ಇಂಡಿಯಾ vs ನ್ಯೂಜಿಲೆಂಡ್: ಟೀಮ್ ಇಂಡಿಯಾದಲ್ಲಿ ಮನೀಶ್ ಎಂಬ ಮಾಣಿಕ್ಯ!

ಮನೀಶ್ ಪಾಂಡೆ ಕರ್ನಾಟಕದ ಹೆಮ್ಮೆಯ ಆಟಗಾರ. ಟೀಮ್ ಇಂಡಿಯಾದಲ್ಲಿ ಆಯ್ಕೆಯಾದರೂ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಅವಕಾಶದಿಂದ ಪದೇ ಪದೆ ವಂಚಿತನಾಗುತ್ತಿರುವ ಈ ಆಟಗಾರ ಎಷ್ಟು ಪ್ರತಿಭಾನ್ವಿತ ಅನ್ನೋದಕ್ಕೆ ಆತನ ಇತ್ತೀಚಿನ ಅಂಕಿ ಅಂಶಗಳೇ ಸಾಕ್ಷಿ.

ಧೋನಿಯ ಅನುಪಸ್ಥಿತಿಯಲ್ಲಿ ಉತ್ತಮ ಫಿನಿಷರ್ ಅನ್ನು ಹುಡುಕುತ್ತಿದ್ದ ಭಾರತ ತಂಡಕ್ಕೆ ಆಸರೆಯಾಗುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ. ಆರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿರುವ ಮನೀಶ್ ಪಾಂಡೆ ಇಲ್ಲಿ ಸೈ ಎನಿಸಿಕೊಂಡಿದ್ದಾರೆ. ಕಳೆದ ಏಳು ಇನ್ನಿಂಗ್ಸ್‌ಗಳಲ್ಲಿ ವಿಕೆಟನ್ನು ಒಪ್ಪಿಸದೆ ತಂಡಕ್ಕೆ ನೆರವಾಗಿದ್ದಾರೆ.

ಭಾರತ vs ನ್ಯೂಜಿಲೆಂಡ್ ಏಕದಿನ ಸರಣಿ: ಪಂದ್ಯಕ್ಕೂ ಮುನ್ನ ತಿಳಿದುಕೊಳ್ಳಲೇ ಬೇಕಾದ ಮಾಹಿತಿಭಾರತ vs ನ್ಯೂಜಿಲೆಂಡ್ ಏಕದಿನ ಸರಣಿ: ಪಂದ್ಯಕ್ಕೂ ಮುನ್ನ ತಿಳಿದುಕೊಳ್ಳಲೇ ಬೇಕಾದ ಮಾಹಿತಿ

ಹೌದು ಟಿ20 ಕ್ರಿಕೆಟ್‌ನಲ್ಲಿ ಮನೀಶ್ ಪಾಂಡೆ ಕಳೆದ ಏಳು ಪಂದ್ಯಗಳಲ್ಲಿ ವಿಕೆಟನ್ನು ನೀಡಿಯೇ ಇಲ್ಲ. ಇದೊಂದು ವಿಶೇಷವಾದ ದಾಖಲೆಯಾಗಿದೆ. ಕಳೆದ ಆಗಸ್ಟ್‌ನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಆ್ಯಂಟಿಗುವಾದಲ್ಲಿ ನಡೆದ ಪಂದ್ಯದಿಂದ ಆರಂಭಿಸಿ ಬಳಿಕ ತಾನು ಆಡಿದ ಏಳು ಇನ್ನಿಂಗ್ಸ್‌ಗಳಲ್ಲಿ ಔಟಾಗದೆ ಉಳಿದುಕೊಂಡಿದ್ದಾರೆ.

2, 22, 31, 14, 14, 50, 11 ಇದು ಮನೀಶ್ ಪಾಂಡೆ ಕಳೆದ ಏಳು ಇನ್ನಿಂಗ್ಸ್‌ಗಳಲ್ಲಿ ಔಟಾಗದೆ ಗಳಿಸಿರುವ ರನ್‌ಗಳು. ಅಂತಿಮ ಹಂತದಲ್ಲಿ ಕಣಕ್ಕಿಳಿದು ತಂಡಕ್ಕೆ ಅಗತ್ಯವಾದ ರೀತಿಯಲ್ಲಿ ಬ್ಯಾಟ್‌ ಬೀಸುವ ಕಲೆಯನ್ನು ಮನೀಶ್ ಪಾಂಡೆ ರೂಢಿಸಿಕೊಂಡಿದ್ದಾರೆ. ಅದಕ್ಕಾಗಿ ಶಹಬ್ಬಾಷ್‌ಗಿರಿಯನ್ನೂ ಪಡೆದುಕೊಳ್ಳುತ್ತಿದ್ದಾರೆ.

ಭಾರತ vs ಕೀವಿಸ್ ಏಕದಿನ: ರೋಹಿತ್ ಶರ್ಮಾ ಸ್ಥಾನಕ್ಕೆ ಕನ್ನಡಿಗ ಮಯಾಂಕ್‌ಗೆ ಅವಕಾಶಭಾರತ vs ಕೀವಿಸ್ ಏಕದಿನ: ರೋಹಿತ್ ಶರ್ಮಾ ಸ್ಥಾನಕ್ಕೆ ಕನ್ನಡಿಗ ಮಯಾಂಕ್‌ಗೆ ಅವಕಾಶ

ಕಳೆದ 7 ಪಂದ್ಯಗಳಲ್ಲಿ 144 ರನ್‌ಗಳಿಸಿದ್ದಾರೆ. ಅಂತಿಮ ಹಂತದಲ್ಲಿ ಕಣಕ್ಕಿಳಿದು ಈ ರೀತಿಯ ಪ್ರದರ್ಶನ ನೀಡುವುದು ನಿಜಕ್ಕೂ ಅದ್ಭುತ ಸಾಧನೆಯಾಗಿದೆ. ಇಷ್ಟು ಮಾತ್ರವಲ್ಲ ಕಳೆದ 14 ಇನ್ನಿಂಗ್ಸ್‌ಗಳಲ್ಲಿ ಎದುರಾಳಿಗಳು ಮನೀಶ್ ಪಾಂಡೆ ವಿಕೆಟ್ ಪಡೆಯಲು ಸಾಧ್ಯವಾಗಿದ್ದು ಕೇವಲ ನಾಲ್ಕು ಬಾರಿ ಮಾತ್ರ. ಇದು ಮನೀಶ್ ಪಾಂಡೆಯ ಅದ್ಭುತ ಫಾರ್ಮ್‌ಗೆ ಸಾಕ್ಷಿ

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 20 - October 27 2021, 03:30 PM
ಇಂಗ್ಲೆಂಡ್
ಬಾಂಗ್ಲಾದೇಶ್
Predict Now

For Quick Alerts
ALLOW NOTIFICATIONS
For Daily Alerts
Story first published: Tuesday, February 4, 2020, 18:54 [IST]
Other articles published on Feb 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X