆದ್ದಿರುವ ಹಲವಾರು ಯುವ ಪ್ರತಿಭೆಗಳಿಂದ ಅನುಭವಿ ಕ್ರಿಕೆಟಿಗರು ಹೆಚ್ಚು ಅವಕಾಶ ಸಿಗದೇ ಹಿನ್ನಡೆ ಅನುಭವಿಸಿದ್ದಾರೆ ಎಂದೇ ಹೇಳಬಹುದು. ಕೆಲ ಅನುಭವಿ ಕ್ರಿಕೆಟಿಗರು ಅವಕಾಶಗಳಿಲ್ಲದೇ ತಂಡದಿಂದ ಸಂಪೂರ್ಣವಾಗಿ ಹೊರಬಿದ್ದಿದ್ದರೆ, ಇನ್ನೂ ಕೆಲ ಆಟಗಾರರು ಸೀಮಿತ ಓವರ್ ತಂಡಗಳಿಂದ ಹೊರಬಿದ್ದು, ಟೆಸ್ಟ್ ಕ್ರಿಕೆಟ್‍ನಲ್ಲಿ ಮಾತ್ರ ಆಡುತ್ತಿದ್ದಾರೆ.

ಭಾರತ ಮತ್ತು ವಿಂಡೀಸ್ ನಡುವೆ ನಡೆದಿರುವ ಏಕದಿನ ಪಂದ್ಯಗಳಲ್ಲಿ ಹೆಚ್ಚು ಗೆದ್ದಿರುವ ಬಲಿಷ್ಠ ತಂಡ ಯಾವುದು?ಭಾರತ ಮತ್ತು ವಿಂಡೀಸ್ ನಡುವೆ ನಡೆದಿರುವ ಏಕದಿನ ಪಂದ್ಯಗಳಲ್ಲಿ ಹೆಚ್ಚು ಗೆದ್ದಿರುವ ಬಲಿಷ್ಠ ತಂಡ ಯಾವುದು?

ಹೀಗೆ ಟಿ ಟ್ವೆಂಟಿ ಹಾಗೂ ಏಕದಿನ ತಂಡಗಳಲ್ಲಿ ಸ್ಥಾನವಿಲ್ಲದೇ ಪ್ರಸ್ತುತ ಕೇವಲ ಟೆಸ್ಟ್ ಕ್ರಿಕೆಟ್ ತಂಡದಲ್ಲಿ ಮಾತ್ರ ಸ್ಥಾನ ಹೊಂದಿರುವ ವಿವಿಧ ದೇಶಗಳ ಆಟಗಾರರ ಪಟ್ಟಿ ಈ ಕೆಳಕಂಡಂತಿದೆ.

ಭಾರತ

ಭಾರತ

ಟೀಮ್ ಇಂಡಿಯಾದ ಪ್ರಮುಖ ಆಟಗಾರರಾದ ಚೇತೇಶ್ವರ್ ಪೂಜಾರ, ಹನುಮ ವಿಹಾರಿ, ಉಮೇಶ್ ಯಾದವ್ ಮತ್ತು ಇಶಾಂತ್ ಶರ್ಮಾ ಪ್ರಸ್ತುತ ಭಾರತ ಟಿ ಟ್ವೆಂಟಿ ಹಾಗೂ ಏಕದಿನ ತಂಡಗಳಲ್ಲಿ ಅವಕಾಶ ಇಲ್ಲದೇ ಕೇವಲ ಟೆಸ್ಟ್ ಕ್ರಿಕೆಟ್‍ನಲ್ಲಿ ಮಾತ್ರ ಪಾಲ್ಗೊಳ್ಳುತ್ತಿದ್ದಾರೆ. ಉಮೇಶ್ ಯಾದವ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಟೀಮ್ ಇಂಡಿಯಾವನ್ನು ಟಿ ಟ್ವೆಂಟಿ ಹಾಗೂ ಏಕದಿನ ಪಂದ್ಯಗಳಲ್ಲಿ ಪ್ರತಿನಿಧಿಸಲು ಪ್ರಯತ್ನಿಸಿದರಾದರೂ ಅವರ ಯತ್ನ ಫಲ ನೀಡಲಿಲ್ಲ.

ಇಂಗ್ಲೆಂಡ್

ಇಂಗ್ಲೆಂಡ್

ಇಂಗ್ಲೆಂಡ್ ತಂಡದ ಪ್ರಮುಖ ಆಟಗಾರರಾದ ಜೇಮ್ಸ್ ಆ್ಯಂಡರ್ಸನ್, ಸ್ಟುವರ್ಟ್ ಬ್ರಾಡ್, ಒಲೀ ಪೋಪ್ ಮತ್ತು ಜಾಕ್ ಲೀಚ್ ಟಿ ಟ್ವೆಂಟಿ ಹಾಗೂ ಏಕದಿನ ಕ್ರಿಕೆಟ್‍ನಲ್ಲಿ ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಳ್ಳದೇ ಕೇವಲ ಟೆಸ್ಟ್ ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿಯುತ್ತಿದ್ದಾರೆ.

