ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಂಎಸ್ ಧೋನಿ ಜಾರ್ಖಂಡ್ ನಲ್ಲೇ ಅತ್ಯಧಿಕ ಮೊತ್ತದ ಆದಾಯ ತೆರಿಗೆದಾರ!

ಧೋನಿ ಸರ್ಕಾರಕ್ಕೆ ಪಾವತಿಸಿದ ಟ್ಯಾಕ್ಸ್ ಎಷ್ಟು ಗೊತ್ತಾ ? | Oneindia Kannada
MS Dhoni highest individual taxpayer in Jharkhand for 2017-18

ರಾಂಚಿ, ಜುಲೈ 24: ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರು 2017-18ರ ಆರ್ಥಿಕ ವರ್ಷದಲ್ಲಿ ಜಾರ್ಖಂಡ್ ನಲ್ಲೇ ಅತ್ಯಧಿಕ ಮೊತ್ತದ ತೆರಿಗೆ ಪಾವತಿಸಿದ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಭಾರತದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಧೋನಿ ಈಬಾರಿ ಒಟ್ಟು 12.17 ಕೋಟಿ ರೂ. ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸಿದ್ದಾರೆ. 2016-17ಕ್ಕೆ ಹೋಲಿಸಿದರೆ ಈ ಬಾರಿ 1.24 ಕೋಟಿ ರೂ. ಹೆಚ್ಚುವರಿ ತೆರಿಗೆ ಪಾವತಿಸಿದ್ದಾರೆ ಎಂದು ಆದಾಯ ತೆರಿಗೆ ಅಧಿಕೃತ ಮೂಲ ಸೋಮವಾರ ತಿಳಿಸಿದೆ.

ಆಫ್ರಿಕಾ ಎ ವಿರುದ್ಧದ ಪಂದ್ಯಕ್ಕೆ ಭಾರತ 'ಎ' ತಂಡಕ್ಕೆ ಚಾಹಲ್ ಆಯ್ಕೆಆಫ್ರಿಕಾ ಎ ವಿರುದ್ಧದ ಪಂದ್ಯಕ್ಕೆ ಭಾರತ 'ಎ' ತಂಡಕ್ಕೆ ಚಾಹಲ್ ಆಯ್ಕೆ

'ಧೋನಿ ಅವರು 2016-17ರಲ್ಲಿ 10.93 ಕೋಟಿ ರೂ. ಆದಾಯ ತೆರಿಗೆ ಪಾವತಿಸಿದ್ದರು. ಆದರೆ ಆ ಆರ್ಥಿಕ ವರ್ಷದಲ್ಲಿ ಅವರು ಅಧಿಕ ಮೊತ್ತದ ತೆರಿಗೆದಾರನಾಗಿ ಗುರುತಿಸಿಕೊಂಡಿರಲಿಲ್ಲ' ಎಂದು ಜಾರ್ಖಂಡ್ ಪ್ರಾಂತ್ಯದ ಆದಾಯ ತೆರಿಗೆ ಮುಖ್ಯಾಧಿಕಾರಿ ವಿ ಮಹಾಲಿಂಗಮ್ ತಿಳಿಸಿದ್ದಾರೆ. ಆದರೆ 2016-17ರಲ್ಲಿ ಅಧಿಕ ಆದಾಯ ತೆರಿಗೆದಾರರು ಯಾರಾಗಿದ್ದರು ಎಂಬುದನ್ನು ಅವರು ತಿಳಿಸಿಲ್ಲ.

ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಧೋನಿ ಉತ್ತಮ ಆಟವನ್ನು ಪ್ರದರ್ಶಿಸಿರಲಿಲ್ಲ. 3 ಟಿ20 ಪಂದ್ಯಗಳಲ್ಲಿ ಬರೀ 32 ರನ್ ಮತ್ತು 3 ಏಕದಿನ ಪಂದ್ಯಗಳಲ್ಲೂ 79 ರನ್ ಗಳಿಸಿದ್ದರು. ಟಿ20 ಪಂದ್ಯದಲ್ಲಿ ಭಾರತ ಸರಣಿ ಗೆದ್ದಿತ್ತಾದರೂ ಏಕದಿನ ಸರಣಿಯನ್ನು 2-1ರಿಂದ ಕಳೆದುಕೊಂಡಿತ್ತು. ಏಕದಿನದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ್ದಕ್ಕಾಗಿ ದೋನಿ ಸಾಕಷ್ಟು ಟೀಕೆಗೂ ಗುರಿಯಾಗಿದ್ದರು.

ಕೊನೆಯ ಏಕದಿನ ಮುಕ್ತಾಯದ ವೇಳೆಗಂತೂ ಧೋನಿಯ ಕ್ರಿಕೆಟ್ ಭವಿಷ್ಯದ ಬಗ್ಗೆಯೇ ಗಾಳಿ ಸುದ್ದಿಗಳು ಹಬ್ಬಿದ್ದವು. ಧೋನಿ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಲಿದ್ದಾರೆ ಎಂದೆಲ್ಲ ಮಾತುಗಳು ಕೇಳಿ ಬಂದಿದ್ದವು. ಆದರೆ ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ ಗಾಳಿಸುದ್ದಿಗೆ ತೆರೆ ಎಳೆದಿದ್ದರು. ಧೋನಿ ಕ್ರಿಕೆಟ್ ನಲ್ಲಿ ಮುಂದುವರೆಯಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದರು.

Story first published: Tuesday, July 24, 2018, 11:46 [IST]
Other articles published on Jul 24, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X