ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಶಕದ ಚೊಚ್ಚಲ ಶತಕ ಬಾರಿಸಿದ ಆಸೀಸ್ ದಾಂಡಿಗ ಮಾರ್ನಸ್ ಲ್ಯಾಬುಸ್ಚಾಗ್ನೆ

Marnus Labuschagne ton headlines Australias day

ಸಿಡ್ನಿ, ಜನವರಿ 3: 2020ರ ಇಸವಿಯಿಂದ ಹೊಸ ದಶಕ ಆರಂಭಗೊಂಡಿದೆ. ಈ ನೂತನ ದಶಕದಲ್ಲಿ ಚೊಚ್ಚಲ ಅಂತಾರಾಷ್ಟ್ರೀಯ ಶತಕ ಬಾರಿಸಿದ ಹೆಗ್ಗಳಿಕೆ ಆಸ್ಟ್ರೇಲಿಯಾದ ಮಾರ್ನಸ್ ಲ್ಯಾಬುಸ್ಚಾಗ್ನೆ ಅವರದ್ದಾಗಿದೆ. ಆಸ್ಟ್ರೇಲಿಯಾ vs ನ್ಯೂಜಿಲೆಂಡ್ 3ನೇ ಟೆಸ್ಟ್ ಪಂದ್ಯದಲ್ಲಿ ಲ್ಯಾಬುಸ್ಚಾಗ್ನೆ ಈ ದಾಖಲೆ ನಿರ್ಮಿಸಿದ್ದಾರೆ.

ಸ್ಟೋಯ್ನಿಸ್ ಎದುರು ಮಂಕಡ್ ನಾಟಕವಾಡಿದ ಕ್ರಿಸ್ ಮೋರಿಸ್: ವೀಡಿಯೋಸ್ಟೋಯ್ನಿಸ್ ಎದುರು ಮಂಕಡ್ ನಾಟಕವಾಡಿದ ಕ್ರಿಸ್ ಮೋರಿಸ್: ವೀಡಿಯೋ

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಆತಿಥೇಯರ ವಿರುದ್ಧ 3ನೇ ಟೆಸ್ಟ್ ಪಂದ್ಯವನ್ನಾಡುತ್ತಿದೆ. ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಆಸ್ಟ್ರೇಲಿಯಾ ಪರ ಲ್ಯಾಬುಸ್ಚಾಗ್ನೆ ಶತಕ ಬಾರಿಸಿದ್ದಾರೆ. ಇದು ಲ್ಯಾಬುಸ್ಚಾಗ್ನೆ ಅವರಿಂದಾದ 4ನೇ ಟೆಸ್ಟ್ ಶತಕ.

ನ್ಯೂಜಿಲೆಂಡ್ vs ಆಸ್ಟ್ರೇಲಿಯಾ, 3ನೇ ಟೆಸ್ಟ್, Live ಸ್ಕೋರ್‌ಕಾರ್ಡ್

1
45884

ಒಟ್ಟು 22 ಟೆಸ್ಟ್ ಇನ್ನಿಂಗ್ಸ್‌ಗಳನ್ನಾಡಿರುವ ಮಾರ್ನಸ್, 4 ಶತಕ, 7 ಅರ್ಧ ಶತಕಗಳನ್ನೂ ಬಾರಿಸಿದ್ದಾರೆ. 18 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 12 ವಿಕೆಟ್‌ಗಳನ್ನೂ ಪಡೆದಿದ್ದಾರೆ. ಎಲ್ಲದಕ್ಕಿಂತ ಮುಖ್ಯವಾಗಿ ಕಳೆದ ವರ್ಷ ಲ್ಯಾಬುಸ್ಚಾಗ್ನೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಲೀಡಿಂಗ್ ಸ್ಕೋರರ್ ಆಗಿ ಗಮನ ಸೆಳೆದಿದ್ದರು.

ರಣಜಿ ಟ್ರೋಫಿಯಲ್ಲಿ ಅಂಪೈರ್ ನಿಂದಿಸಿ ಗಲ್ಲೆಬ್ಬಿಸಿದ ಶುಬ್‌ಮಾನ್ ಗಿಲ್!ರಣಜಿ ಟ್ರೋಫಿಯಲ್ಲಿ ಅಂಪೈರ್ ನಿಂದಿಸಿ ಗಲ್ಲೆಬ್ಬಿಸಿದ ಶುಬ್‌ಮಾನ್ ಗಿಲ್!

2019ರಲ್ಲಿ ಟೆಸ್ಟ್‌ನಲ್ಲಿ 1104 ರನ್‌ ಗಳನ್ನು ಬಾರಿಸಿದ್ದ ಮಾರ್ನಸ್ ಅತ್ಯಧಿಕ ರನ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರು. ಕಳೆದ 10 ವರ್ಷಗಳಲ್ಲಿ ಟೆಸ್ಟ್‌ನ ಲೀಡಿಂಗ್‌ ಸ್ಕೋರರ್‌ಗಳೆಂದರೆ ಸಚಿನ್ ತೆಂಡೂಲ್ಕರ್ (2010, 1562 ರನ್‌ಗಳು), ರಾಹುಲ್ ದ್ರಾವಿಡ್ (2011, 1145 ರನ್), ಮೈಕಲ್ ಕ್ಲಾರ್ಕ್ (2012, 1595 ರನ್), ಕ್ಲಾರ್ಕ್ (2013, 1093 ರನ್), ಕುಮಾರ ಸಂಗಕ್ಕಾರ (2014, 1493 ರನ್‌), ಸ್ಟೀವ್ ಸ್ಮಿತ್ (2015, 1474 ರನ್‌), ಜೋ ರೂಟ್ (2016, 1477 ರನ್), ಸ್ಟೀವ್ ಸ್ಮಿತ್ (2017, 1305 ರನ್), ವಿರಾಟ್ ಕೊಹ್ಲಿ (2018, 1322 ರನ್).

Story first published: Friday, January 3, 2020, 16:42 [IST]
Other articles published on Jan 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X