ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೈಕಲ್ ವಾನ್ ಪ್ರಕಾರ ಭಾರತ-ಇಂಗ್ಲೆಂಡ್ ತಂಡಗಳಲ್ಲಿ ಈ ತಂಡ ಬಲಿಷ್ಠ!

Michael Vaughan says tough for England to beat Team India

ಲಂಡನ್: ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯ ಮುಗಿದಿದ್ದಾಗಿದೆ. ನ್ಯೂಜಿಲೆಂಡ್ ವಿರುದ್ಧ ಭಾರತ 8 ವಿಕೆಟ್‌ ಸೋಲಿನೊಂದಿಗೆ ಹತಾಶೆ ಅನುಭವಿಸಿದ್ದಾಗಿದೆ. ಮುಂದೆ ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ಐದು ಪಂದ್ಯಗಳ ಟೆಸ್ಟ್‌ ಸರಣಿ ಕುತೂಹಲ ಮೂಡಿಸಿದೆ. ಆಗಸ್ಟ್ 4ರಿಂದ ಸೆಪ್ಟೆಂಬರ್‌ 14ರ ವರೆಗೆ ಭಾರತ-ಇಂಗ್ಲೆಂಡ್ ಟೆಸ್ಟ್‌ ಸರಣಿ ನಡೆಯಲಿದೆ.

'ಗ್ರೇಟ್‌ವಾಲ್‌-2' ಪೂಜಾರಗೆ ಮುಂದೆ ಭಾರತ ತಂಡದಲ್ಲಿ ಜಾಗ ಇಲ್ವಾ?!'ಗ್ರೇಟ್‌ವಾಲ್‌-2' ಪೂಜಾರಗೆ ಮುಂದೆ ಭಾರತ ತಂಡದಲ್ಲಿ ಜಾಗ ಇಲ್ವಾ?!

ಇಂಗ್ಲೆಂಡ್‌ ಮಾಜಿ ನಾಯಕ ಮೈಕಲ್ ವಾನ್, WTC ಫೈನಲ್‌ನಲ್ಲಿ ನ್ಯೂಜಿಲೆಂಡ್‌ ಗೆಲ್ಲಲಿದೆ ಎಂದಿದ್ದರು. ಹಾಗೇ ನ್ಯೂಜಿಲೆಂಡ್ ಗೆದ್ದಿತ್ತು. ವಾನ್ ಈ ಬಾರಿ ಭಾರತ-ಇಂಗ್ಲೆಂಡ್ ಟೆಸ್ಟ್‌ ಸರಣಿಯಲ್ಲಿ ಯಾರು ಗೆಲ್ಲಿದ್ದಾರೆ ಅನ್ನೋದನ್ನು ಊಹಿಸಿದ್ದಾರೆ. ವಾನ್ ಭಾರತದ ಕಡೆಗೆ ಒಲವು ತೋರಿಸಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ಸತತ ಸೋಲಿನಿಂದ ಈಗಾಗಲೇ ಭಾರತ ಕೆರಳಿದೆ. ಜೊತೆಗೆ ಮುಂಬರಲಿರುವ ಟೆಸ್ಟ್‌ ಸರಣಿಯಲ್ಲಿ ಇಂಗ್ಲೆಂಡ್‌ನ ಬ್ಯಾಟಿಂಗ್‌ ಲೈನ್‌ಅಪ್‌ ಅಷ್ಟೇನೂ ಸರಿಯಿಲ್ಲ. ಅಲ್ಲದೆ ಇಂಗ್ಲೆಂಡ್ ತಂಡದಲ್ಲಿ ಇನ್ನೊಂದಿಷ್ಟು ಸಮಸ್ಯೆಗಳಿವೆ. ಹೀಗಾಗಿ ಭಾರತವನ್ನು ಸೋಲಿಸೋದು ಇಂಗ್ಲೆಂಡ್‌ಗೆ ಕಷ್ಟವಾಗಬಹುದು ಎಂದು ವಾನ್ ಹೇಳಿದ್ದಾರೆ.

World Test Championship 2ನೇ ಆವೃತ್ತಿಗೆ ಭಾರತದ ವೇಳಾಪಟ್ಟಿ ಪ್ರಕಟ!World Test Championship 2ನೇ ಆವೃತ್ತಿಗೆ ಭಾರತದ ವೇಳಾಪಟ್ಟಿ ಪ್ರಕಟ!

ಮುಂದಿನ CM ಬಗ್ಗೆ ಇಬ್ರಾಹಿಂ ಅಭಿಪ್ರಾಯ ವ್ಯಕ್ತ ಪಡಿಸಿದ್ದು ಹೀಗೇ ! | Oneindia Kannada

"ಜೋಸ್ ಬಟ್ಲರ್, ಬೆನ್ ಸ್ಟೋಕ್ಸ್, ಕ್ರಿಸ್ ವೋಕ್ಸ್ ತಂಡಕ್ಕೆ ಮರಳಿದ್ದಾರೆ. ನಿಜ ಅವರು ತಂಡವನ್ನು ಸುಧಾರಿಸುತ್ತಾರೆ. ಆದರೆ ಬ್ಯಾಟಿಂಗ್‌ ಲೈನ್‌ಅಪ್ ಬದಲಾಗದಿದ್ದರೆ ಒಳ್ಳೆಯ ಬೌಲಿಂಗ್ ತಂಡದ ವಿರುದ್ಧ ದೊಡ್ಡ ರನ್ ಕಲೆ ಹಾಕೋದು ಕಷ್ಟ. ಇಂಗ್ಲೆಂಡ್ ತಂಡ ಭಾರತದ ವಿರುದ್ಧ ಹೇಗೆ ಸ್ಪರ್ಧಿಸುತ್ತದೋ ಗೊತ್ತಿಲ್ಲ. ಇಂಗ್ಲೆಂಡ್‌ಗೆ ಭಾರತ ಸೋಲಿಸೋದು ಬಲು ಕಷ್ಟವಾಗಲಿದೆ," ಎಂದು ವಾನ್ ಅಭಿಪ್ರಾಯಿಸಿದ್ದಾರೆ.

Story first published: Saturday, June 26, 2021, 14:34 [IST]
Other articles published on Jun 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X