ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಷ್ಯಾಕಪ್‌ನಲ್ಲಿ ಎಂಎಸ್‌ ಧೋನಿಯೇ ಕಿಂಗ್, ಅಂಕಿ-ಅಂಶ ನೋಡಿ

MS Dhoni has highest average in Asia cup tournament

ದುಬೈ, ಸೆಪ್ಟೆಂಬರ್ 16: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಏಷ್ಯಾ ಕಪ್ ನ ಕಿಂಗ್ ಸ್ಥಾನದಲ್ಲಿದ್ದಾರೆ. ಈ ಅನ್ವರ್ಥನಾಮಕ್ಕೆ ಟೂರ್ನಿಯಲ್ಲಿನ ಅವರ ಅಂಕಿ-ಅಂಶಗಳೇ ಕಾರಣ.

ಏಷ್ಯಾಕಪ್ ಇತಿಹಾಸದಲ್ಲೇ ಯಾರೂ ಹೊಂದಿರದ ಬ್ಯಾಟಿಂಗ್ ಸರಾಸರಿಯನ್ನು ಎಂ.ಎಸ್.ಧೋನಿ ಹೊಂದಿದ್ದಾರೆ. ಏಷ್ಯಾಕಪ್‌ನಲ್ಲಿ ಧೋನಿಯ ಬ್ಯಾಟಿಂಗ್ ಸರಾಸರಿ ಬರೋಬ್ಬರಿ 95.16 ಇದೆ. ಇದು ಕ್ರಿಕೆಟ್ ದಂತಕಥೆ ಬ್ರಾಡ್‌ಮನ್ ಅವರ ಒಟ್ಟು ಬ್ಯಾಟಿಂಗ್ ಸರಾಸರಿಗೆ ಬಹಳ ಸನಿಹದಲ್ಲಿದೆ. ಬ್ರಾಡ್‌ಮನ್ 96 ಬ್ಯಾಟಿಂಗ್ ಸರಾಸರಿ ಹೊಂದಿದ್ದರು.

ಧೋನಿ ಏಷ್ಯಾಕಪ್ ನಲ್ಲಿ ಆಡಿದ ಕಳೆದ 7 ಪಂದ್ಯಗಳಲ್ಲಿ ಅಜೇಯರಾಗುಳಿದಿದ್ದಾರೆ ಎಂಬುದು ವಿಶಿಷ್ಟ ದಾಖಲೆ. ಧೋನಿ ಈ ವರೆಗೆ ಏಷ್ಯಾಕಪ್ ಪಂದ್ಯದಲ್ಲಿ 113 ರನ್ ಗಳಿಸಿದ್ದಾರೆ ಅದೂ 213.21 ಸ್ಟ್ರೈಕ್‌ ರೇಟ್‌ನಲ್ಲಿ.

ನಾಯಕನಾಗಿಯೂ ಏಷ್ಯಾಕಪ್‌ನಲ್ಲಿ ಧೋನಿಯದ್ದು ಸಾಧನೆಯೇ. ಈವರೆಗೆ 13 ಏಷ್ಯಾಕಪ್‌ ಮ್ಯಾಚುಗಳನ್ನು ಭಾರತ ಧೋನಿ ನಾಯಕತ್ವದಲ್ಲಿ ಆಡಿದೆ. ಬೇರೆ ಯಾವ ನಾಯನೂ ಏಷ್ಯಾಕಪ್‌ನಲ್ಲಿ ಇಷ್ಟು ಪಂದ್ಯಗಳನ್ನು ಆಡಿಲ್ಲ. ಆದರೆ ಲಂಕಾದ ಮಹೇಲಾ ಜಯವರ್ಧನೆ 28 ಏಷ್ಯಾಕಪ್ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದರು.

ಕಳೆದ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಧೋನಿ ಅವರ ಕಳಪೆ ಪ್ರರ್ಶನದಿಂದ ಅವರು ಟೀಕೆಗೆ ಗುರಿ ಆಗಬೇಕಾಗಿತ್ತು. ಆದರೆ ಅವರ ನೆಚ್ಚಿನ ಏಷ್ಯಾಕಪ್‌ನಲ್ಲಿ ಆಡಲಿದ್ದಾರೆ. ಇಲ್ಲಿ ಉತ್ತಮ ಪ್ರದರ್ಶನ ತೋರಿ ತಾವು 2019ರ ವಿಶ್ವಕಪ್‌ಗೆ ತಯಾರಿದ್ದೇನೆ ಎಂಬುದನ್ನು ಸಾಬೀತುಪಡಿಸಬೇಕಿದೆ.

ಪ್ರಮುಖ ಸರಣಿಯಲ್ಲಿ ವಿರಾಟ್ ಕೊಹ್ಲಿ ಇಲ್ಲದ ಕಾರಣ ನಾಯಕತ್ವದಲ್ಲಿ ಅನನುಭವಿ ರೋಹಿತ್ ಶರ್ಮಾ ತಂಡವನ್ನು ಮುನ್ನೆಡಸಲಿದ್ದು, ರೋಹಿತ್ ಅವರ ಜವಾಬ್ದಾರಿಯನ್ನು ಧೋನಿ ಸಹ ಹಂಚಿಕೊಳ್ಳಲಿದ್ದಾರೆ.

Story first published: Sunday, September 16, 2018, 13:33 [IST]
Other articles published on Sep 16, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X