'ಲಂಡನ್ ಐ' ಸಾಕ್ಷಿಯಾಗಿ ಗೆಳತಿಗೆ ಲವ್ ಪ್ರಪೋಸ್ ಮಾಡಿದ ಮಯಾಂಕ್

Posted By:

ಲಂಡನ್, ಡಿಸೆಂಬರ್ 31: ಥೇಮ್ಸ್ ನದಿಯ ತಪ್ಪಲಿನಲ್ಲಿ ಲಂಡನ್ ಐ ಟವರ್ ನಲ್ಲಿ ತನ್ನ ಗೆಳತಿಗೆ ಕ್ರಿಕೆಟರ್ ಮಯಾಂಕ್ ಅಗರವಾಲ್ ಅವರು ಪ್ರಪೋಸ್ ಮಾಡಿದ್ದಾರೆ.

ಕರ್ನಾಟಕ ಕ್ರಿಕೆಟಿಗ, ಪ್ರಸಕ್ತ ವರ್ಷದ ರಣಜಿ ಟ್ರೋಫಿಯಲ್ಲಿ ಸಾವಿರ ರನ್‌ ಸಿಡಿಸಿ ದಾಖಲೆ ಬರೆದಿರುವ ಮಯಾಂಕ್ ಅವರು ತಮ್ಮ ಗೆಳತಿ ಆಶಿತಾ ಸೂದ್‌ ಅವರ ಮುಂದೆ ಮಂಡಿಯೂರಿ ಮದುವೆಯಾಗುವಂತೆ ಕೋರಿದ್ದಾರೆ. ಮಯಾಂಕ್ ಪ್ರೀತಿಯ ಕೋರಿಕೆಗೆ ಆಶಿತಾ ಸಮ್ಮತಿಸಿದ್ದಾರೆ.

Mayank Agarwal proposes to his girl at London Eye

ತಮ್ಮ ಪ್ರೇಮ ನಿವೇದನೆ ಬಗ್ಗೆ ಮಯಾಂಕ್‌ ಅವರು ತಮ್ಮ ಅಧಿಕೃತ ಇನ್ಸ್‌ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಶನಿವಾರದಂದು ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಅವರ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಅವರು ಬರೆದಿದ್ದಾರೆ - ಅವರು (ಆಶಿತಾ ಸೂದ್) 'ಹೌದು' ಎಂದು ಹೇಳಿದ್ದಾರೆ. ನಾನು ಇದನ್ನು ಪದಗಳಲ್ಲಿ ಹೇಳಲಾರೆ ಈ ಕ್ಷಣ ನಮ್ಮಿಬ್ಬರಿಗೂ ಯಾವಾಗಲೂ ಸ್ಮರಿಣೀಯ ಎಂದಿದ್ದಾರೆ.

ಮಯಾಂಕ್‌ ಮತ್ತು ಆಶಿತಾ ಕಳೆದ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಎರಡೂ ಕುಟುಂಬಗಳು ಒಪ್ಪಿಗೆ ಸೂಚಿಸಿರುವುದರಿಂದ ಲಂಡನ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ

Story first published: Sunday, December 31, 2017, 12:12 [IST]
Other articles published on Dec 31, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