ಭಾರತೀಯ ವ್ಯವಸ್ಥೆಯನ್ನು ಹೊಗಳುತ್ತಾ ಪಾಕ್ ಆಯ್ಕೆ ಮಂಡಳಿಯ ಕ್ರಮಕ್ಕೆ ಅಮೀರ್ ಚಾಟಿ

ಪಾಕಿಸ್ತಾನ ಕ್ರಿಕೆಟ್ ತಂದ ಮಾಜಿ ವೇಗದ ಬೌಲರ್ ಮೊಹಮ್ಮದ್ ಅಮೀರ್ ಮತ್ತೊಮ್ಮೆ ಪಾಕಿಸ್ತಾನ ಕ್ರಿಕೆಟ್ ತಂಡದ ಆಯ್ಕೆ ಮಂಡಳಿಯ ವಿರುದ್ಧ ಕಟು ಮಾತುಗಳಲ್ಲಿ ಟೀಕಿಸಿದ್ದಾರೆ. ಪಾಕಿಸ್ತಾನ ಆಯ್ಕೆ ಮಂಡಳಿ ಸಾಕಷ್ಟು ನ್ಯೂನ್ಯತೆಗಳನ್ನು ಹೊಂದಿರುವ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಲು ಸಮರ್ಥರಲ್ಲದ ಆಟಗಾರರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡುತ್ತದೆ ಎಂದು ಅಮೀರ್ ಕುಟುಕಿದ್ದಾರೆ.

ಈ ಸಂದರ್ಭದಲ್ಲಿ ಅವರು ಭಾರತ, ಇಂಗ್ಲೆಂಡ್, ನ್ಯೂಜಿಲೆಂಡ್ ತಂಡಗಳ ಆಯ್ಕೆ ಮಂಡಳಿಯ ಮಾನದಂಡಗಳತ್ತ ಬೊಟ್ಟು ಮಾಡಿದರು. "ಈ ತಂಡಗಳ ಆಯ್ಕೆಗಾರರು ದೇಶೀಯ ಕ್ರಿಕೆಟ್‌ನಲ್ಲಿ ಸಮರ್ಥವಾಗಿ ಅಭ್ಯಾಸವನ್ನು ನಡೆಸಿರುವ ಆಟಗಾರರನ್ನು ಆಯ್ಕೆ ಮಾಡುತ್ತದೆ. ಆದರೆ ಪಾಕಿಸ್ತಾನದ ಯುವ ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡುತ್ತಾ ಕಲಿತುಕೊಳ್ಳುವುದನ್ನು ಬಯಸುತ್ತಾರೆ" ಎಂದಿದ್ದಾರೆ ಮೊಹಮ್ಮದ್ ಅಮೀರ್ .

ಚಹಾಲ್‌ಗಿಂತ ಮೊಹಮ್ಮದ್ ಸಿರಾಜ್ ಉತ್ತಮ ಬೌಲರ್ ಎನ್ನುತ್ತಿವೆ ಈ ಅಂಕಿಅಂಶಗಳು

ಆಯ್ಕೆ ಮಂಡಳಿಯ ಕ್ರಮದ ಬಗ್ಗೆ ಅಮೀರ್ ಗರಂ

ಆಯ್ಕೆ ಮಂಡಳಿಯ ಕ್ರಮದ ಬಗ್ಗೆ ಅಮೀರ್ ಗರಂ

"ಭಾರತ, ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳು ಅಂತಾರಾಷ್ಟ್ರೀಯ ಮಟ್ಟಕ್ಕೆ ಕರೆತರುವ ಆಟಗಾರರನ್ನು ನೋಡಿಕೊಳ್ಳಿ. ಅವರು ಕಠಿಣ ಅಭ್ಯಾಸಗಳನ್ನು ದೇಶೀಯ ಕ್ರಿಕೆಟ್ ಮತ್ತು ಜೂನಿಯರ್ ಮಟ್ಟದಲ್ಲಿ ಪಡೆದುಕೊಳ್ಳುವುದರಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡುವುದಕ್ಕೆ ಸಂಪೂರ್ಣ ಸಿದ್ಧರಾಗಿರುತ್ತಾರೆ. ಒಮ್ಮೆ ಆಯ್ಕೆಯಾದರೆ ತಾವು ದೇಶೀಯ ಕ್ರಿಕೆಟ್‌ನಲ್ಲಿ ಕಲಿತ ಕೌಶಲ್ಯಗಳನ್ನು ತೋರಿಸಲು ಸಮರ್ಥರಾಗಿರುತ್ತಾರೆ"

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಲಿಯುವ ನಿರೀಕ್ಷೆ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಲಿಯುವ ನಿರೀಕ್ಷೆ

"ಆದರೆ ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಯುವ ಆಟಗಾರರು ವೃತ್ತಿ ಜೀವನದ ಆರಂಭಕ್ಕೂ ಮುನ್ನವೇ ಕೌಶಲ್ಯಗಳನ್ನು ಸಂಪಾದಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಆಯ್ಕೆಯಾದ ನಂತರ ರಾಷ್ಟ್ರೀಯ ಕೋಚ್‌ಗಳ ಕಡೆಯಿಂದ ಕೌಶಲ್ಯಗಳನ್ನು ಅಭ್ಯಾಸ ಮಾಡುವ ನಿರೀಕ್ಷೆಯನ್ನು ಹೊಂದಿರುತ್ತಾರೆ" ಎಂದಿದ್ದಾರೆ ಮೊಹಮ್ಮದ್ ಅಮೀರ್.

ಭಾರತೀಯರನ್ನು ನೀಡಿ ಕಲಿಯಿರಿ

ಭಾರತೀಯರನ್ನು ನೀಡಿ ಕಲಿಯಿರಿ

"ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಹಾಗೂ ಕೃನಾಲ್ ಪಾಂಡ್ಯ ಅವರನ್ನು ನೋಡಿ. ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟಾಗಲೇ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಸಿದ್ದರಾಗಿದ್ದರು. ಈ ಹಂತದಲ್ಲಿ ಅವರು ಹೆಚ್ಚಿನ ಸಲಹೆ ಅಥವಾ ಕೋಚಿಂಗ್‌ಅನ್ನು ಅಗತ್ಯವಿರಲಿಲ್ಲ. ಅವರು ಸಾಕಷ್ಟು ವರ್ಷಗಳ ಕಾಲ ದೇಶೀಯ ಕ್ರಿಕೆಟ್‌ನಲ್ಲಿ ಭಾಗಿಯಾಗಿದ್ದರು. ಜೊತೆಗೆ ಐಪಿಎಲ್ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಪದಾರ್ಪಣೆಯನ್ನು ಮತ್ತಷ್ಟು ಸುಲಭವಾಗಿಸಿದೆ" ಎಂದು ಭಾರತೀಯ ಕ್ರಿಕೆಟ್ ವ್ಯವಸ್ಥೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾ ಪಾಕಿಸ್ತಾನದ ವ್ಯವಸ್ಥೆಯ ಬಗ್ಗೆ ಅಮೀರ್ ಟೀಕಿಸಿದರು.

For Quick Alerts
ALLOW NOTIFICATIONS
For Daily Alerts
Story first published: Wednesday, May 12, 2021, 15:52 [IST]
Other articles published on May 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X