ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಾರ್ನರ್, ಸ್ಮಿತ್ ಮತ್ತೆ ಆಸ್ಟ್ರೇಲಿಯಾ ತಂಡದ ನಾಯಕರಾಗಬಾರದು ಎಂದ ಆಸಿಸ್ ಮಾಜಿ ಕ್ರಿಕೆಟಿಗ

Mitchell Johnson said David Warner, Steve Smith should not lead Australia again

ಏಕದಿನ ಮಾದರಿಗೆ ಆಸ್ಟ್ರೇಲಿಯಾ ವೈಟ್‌ ಬಾಲ್ ತಂಡದ ನಾಯಕ ಆರೋನ್ ಫಿಂಚ್ ನಿವೃತ್ತಿ ಘೋಷಣೆ ಮಾಡಿದ್ದಾರೆ. ಹೀಗಾಗಿ ಏಕದಿನ ಮಾದರಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಮು್ನನಡೆಸುವವರು ಯಾರು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಸ್ಪೋಟಕ ಬ್ಯಾಟರ್ ಡೇವಿಡ್ ವಾರ್ನರ್‌ಗೆ ಏಕದಿನ ಮಾದರಿಯ ನಾಯಕತ್ವ ನೀಡಬೇಕು ಎಂಬ ಅಭಿಪ್ರಾಯಗಳು ಕೂಡ ವ್ಯಕ್ತವಾಗುತ್ತಿದೆ. ಆದರೆ ಇದಕ್ಕೆ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗರಿಗರಿಂದಲೇ ವಿರೋಧಗಳು ವ್ಯಕ್ತವಾಗಿದೆ.

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಮಿಚೆಲ್ ಜಾನ್ಸನ್ ಈ ವಿಚಾರವಾಗಿ ಮಾತನಾಡಿದ್ದಾರೆ. ಆಸ್ಟ್ರೇಲಿಯಾ ತಂಡದ ನಾಯಕತ್ವವನ್ನು ಡೇವಿಡ್ ವಾರ್ನರ್ ಅಥವಾ ಸ್ಟೀವ್ ಸ್ಮಿತ್‌ಗೆ ಮತ್ತೊಮ್ಮೆ ನೀಡಬಾರದು ಎಂದು ದೃಢವಾಗಿ ಹೇಳಿಕೊಂಡಿದ್ದಾರೆ.

ಟಿ20 ವಿಶ್ವಕಪ್: ಭಾರತ ತಂಡದ ಆಯ್ಕೆಯಲ್ಲಿ ದೊಡ್ಡ ಲೋಪವನ್ನು ಬೊಟ್ಟು ಮಾಡಿದ ಆಸಿಸ್ ಸ್ಟಾರ್!ಟಿ20 ವಿಶ್ವಕಪ್: ಭಾರತ ತಂಡದ ಆಯ್ಕೆಯಲ್ಲಿ ದೊಡ್ಡ ಲೋಪವನ್ನು ಬೊಟ್ಟು ಮಾಡಿದ ಆಸಿಸ್ ಸ್ಟಾರ್!

ಮೂರು ಮಾದರಿಯಲ್ಲೂ ಪ್ಯಾಟ್ ಕಮಿನ್ಸ್ ಅಸಾಧ್ಯ

ಮೂರು ಮಾದರಿಯಲ್ಲೂ ಪ್ಯಾಟ್ ಕಮಿನ್ಸ್ ಅಸಾಧ್ಯ

ಇನ್ನು ಟೆಸ್ಟ್ ತಂಡದ ನಾಯಕನಾಗಿರುವ ಪ್ಯಾಟ್ ಕಮಿನ್ಸ್ ಮೂರು ಮಾದರಿಯಲ್ಲಿಯೂ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸುವುದು ಅಸಾಧ್ಯ ಎಂಬ ಅಭಿಪ್ರಾಯವನ್ನು ಮಿಚೆಲ್ ಜಾನ್ಸನ್ ಹೇಳಿದ್ದಾರೆ. ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕನಾಗಿದ್ದ ಟಿಮ್ ಪೈಯ್ನ್ ವಿವಾದವೊಂದರ ಬಳಿಕ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದರು. ಹೀಗಾಗಿ ಬಳಿಕ ಟೆಸ್ಟ್ ನಾಯಕತ್ವ ಪ್ಯಾಟ್ ಕಮಿನ್ಸ್ ಹೆಗಲೇರಿದೆ.

