ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಿಎಸ್‌ಎಲ್‌ನಲ್ಲಿ ಕೊಹ್ಲಿ, ರೋಹಿತ್ ಆಡಿದರೆ ಅದ್ಭುತವಾಗಿರಲಿದೆ: ಮೊಹಮ್ಮದ್ ಆಮಿರ್

Mohammad Amir says it would have been great if indian starts played in the PSL

ವಿಶ್ವ ಕ್ರಿಕೆಟ್‌ನಲ್ಲಿ ಲೀಗ್ ಟೂರ್ನಿಗಳು ಉತ್ತುಂಗ ಸ್ಥಿತಿಯಲ್ಲಿದೆ. ಕ್ರಿಕೆಟ್ ಆಡುವ ಬಹುತೇಕ ಎಲ್ಲಾ ರಾಷ್ಟ್ರಗಳು ಕೂಡ ಲೀಗ್ ಟೂರ್ನಿಗಳನ್ನು ಆಯೋಜಿಸುತ್ತಿದೆ. ಭಾರತದ ಐಪಿಎಲ್ ಇದರಲ್ಲಿ ಅತ ದೊಡ್ಡ ಯಶಸ್ಸು ಸಾಧಿಸುತ್ತಿದ್ದರೂ ಕೆರಿಬಿಯನ್ ಪ್ರೀಮಿಯರ್ ಲೀಗ್, ಪಾಕಿಸ್ತಾನ್ ಪ್ರೀಮಿಯರ್ ಲೀಗ್‌ಗಳು ಕೂಡ ಯಶಸ್ಸಿನ ಹಾದಿಯಲ್ಲಿದೆ. ಈ ಬಾರಿ ಲಂಕಾ ಪ್ರೀಮಿಯರ್ ಲೀಗ್ ಕೂಡ ಇದಕ್ಕೆ ಸೇರ್ಪಡೆಗೊಳ್ಳುತ್ತಿದೆ.

ಪಾಕಿಸ್ತಾನದ ವೇಗದ ಬೌಲರ್ ಮೊಹಮ್ಮದ್ ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಕಣಕ್ಕಿಳಿಯಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಈ ಇಬ್ಬರು ಆಟಗಾರರು ಪಿಎಸ್‌ಎಲ್‌ನಲ್ಲಿ ಕಣಕ್ಕಿಳಿದರೆ ಅದ್ಭುತವಾಗಿರಲಿದೆ ಎಂದು ಆಮಿರ್ ಹೇಳಿದ್ದಾರೆ.

ಕೋವಿಡ್ ಪರೀಕ್ಷೆಯಲ್ಲಿ ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಆಟಗಾರರು ಪಾಸ್ಕೋವಿಡ್ ಪರೀಕ್ಷೆಯಲ್ಲಿ ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಆಟಗಾರರು ಪಾಸ್

ಈ ಎರಡು ದೇಶಗಳ ಮಧ್ಯೆ ದ್ವಿಪಕ್ಷೀಯ ಸರಣಿ ನಡೆದೇ ದಶಕಗಳು ಆಗುತ್ತಾ ಬಂದಿರುವ ಈ ಸಂದರ್ಭದಲ್ಲಿ ಆಮಿರ್ ವ್ಯಕ್ತಪಡಿಸಿರುವ ಆಶಯ ನಡೆಯುವುದು ಅಸಂಭವ. ಇದರ ಜೊತೆಗೆ ಭಾರತೀಯ ಕ್ರಿಕೆಟಿಗರು ಕೌಂಟಿ ಕ್ರಿಕೆಟ್ ಹೊರತು ಪಡಿಸಿ ಉಳಿದ ಯಾವುದೇ ವಿದೇಶಿ ಲೀಗ್‌ಗಳಲ್ಲಿ ಪಾಲ್ಗೊಳ್ಳಲು ಬಿಸಿಸಿಐ ಕಡೆಯಿಂದ ನಿರ್ಬಂಧವೂ ಇದೆ.

ಯೂಟ್ಯೂಬ್‌ ಚಾನೆಲ್‌ವೊಂದಕ್ಕ ಮೊಹಮ್ಮದ್ ಆಮೀರ್ ಸಂದರ್ಶನವನ್ನು ನೀಡಿದ್ದರು ಈ ಸಂದರ್ಭದಲ್ಲಿ ರಾಜಕೀಯ ವಿಚಾರಗಳನ್ನು ಬದಿಗಿಟ್ಟು ಐಪಿಎಲ್ ಹಾಗೂ ಪಿಎಸ್‌ಎಲ್‌ನಲ್ಲಿ ಕ್ರಿಕೆಟ್‌ಅನ್ನು ಜೊತೆಯಾಗಿ ಆಡಬೇಕು ಎಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಪಿಎಸ್‌ಎಲ್‌ನಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡುವುದನ್ನು ಇಷ್ಟಪಡುತ್ತೇನೆ ಎಂದಿದ್ದಾರೆ.

India vs Australia: ಕನ್ನಡ ಕಾಮೆಂಟರಿಗೆ ಅಭಿಮಾನಿಗಳ ಒತ್ತಾಯIndia vs Australia: ಕನ್ನಡ ಕಾಮೆಂಟರಿಗೆ ಅಭಿಮಾನಿಗಳ ಒತ್ತಾಯ

ಐಪಿಎಲ್‌ನ ಆರಂಭಿಕ ಆವೃತ್ತಿಯಲ್ಲಿ ಪಾಕಿಸ್ತಾನದ ಬಹುತೇಕ ಆಟಗಾರರು ಪಾಲ್ಗೊಂಡಿದ್ದರು. ಶಾಹಿದ್ ಅಫ್ರಿದಿ, ಶೋಯೆಬ್ ಅಖ್ತರ್, ಶೋಯೆಬ್ ಮಲಿಕ್, ಉಮರ್ ಗುಲ್, ಯೂನಿಸ್ ಖಾನ್, ಮಿಸ್ಬಾ ಉಲ್ ಹಕ್, ಸೋಹೈಲ್ ತನ್ವೀರ್ ಸೇರಿದಂತೆ ಇನ್ನೂ ಹಲವು ಕ್ರಿಕೆಟಿಗರು ಪಾಲ್ಗೊಂಡಿದ್ದರು. 2008ರಲ್ಲಿ ನಡೆದ ಮೊದಲ ಆವೃತ್ತಿಯ ನಂತರ ಪಾಕ್ ಆಟಗಾರರನ್ನು ಐಪಿಎಲ್‌ನಲ್ಲಿ ಆಡುವುದನ್ನು ನಿರಾಕರಿಸಲಾಯಿತು.

Story first published: Wednesday, November 25, 2020, 17:36 [IST]
Other articles published on Nov 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X