ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL ಸಂದರ್ಭದಲ್ಲೇ MPL ಜೊತೆ 2 ವರ್ಷ ಅವಧಿಗೆ RCB ಡೀಲ್

MPL renews RCB sponsorship in a two-year deal

ಬೆಂಗಳೂರು, ಏಪ್ರಿಲ್ 7: ಏಪ್ರಿಲ್ 9ರಿಂದ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾಗುತ್ತಿದೆ. ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಸೆಣಸಾಡಲಿವೆ. ಈ ನಡುವೆ ಏಷ್ಯಾದ ಅತಿದೊಡ್ಡ ಇ-ಕ್ರೀಡೆ ಮತ್ತು ಕೌಶಲ ಗೇಮಿಂಗ್ ಪ್ಲಾಟ್‍ಪಾರಂ ಆಗಿರುವ ಮೊಬೈಲ್ ಪ್ರಿಮಿಯರ್ ಲೀಗ್ (ಎಂಪಿಎಲ್), ಎರಡು ವರ್ಷಗಳ ಅವಧಿಗೆ ಐಪಿಎಲ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಪ್ರಮುಖ ಪ್ರಾಯೋಜಕತ್ವ ವಹಿಸುವ ಪಾಲುದಾರಿಕೆಯನ್ನು ಘೋಷಿಸಿದೆ.

ಈ ಪಾಲುದಾರಿಕೆಯಿಂದಾಗಿ ಈ ವರ್ಷದ ಟಿ20 ಟೂರ್ನಮೆಂಟ್ ಮತ್ತು 2022ರ ಆವೃತ್ತಿಯ ಟೂರ್ನಿಯ ಆರ್‌ಸಿಬಿ ಕಿಟ್‍ಗಳಲ್ಲಿ ಎಂಪಿಎಲ್ ಹೆಸರು ಮುಂದುವರಿಯುತ್ತದೆ. ಯುಎಇನಲ್ಲಿ ನಡೆದ 2020ರ ಟಿ20 ಆವೃತ್ತಿಯಲ್ಲಿ ಎಂಪಿಎಲ್, ಆರ್‌ಸಿಬಿ ಜತೆಗಿನ ಸಹಭಾಗಿತ್ವವನ್ನು ಆರಂಭಿಸಿದ್ದು, ಇದು ಯಶಸ್ವಿ ಪಾಲುದಾರಿಕೆ ಎನಿಸಿತ್ತು.

ಟೀಮ್ ಇಂಡಿಯಾಗೆ ಹೊಸ ಕಿಟ್ ಪ್ರಾಯೋಜಕರು: ಅಧಿಕೃತವಾಗಿ ಘೋಷಿಸಿದ ಬಿಸಿಸಿಐಟೀಮ್ ಇಂಡಿಯಾಗೆ ಹೊಸ ಕಿಟ್ ಪ್ರಾಯೋಜಕರು: ಅಧಿಕೃತವಾಗಿ ಘೋಷಿಸಿದ ಬಿಸಿಸಿಐ

"ಆರ್‌ಸಿಬಿ ಜತೆಗಿನ ಸಹಯೋಗವನ್ನು ಎರಡು ವರ್ಷ ವಿಸ್ತರಿಸಲು ನಮಗೆ ಅತೀವ ಆನಂದವಾಗುತ್ತಿದೆ. ಕಳೆದ ವರ್ಷದ ಪಾಲುದಾರಿಕೆ ಆರ್‌ಸಿಬಿ ಮತ್ತು ಎಂಪಿಎಲ್ ಎರಡಕ್ಕೂ ಫಲಪ್ರದ ಎನಿಸಿದೆ. ನಮ್ಮ ಬ್ರಾಂಡ್ ರಾಯಭಾರಿ ವಿರಾಟ್ ಕೊಹ್ಲಿಯವರು ಪ್ರಬಲ ಆರ್‌ಸಿಬಿಯ ನಾಯಕತ್ವ ವಹಿಸಿದ್ದು, ಈ ವರ್ಷ ಕೂಡಾ ತಂಡಕ್ಕೆ ಉತ್ತಮ ವರ್ಷ ಎನಿಸಲಿದೆ ಎಂಬ ವಿಶ್ವಾಸ ನಮ್ಮದು. ಬೆಂಗಳೂರು ಎಂಪಿಎಲ್‍ನ ತವರು ನೆಲೆಯಾಗಿದ್ದು, ಈ ನಗರದ ಕ್ರಿಕೆಟ್ ತಂಡದ ಜತೆಗೆ ಪಾಲುದಾರಿಕೆ ಹೊಂದಲು ನಮಗೆ ಹೆಮ್ಮೆ ಎನಿಸುತ್ತಿದೆ" ಎಂದು ಎಂಪಿಎಲ್‍ನ ಪ್ರಗತಿ ಮತ್ತು ಮಾರಾಟ ವಿಭಾಗದ ಹಿರಿಯ ಉಪಾಧ್ಯಕ್ಷ ಅಭಿಷೇಕ್ ಮಹಾದೇವನ್ ಹೇಳಿದ್ದಾರೆ.

ಈ ಪಾಲುದಾರಿಕೆ ಬಗ್ಗೆ ಮಾತನಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಖ್ಯಸ್ಥ ಮತ್ತು ಉಪಾಧ್ಯಕ್ಷ ರಾಜೇಶ್ ವಿ ಮೆನನ್, "ಮೊಬೈಲ್ ಪ್ರಿಮಿಯರ್ ಲೀಗ್ ಅನ್ನು ನಮ್ಮ ಪ್ರಮುಖ ಜೆರ್ಸಿ ಪಾಲುದಾರರನ್ನಾಗಿ ಈ ವರ್ಷದ ಮತ್ತು ಮುಂದಿನ ವರ್ಷದ ಸೀಸನ್‍ಗೆ ಮತ್ತೆ ಹೊಂದಲು ನಮಗೆ ಅತೀವ ಆನಂದವಾಗುತ್ತಿದೆ. ಎಂಪಿಎಲ್ ಹಾಗೂ ಆರ್‌ಸಿಬಿ ಕ್ರಮವಾಗಿ ಅತ್ಯಾಧುನಿಕ ಮೊಬೈಲ್ ಗೇಮಿಂಗ್ ಅನುಭವ ಒದಗಿಸುವ ಮತ್ತು ಅಂಶಗಳನ್ನು ಹೊಂದಿರುವ ಮುಂಚೂಣಿ ಪ್ಲಾಟ್‍ಫಾರಂಗಳನ್ನು ತೊಡಗಿಸಿಕೊಳ್ಳುವ ಸಮಾನ ಹುರುಪು ಹೊಂದಿದ್ದು, ಈ ಪಾಲುದಾರಿಕೆಯು ಉಭಯ ಸಂಸ್ಥೆಗಳ ಶಕ್ತಿಯನ್ನು ಕ್ರೋಢೀಕರಿಸಿ, ನಮ್ಮ ಅಭಿಮಾನಿಗಳಿಗೆ ಇನ್ನಷ್ಟು ಉನ್ನತ ಮಟ್ಟದ ತೊಡಗಿಸಿಕೊಳ್ಳುವಿಕೆಯನ್ನು ಸೃಷ್ಟಿಸಲು ನೆರವಾಗಲಿದೆ" ಎಂದು ಅಭಿಪ್ರಾಯಪಟ್ಟರು.

Story first published: Wednesday, April 7, 2021, 16:52 [IST]
Other articles published on Apr 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X