ಮುನ್ನಡೆಸಬಲ್ಲ ನಾಯಕರನ್ನು ಹೆಸರಿಸಿದ ಜಾನ್ಸನ್

ಮುನ್ನಡೆಸಬಲ್ಲ ನಾಯಕರನ್ನು ಹೆಸರಿಸಿದ ಜಾನ್ಸನ್

ಇನ್ನು ಇದೇ ಸಂದರ್ಭದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಏಕದಿನ ಮಾದರಿಗೆ ನಿವೃತ್ತಿ ಹೇಳಿರುವ ಆರೋನ್ ಫಿಂಚ್ ಬದಲಿಗೆ ಯಾರು ನಾಯಕನಾಗಬಹುದು ಎಂಬುದನ್ನು ಜಾನ್ಸನ್ ಹೇಳಿದ್ದಾರೆ. ಆಸಿಸ್ ಮಾಜಿ ವೇಗಿ ಜಾನ್ಸನ್ ಪ್ರಕಾರ ಟ್ರೇವಿಸ್ ಹೆಡ್, ಗ್ಲೆನ್ ಮೆಕ್‌ಗ್ರಾಥ್ ಮತ್ತು ಕ್ಯಾಮರೂನ್ ಗ್ರೀನ್ ಈ ಮೂವರ ಪೈಕಿ ಯಾರಾದರೂ ನಾಯಕನಾದರೆ ಉತ್ತಮ ಎಂಬ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. "ಗ್ಲೆನ್ ಮ್ಯಾಕಲ್ಸ್‌ವೆಲ್ ಬಗ್ಗೆ ಆಯ್ಕೆಗಾರರು ಖಂಡಿತವಾಗಿಯೂ ಯೋಚಿಸಿರುತ್ತಾರೆ. ಭವಿಷ್ಯವನ್ನು ನೋಡಿದರೆ ಕ್ಯಾಮರೂನ್ ಗ್ರೀನ್ ಕೂಡ ಉತ್ತಮ ಆಯ್ಕೆಯಾಗಬಲ್ಲರು. ಆದರೆ ಆಲ್‌ರೌಂಡರ್ ಆಗಿ ಅವರ ಮೇಲೆ ಈಗಲೇ ಸಾಕಷ್ಟು ಕೆಲಸದ ಒತ್ತಡಗಳು ಇದೆ. ಟ್ರೆವಿಸ್ ಹೆಡ್ ಕೂಡ ಆಯ್ಕೆಯಾಗಬಹುದು, ಆದರೆ ಅವರು ಇನ್ನಷ್ಟು ಸ್ಥಿರ ಪ್ರದರ್ಶನವನ್ನು ನೀಡಬೇಕಾಗುತ್ತದೆ"ಎಂದಿದ್ದಾರೆ ಜಾನ್ಸನ್.

ಸ್ಮಿತ್, ವಾರ್ನರ್ ಬೇಡ

ಸ್ಮಿತ್, ವಾರ್ನರ್ ಬೇಡ

ಇನ್ನು ಆಸ್ಟ್ರೇಲಿಯಾ ತಂಡದ ನಾಯಕತ್ವವನ್ನು ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಅವರಿಗೆ ನೀಡುವ ವಿಚಾರವಾಗಿ ತಮ್ಮ ವಿರೋಧವನ್ನು ಬಲವಾಗಿ ವ್ಯಕ್ತಪಡಿಸಿದ್ದಾರೆ ಮಿಚೆಲ್ ಜಾನ್ಸನ್. "ವಾರ್ನರ್ ಹಾಗೂ ಸ್ಮಿತ್ ಇಬ್ಬರು ಕೂಡ ನಾಯಕರಾಗಬಾರದು. ಆದರೆ ಅವರು ಈಗಾಗಲೇ ನಾಯಕನಾಗಿದ್ದ ಕಾರಣ ನಾಯಕನಿಗೆ ಸಲಹೆ ನೀಡುವ ವಿಚಾರವಾಗಿ ಯಾವುದೇ ಅಭ್ಯಂತರವಿಲ್ಲ. ಮತ್ತೆ ಅವರನ್ನು ನಾಯಕರನ್ನಾಗಿ ಮಾಡುವ ಅಗತ್ಯ ನನಗೆ ಕಾಣಿಸುತ್ತಿಲ್ಲ. ಅದು ಹಳೇಯ ನೆನಪುಗಳನ್ನು ಮರುಕಳಿಸುತ್ತದೆ. ಇನ್ನು ಅವರಿಬ್ಬರು ಕೂಡ ವೃತ್ತಿ ಜೀವನದ ಅಂತ್ಯ ಭಾಗದತ್ತ ತೆರಳುತ್ತಿದ್ದಾರೆ. ಹಾಗಾಗಿ ಹೆಚ್ಚು ಕಾಲ ಇರುವಂತಾ ಆಟಗಾರರಿಗೆ ತಂಡದ ನಾಯಕತ್ವದ ಹೊಣೆಗಾರಿಕೆ ನೀಡಬೇಕಾಗುತ್ತದೆ" ಎಂದು ಮಿಚೆಲ್ ಜಾನ್ಸನ್ ಹೇಳಿದ್ದಾರೆ.