ಶ್ರೀಲಂಕಾ

ಶ್ರೀಲಂಕಾ

ಅಂತರರಾಷ್ಟ್ರೀಯ ಏಕದಿನ ಮತ್ತು ಟಿ ಟ್ವೆಂಟಿ ತಂಡಗಳಲ್ಲಿ ಅವಕಾಶ ಸಿಗದೇ ಕೇವಲ ಟೆಸ್ಟ್ ಕ್ರಿಕೆಟ್‍ನಲ್ಲಿ ಮಾತ್ರ ಕಣಕ್ಕಿಳಿಯುತ್ತಿರುವ ಶ್ರೀಲಂಕಾ ತಂಡದ ಪ್ರಮುಖ ನಾಲ್ವರು ಆಟಗಾರರೆಂದರೆ, ದಿಮುತ್ ಕರುಣರತ್ನೆ, ಏಂಜೆಲೊ ಮ್ಯಾಥ್ಯೂಸ್, ಲಹಿರು ತಿರುಮನ್ನೆ ಮತ್ತು ಲಸಿತ್ ಎಂಬುಲ್ದೇನಿಯಾ.

ವೆಸ್ಟ್ ಇಂಡೀಸ್

ವೆಸ್ಟ್ ಇಂಡೀಸ್

ವೆಸ್ಟ್ ಇಂಡೀಸ್ ತಂಡದ ಆಟಗಾರರಾದ ಕ್ರೇಗ್ ಬ್ರಾಥ್ ವೈಟ್, ಜರ್ಮೈನ್ ಬ್ಲ್ಯಾಕ್ ವುಡ್ ಮತ್ತು ವೀರಸಾಮಿ ಪೆರಮಾಲ್ ಇತ್ತೀಚಿನ ದಿನಗಳಲ್ಲಿ ವೆಸ್ಟ್ ಇಂಡೀಸ್ ಪರ ಟಿ ಟ್ವೆಂಟಿ ಹಾಗೂ ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿಯದೇ ಕೇವಲ ಟೆಸ್ಟ್ ಕ್ರಿಕೆಟ್ ಆಡುತ್ತಿದ್ದಾರೆ.

ಪಾಕಿಸ್ತಾನ

ಪಾಕಿಸ್ತಾನ

ಪಾಕಿಸ್ತಾನ ಕ್ರಿಕೆಟ್ ತಂಡದ ಅಜರ್ ಅಲಿ, ನಸೀಮ್ ಶಾ, ಯಾಸಿರ್ ಷಾ ಮತ್ತು ನೌಮನ್ ಅಲಿ ಈ ನಾಲ್ವರು ಕ್ರಿಕೆಟಿಗರು ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದ ಪರ ಅಂತರರಾಷ್ಟ್ರೀಯ ಏಕದಿನ ಮತ್ತು ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ ಆಡುವ ಅವಕಾಶ ಸಿಗದೇ ಕೇವಲ ಟೆಸ್ಟ್ ಕ್ರಿಕೆಟ್‍ನಲ್ಲಿ ಮಾತ್ರ ಕಣಕ್ಕಿಳಿಯುತ್ತಿದ್ದಾರೆ.

ನ್ಯೂಜಿಲೆಂಡ್

ನ್ಯೂಜಿಲೆಂಡ್

ನ್ಯೂಜಿಲೆಂಡ್ ಕ್ರಿಕೆಟ್ ತಂಡದ ವಿಲಿಯಮ್ಸ್ ಸೊಮರ್ ವಿಲ್ಲೆ ಮತ್ತು ನೇಲ್ ವ್ಯಾಗ್ನರ್ ಈ ಇಬ್ಬರು ಆಟಗಾರರು ಇತ್ತೀಚೆಗಿನ ಪಂದ್ಯಗಳಲ್ಲಿ ನ್ಯೂಜಿಲೆಂಡ್ ಟಿ ಟ್ವೆಂಟಿ ಮತ್ತು ಏಕದಿನ ತಂಡಗಳನ್ನು ಪ್ರತಿನಿಧಿಸುವ ಅವಕಾಶ ಸಿಗದೇ ಕೇವಲ ಟೆಸ್ಟ್ ಕ್ರಿಕೆಟ್‍ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ದಕ್ಷಿಣ ಆಫ್ರಿಕಾ

ದಕ್ಷಿಣ ಆಫ್ರಿಕಾ

ದಕ್ಷಿಣ ಆಫ್ರಿಕಾದ ಡೀನ್ ಎಲ್ಗರ್ ಮತ್ತು ಕೀಗನ್ ಪೀಟರ್ಸನ್ ಈ ಇಬ್ಬರು ಆಟಗಾರರು ಅಂತರರಾಷ್ಟ್ರೀಯ ಟಿ ಟ್ವೆಂಟಿ ಮತ್ತು ಏಕದಿನ ಕ್ರಿಕೆಟ್‍ನಲ್ಲಿ ಇತ್ತೀಚಿನ ದಿನಗಳಲ್ಲಿ ಅವಕಾಶ ಸಿಗದೇ ಕೇವಲ ಟೆಸ್ಟ್ ಕ್ರಿಕೆಟ್‍ನಲ್ಲಿ ಮಾತ್ರ ಪಾಲ್ಗೊಳ್ಳುತ್ತಿದ್ದಾರೆ.

Story first published: Saturday, July 23, 2022, 18:33 [IST]
Other articles published on Jul 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X