ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರವಿಶಾಸ್ತ್ರಿ ವಿರುದ್ಧ ಗುಡುಗಿದ ಮಾಜಿ ಕ್ರಿಕೆಟಿಗ ಅಜರುದ್ದೀನ್

ಟೀಂ ಇಂಡಿಯಾ ಮುಖ್ಯ ತರಬೇತುದಾರ ರವಿಶಾಸ್ತ್ರಿ ವಿರುದ್ಧ ಮಾಜಿ ಕ್ರಿಕೆಟಿಗ ಅಜರುದ್ದೀನ್ ಗರಂ. ನಿವೃತ್ತ ಕ್ರಿಕೆಟಿಗರ ಬಗ್ಗೆ ಹಗುರವಾಗಿ ಮಾತನಾಡಿದ್ದಕ್ಕೆ ಕಿಡಿ. 

ಹೈದರಾಬಾದ್, ಆಗಸ್ಟ್ 11: ಹಾಲಿ ಟೀಂ ಇಂಡಿಯಾ ಕೋಚ್ ಆಗಿರುವ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ವಿರುದ್ಧ ಮತ್ತೊಬ್ಬ ಮಾಜಿ ಕ್ರಿಕೆಟಿಗ ಹಾಗೂ ಟೀಂ ಇಂಡಿಯಾದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರು ಹರಿಹಾಯ್ದಿದ್ದಾರೆ.

ಕಪ್ಪು ಬಣ್ಣದವರನ್ನು ಕೀಳಾಗಿ ಕಾಣಬೇಡಿ: ಮುಕುಂದ್ಕಪ್ಪು ಬಣ್ಣದವರನ್ನು ಕೀಳಾಗಿ ಕಾಣಬೇಡಿ: ಮುಕುಂದ್

ಇತ್ತೀಚೆಗೆ ನಡೆದ ಶ್ರೀಲಂಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯಕ್ಕೂ ಮುನ್ನ ರವಿಶಾಸ್ತ್ರಿ ನೀಡಿದ್ದ ಹೇಳಿಕೆಯೊಂದು ಅಜರುದ್ದೀನ್ ಅವರನ್ನು ಕೆರಳಿಸಿದೆ.

Mohammad Azharuddin lashes out Ravi Shastri's praise on Virat Kohli-led Team India

ಪಂದ್ಯಕ್ಕೂ ಮುನ್ನ ನಡೆದಿದ್ದ ಪತ್ರಿಕಾಗೋಷ್ಠಿಯಲ್ಲಿ ರವಿಶಾಸ್ತ್ರಿ, ''ಶ್ರೀಲಂಕಾದಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಭಾರತ, ಈ ಹಿಂದೆ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಯಾವುದೇ ಟೀಂ ಇಂಡಿಯಾ ನೀಡಿದ್ದ ಪ್ರದರ್ಶನಕ್ಕಿಂತ ಶ್ರೇಷ್ಠ ಪ್ರದರ್ಶನ ನೀಡಲಿದೆ. 20 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದ ಯಾವುದೇ ಭಾರತೀಯ ಆಟಗಾರನಿಗಿಂತಲೂ ಉನ್ನತ ಮಟ್ಟದ ಪ್ರದರ್ಶನವನ್ನು ಭಾರತ ನೀಡಲಿದೆ'' ಎಂದಿದ್ದರು.

ಈ ಹೇಳಿಕೆಯು ಅಜರ್ ವಿರುದ್ಧದ ಪರೋಕ್ಷ ಟೀಕೆ ಆಗಿರಲಿಲ್ಲವಾದರೂ, ಈ ಬಗ್ಗೆ ಈಗ ಪ್ರತಿಕ್ರಿಯಿಸಿರುವ ಅಜರುದ್ದೀನ್, ''20 ವರ್ಷಗಳ ಅನುಭವ ಇರುವ ಯಾವುದೇ ಆಟಗಾರ ತೋರದ ಛಾತಿ ಇಂದಿನ ಭಾರತೀಯ ತಂಡದ ಆಟಗಾರರು ತೋರಲಿದ್ದಾರೆ ಎಂದು ಹೇಳುವ ಮೂಲಕ ರವಿಶಾಸ್ತ್ರಿ ಅವರು, ಅನೇಕ ಮಾಜಿ ಕ್ರಿಕೆಟರ್ ಗಳ ಬಗ್ಗೆ ಅಗೌರವ ತೋರಿದ್ದಾರೆ'' ಎಂದಿದ್ದಾರೆ.

'ಕುಂಬ್ಳೆ, ಶಾಸ್ತ್ರಿ ಮುಖ್ಯರಲ್ಲ, ಆಟಗಾರರು ಮುಖ್ಯ''ಕುಂಬ್ಳೆ, ಶಾಸ್ತ್ರಿ ಮುಖ್ಯರಲ್ಲ, ಆಟಗಾರರು ಮುಖ್ಯ'

ತಮ್ಮ ಮಾತುಗಳನ್ನು ಮುಂದುವರಿಸಿರುವ ಅವರು, ''ಸದ್ಯಕ್ಕೆ ಭಾರತದ ವಿರುದ್ಧ ಆಡುತ್ತಿರುವ ಶ್ರೀಲಂಕಾ ತಂಡ, ದುರ್ಬಲವಾಗಿದೆ. ಇತ್ತೀಚೆಗೆ ನಡೆದಿದ್ದ ಜಿಂಬಾಬ್ವೆಯಂಥ ದುರ್ಬಲ ತಂಡದ ವಿರುದ್ಧದ ಟೆಸ್ಟ್ ಸರಣಿಯಲ್ಲೇ ಅದು ಒಡ್ಡಾಡಿತ್ತು. ಅಂಥ ತಂಡದ ವಿರುದ್ಧ ಭಾರತ ವಿಜಯ ದುಂದುಭಿ ಆಚರಿಸುವುದು ದೊಡ್ಡ ವಿಚಾರವೇನಲ್ಲ'' ಎಂದಿದ್ದಾರೆ.

ಅಲ್ಲದೆ, ''ಮುಂದೆ ಇರುವ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ದೇಶಗಳ ಸರಣಿಯು ನಿಜಕ್ಕೂ ಭಾರತಕ್ಕೆ ಸವಾಲಾಗಿದ್ದು, ಅಲ್ಲಿ ದೊಡ್ಡ ಜಯ ಗಳಿಸಿದರೆ ಅದು ಮೆಚ್ಚುಗೆಗೆ ಪಾತ್ರವಾಗಲಿದೆ. ರವಿಶಾಸ್ತ್ರಿಯವರು ಸುಖಾಸುಮ್ಮನೇ ತಂಡವನ್ನು ಹಾಡಿ ಹೊಗಳುವುದರಿಂದ ಯಾವುದೇ ಲಾಭವಾಗದು. ಮೊದಲು ನಿವೃೃತ್ತ ಆಟಗಾರರ ಬಗ್ಗೆ ಹಗುರವಾಗಿ ಮಾತನಾಡುವುದು ತರವಲ್ಲ'' ಎಂದಿದ್ದಾರೆ ಅವರು.

Story first published: Wednesday, January 3, 2018, 10:05 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X