ವಾರ್ನರ್‌ ಏಕದಿನ ನಾಯಕತ್ವ ಪಟ್ಟ ಸಾಧ್ಯತೆ

ವಾರ್ನರ್‌ ಏಕದಿನ ನಾಯಕತ್ವ ಪಟ್ಟ ಸಾಧ್ಯತೆ

ಇನ್ನು ಇಷ್ಟೆಲ್ಲಾ ಚರ್ಚೆಗಳ ಮಧ್ಯೆಯೂ ಆಸ್ಟ್ರೇಲಿಯಾದ ಏಕದಿನ ತಂಡದ ನಾಯಕತ್ವ ಯಾರಿಗೆ ದೊರೆಯಲಿದೆ ಎಂಬುದು ಸ್ಪಷ್ಟವಾಗಿಲ್ಲ. ಮಾಹಿತಿಯ ಪ್ರಕಾರ ಡೇವಿಡ್ ವಾರ್ನರ್‌ಗೆ ಆಸಿಸ್ ಏಕದಿನ ತಮಡದ ನಾಯಕತ್ವ ದೊರೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಸ್ಯಾಂಡ್‌ಪೇಪರ್ ಪ್ರಕರಣದ ಬಳಿಕ ನಿಷೇಧ ಅನುಭವಿಸಿ ತಂಡಕ್ಕೆ ಸೇರ್ಪಡೆಯಾದ ಬಳಿಕ ಸ್ಮಿತ್ ಹಾಗೂ ವಾರ್ನರ್ ಇಬ್ಬರನ್ನೂ ಕೂಡ ನಾಯಕತ್ವದ ಹೊಣೆಗೆ ಪರಿಗಣಿಸಿರಲಿಲ್ಲ. ಆದರೆ ಕಳೆದ ವರ್ಷಾಂತ್ಯದಲ್ಲಿ ಟಿಮ್ ಪೈಯ್ನ್ ಆಸಿಸ್ ಟೆಸ್ಟ್ ತಂಡದ ನಾಯಕತ್ವ ತೊರೆದ ಬಳಿಕ ಉಪನಾಯಕನಾಗಿದ್ದ ಪ್ಯಾಟ್ ಕಮಿನ್ಸ್ ಅವರನ್ನು ಆಯಕನನ್ನಾಗಿ ನೇಮಕಗೊಳಸಲಾಗಿತ್ತು. ಈ ಸಂದರ್ಭದಲ್ಲಿ ಸ್ಟೀವ್ ಸ್ಮಿತ್ ಅವರನ್ನು ಆಸ್ಟ್ರೇಲಿಯಾ ಟೆಸ್ಟ್ ತಂಡದ ಉಪನಾಯಕನನ್ನಾಗಿ ನೇಮಿಸಲಾಗಿದೆ. ಹೀಗಾಗಿ ಸ್ಮಿತ್ ನಾಯಕತ್ವದ ಗುಂಪಿಗೆ ಮತ್ತೆ ಸೇರಿಕೊಂಡಿದ್ದಾರೆ. ಹೀಗಾಗಿ ವಾರ್ನರ್‌ಗೂ ಅವಕಾಶ ದೊರೆಯುವ ನಿರೀಕ್ಷೆಗಳಿದೆ.

Story first published: Saturday, September 17, 2022, 9:58 [IST]
Other articles published on Sep 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X