ಐಪಿಎಲ್ ಇಂಗ್ಲೆಂಡ್‌ನಲ್ಲಿ ನಡೆಯಬಾರದು ಎಂದ ಮಾಂಟಿ ಪನೇಸರ್

ಲಂಡನ್: ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗಿದ್ದರಿಂದ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಹೀಗೆ ಮುಂದೂಡಲ್ಪಟ್ಟಿರುವ ಐಪಿಎಲ್ ಇಂಗ್ಲೆಂಡ್‌ನಲ್ಲಿ ನಡೆಯಬಾರದು ಎಂದು ಇಂಗ್ಲೆಂಡ್ ಮಾಜಿ ಆಟಗಾರ ಮಾಂಟಿ ಪನೇಸರ್ ಹೇಳಿದ್ದಾರೆ.
ಮೇ 4ರಂದು ಐಪಿಎಲ್ ಅನ್ನು ಬಿಸಿಸಿಐ ಮುಂದೂಡಿತ್ತು. 14ನೇ ಆವೃತ್ತಿ ಐಪಿಎಲ್‌ನಲ್ಲಿ 29 ಪಂದ್ಯಗಳು ನಡೆದಿದ್ದವು. ಇನ್ನು 31 ಪಂದ್ಯಗಳು ನಡೆಯಬೇಕಿವೆ. ಗಾಳಿಸುದ್ದಿಯ ಪ್ರಕಾರ ಐಪಿಎಲ್ ಇನ್ನುಳಿದ ಪಂದ್ಯಗಳು ಕಳೆದ ಸಾರಿಯಂತೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿದೆ ಎನ್ನಲಾಗುತ್ತಿದೆ.
ಇನ್ನು ಕೆಲವರು ಐಪಿಎಲ್ ಪಂದ್ಯಗಳು ಇಂಗ್ಲೆಂಡ್‌ನಲ್ಲಿ ನಡೆಯಬೇಕು ಎಂದಿದ್ದಾರೆ. ಆದರೆ ಪನೇಸರ್ ಇಂಗ್ಲೆಂಡ್‌ನಲ್ಲಿ ನಡೆಯುವುದಕ್ಕಿಂತ ಯುಎಇಯಲ್ಲಿ ನಡೆದರೆ ಒಳ್ಳೆಯದು ಎಂದಿದ್ದಾರೆ. ಇದಕ್ಕೆ ಪನೇಸರ್ ಕಾರಣವನ್ನೂ ನೀಡಿದ್ದಾರೆ.
'ಐಪಿಎಲ್ ಅನ್ನು ಇಂಗ್ಲೆಂಡ್‌ನಲ್ಲಿ ಸೆಪ್ಟೆಂಬರ್‌ನಲ್ಲಿ ನಡೆಸಬಾರದು. ಯಾಕೆಂದರೆ ಆ ವೇಳೆ ಇಂಗ್ಲೆಂಡ್‌ನಲ್ಲಿ ಮಳೆಯಿರುತ್ತದೆ. ಪಂದ್ಯ ಮಧ್ಯೆ ಮಧ್ಯೆ ನಿಲುಗಡೆಯಾದರೆ ಅದರ ಮಜವೇ ಹೋಗುತ್ತದೆ. ಭಾರತದಲ್ಲಿ ಕೋವಿಡ್ ನಿಯಂತ್ರಿಸಲಾಗದಿದ್ದರೆ ಐಪಿಎಲ್ ಯುಎಇಯಲ್ಲಿ ನಡೆಯಲಿ. ಯಾಕೆಂದರೆ ಹವಾಮಾನ ಆಟದ ಮೇಲೆ ತುಂಬಾ ಪರಿಣಾಮ ಬೀರುತ್ತದೆ,' ಎಂದು ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಪನೇಸರ್ ಸಲಹೆ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications