ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬ್ರಿಸ್ಬೇನ್ ಟೆಸ್ಟ್: ಪುಕೋವ್ಸ್ಕಿ ಗಾಯದಿಂದ ಚೇತರಿಕೆ ಕಾಣದಿದ್ದರೆ ವಾರ್ನರ್‌ಗೆ ಹ್ಯಾರಿಸ್ ಸಾಥ್

Marcus Harris to open if Will Pucovski fails to recover from shoulder injury: Langer

ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಪದಾರ್ಪಣೆ ಮಾಡಿ ಮೊದಲ ಇನ್ನಿಂಗ್ಸ್‌ನಲ್ಲಿ ಅರ್ಧ ಶತಕ ಬಾರಿಸಿ ಮಿಂಚಿದ ವಿಲ್ ಪುಕೋವ್ಸ್ಕಿ ಭುಜದ ನೋವಿಗೆ ಒಳಗಾಗಿದ್ದಾರೆ. ಸದ್ಯ ಅಭ್ಯಾಸದಿಂದ ದೂರ ಉಳಿದಿರುವ ಪುಕೋವ್ಸ್ಕಿ ನಾಲ್ಕನೇ ಪಂದ್ಯಕ್ಕೆ ಪಾಲ್ಗೊಳ್ಳುವ ಬಗ್ಗೆ ಸ್ಪಷ್ಟತೆಯಿಲ್ಲ.

ಈ ಬಗ್ಗೆ ಆಸ್ಟ್ರೇಲಿಯಾ ತಂಡದ ಕೋಚ್ ಜಸ್ಟಿನ್ ಲ್ಯಾಂಗರ್ ಪ್ರತಿಕ್ರಿಯಿಸಿದ್ದಾರೆ. ನಾಲ್ಕನೇ ಪಂದ್ಯದ ಆರಂಭಕ್ಕೂ ಮುನ್ನ ಪುಕೋವ್ಸ್ಕಿ ಚೇತರಿಕೆ ಕಾಣಲು ವಿಫಲರಾದರೆ ಮಾರ್ಕಸ್ ಹ್ಯಾರಿಸ್ ಅವರ ಸ್ಥಾನವನ್ನು ತುಂಬಲಿದ್ದಾರೆ ಎಂದಿದ್ದಾರೆ. ಪುಕೋವ್ಸ್ಕಿ ಭುಜದ ಮೂಳೆ ಭಾಗಶಃ ಸ್ಥಳಾಂತರವಾಗಿದೆ ಎಂದು ಲ್ಯಾಂಗರ್ ವಿವರಿಸಿದರು.

ಗಾಯದ ಸಮಸ್ಯೆಗೆ ಐಪಿಎಲ್ ದೂರಿದ ಆಸೀಸ್ ಕೋಚ್ ಜಸ್ಟಿನ್ ಲ್ಯಾಂಗರ್ಗಾಯದ ಸಮಸ್ಯೆಗೆ ಐಪಿಎಲ್ ದೂರಿದ ಆಸೀಸ್ ಕೋಚ್ ಜಸ್ಟಿನ್ ಲ್ಯಾಂಗರ್

22ರ ಹರೆಯದ ಪುಕೋವ್ಸ್ಕಿ ಸಿಡ್ನಿ ಟೆಸ್ಟ್‌ನ ಫೀಲ್ಡಿಂಗ್ ಸಂದರ್ಭದಲ್ಲಿ ಡೈವ್ ಮಾಡುವ ವೇಳೆ ಭುಜದ ನೋವಿಗೆ ಒಳಗಾಗಿದ್ದರು. "ಅವರು ಅಂದು ಫೀಲ್ಡಿಂಗ್ ಮಾಡುವುದಕ್ಕೆ ಮುನ್ನವೇ ಭುಜದ ನೋವು ಕಾಣಿಸಿಕೊಂಡಿತ್ತು. ಪಂದ್ಯದ ಬಳಿಕ ಸ್ಕ್ಯಾನ್‌ಗೆ ತೆರಳಲು ಅವರು ಮೊದಲೇ ನಿರ್ಧರಿಸಿದ್ದರು. ಏನಾಗಲಿದೆ ಎಂದು ನೋಡೋಣ ಎಂದು ಜಸ್ಟಿನ್ ಲ್ಯಾಂಗರ್ ವರ್ಚುವಲ್ ಪ್ರೆಸ್ ಕಾನ್ಫರೆನ್ಸ್‌ ವೇಳೆ ಹೇಳಿಕೊಂಡಿದ್ದಾರೆ.

ವಿಲ್ ಇನ್ನು ಯುವ ಆಟಗಾರ, ಆತ ಕೇವಲ ಒಂದು ಪಂದ್ಯವನ್ನಷ್ಟೇ ಆಡಿದ್ದಾನೆ. ಮಾನಸಿಕವಾಗಿ ಆತ ಆಯಾಸಗೊಂಡಿರುತ್ತಾನೆ. ಆತನ ಸ್ಥಿತಿ ಹೇಗಿದೆ ಎನ್ನುವುದನ್ನು ಗಮನಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ. ಆತನಿಂದ ಸಾಧ್ಯವಾಗದಿದ್ದರೆ ಸಹಜವಾಗಿಯೇ ಮಾರ್ಕಸ್ ಹ್ಯಾರಿಸ್ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ ಎಂದು ಲ್ಯಾಂಗರ್ ವಿವರಿಸಿದರು.

Story first published: Wednesday, January 13, 2021, 22:11 [IST]
Other articles published on Jan 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X