ಸೆಪ್ಟೆಂಬರ್ 25ರಂದು ಎಂಎಸ್ ಧೋನಿ ಮಹತ್ವದ ಘೋಷಣೆ: ತಲೆ ಕೆಡಿಸಿಕೊಂಡ ಅಭಿಮಾನಿಗಳು

ಭಾರತ ತಂಡದ ಮಾಜಿ ನಾಯಕ, ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವ ವಹಿಸಿಕೊಂಡಿರುವ ಎಂಎಸ್ ಧೋನಿ, ಸೆಪ್ಟೆಂಬರ್ 25 ರಂದು ಭಾನುವಾರ ಮಧ್ಯಾಹ್ನ 2 ಗಂಟೆಗೆ ಮುಖ್ಯ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆ ಇದೆ.

ಎಂಎಸ್‌ ಧೋನಿ ಶನಿವಾರ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಸೆಪ್ಟೆಂಬರ್ 25 ರಂದು ಹಂಚಿಕೊಳ್ಳಲು ಕೆಲವು ರೋಚಕ ಸುದ್ದಿಗಳಿವೆ ಎಂದು ಹೇಳಿದ್ದಾರೆ. ಎಂಎಸ್ ಧೋನಿ ದಿಢೀರ್ ಘೋಷಣೆ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

ಆಸ್ಟ್ರೇಲಿಯಾ ವಿರುದ್ಧ ದುಬಾರಿ ರನ್‌ ಬಿಟ್ಟುಕೊಟ್ಟ ಹರ್ಷಲ್ ಪಟೇಲ್: ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್ಆಸ್ಟ್ರೇಲಿಯಾ ವಿರುದ್ಧ ದುಬಾರಿ ರನ್‌ ಬಿಟ್ಟುಕೊಟ್ಟ ಹರ್ಷಲ್ ಪಟೇಲ್: ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್

41 ವರ್ಷ ವಯಸ್ಸಿನ ಧೋನಿ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುವ ಸಾಧ್ಯತೆ ಇದೆ ಎಂದು ಅಭಿಮಾನಿಗಳು ಊಹೆ ಮಾಡಿದ್ದಾರೆ. ಎಂಎಸ್ ಧೋನಿ ಆಗಸ್ಟ್ 2020 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ಆದರೆ ಅವರು ಇನ್ನೂ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL) ಸಿಎಸ್‌ಕೆ ತಂಡದ ನಾಯಕರಾಗಿ ಆಡುತ್ತಿದ್ದಾರೆ.

ಭಾನುವಾರ, ಸೆಪ್ಟೆಂಬರ್ 25 ರಂದು, ಭಾರತದ ಮಾಜಿ ನಾಯಕ ಎಂಎಸ್ ಧೋನಿ ಫೇಸ್‌ಬುಕ್ ಲೈವ್ ಈವೆಂಟ್ ಮೂಲಕ ಕೆಲವು ರೋಚಕ ಸುದ್ದಿಗಳನ್ನು ಹಂಚಿಕೊಳ್ಳಲು ಸಿದ್ಧರಾಗಿದ್ದಾರೆ. ಎಂಎಸ್ ಧೋನಿ ದಿಢೀರ್ ಎಂದು ಹಲವು ವಿಚಾರಗಳನ್ನು ಹಂಚಿಕೊಳ್ಳಬೇಕೆಂದಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ಆತಂಕಗೊಂಡ ಎಂಎಸ್‌ಡಿ ಅಭಿಮಾನಿಗಳು

ಆತಂಕಗೊಂಡ ಎಂಎಸ್‌ಡಿ ಅಭಿಮಾನಿಗಳು

ಸೆಪ್ಟೆಂಬರ್ 25ರಂದು ಮಹತ್ವದ ವಿಚಾರಗಳನ್ನು ಹಂಚಿಕೊಳ್ಳುವುದಾಗಿ ಹೇಳಿದ ತಕ್ಷಣ ಅಭಿಮಾನಿಗಳು ತಮ್ಮದೇ ಆದ ಊಹೆಗಳನ್ನು ಮಾಡಲು ಆರಂಭಿಸಿದ್ದಾರೆ. ಎಂಎಸ್‌ ಧೋನಿ ಏನು ಘೋಷಣೆ ಮಾಡುತ್ತಾರೆ ಎಂದು ಮತ್ತೆ ಕೆಲವರು ತಲೆ ಕೆಡಿಸಿಕೊಂಡಿದ್ದಾರೆ.

ಹಲವಾರು ಕ್ರಿಕೆಟ್ ಅಭಿಮಾನಿಗಳು ಧೋನಿ ಐಪಿಎಲ್‌ನಿಂದ ನಿವೃತ್ತರಾಗುತ್ತಾರೆ ಎಂಬ ಭಯದಲ್ಲಿದ್ದಾರೆ. ಆದರೆ, 2023ರ ಐಪಿಎಲ್‌ ನಂತರ ಧೋನಿ ನಿವೃತ್ತಿಯಾಗಲಿದ್ದಾರೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಚೆನ್ನೈನಲ್ಲಿ ಅವರು ನಿವೃತ್ತಿ ಘೋಷಿಸಲಿದ್ದಾರೆ ಎಂದು ಹೇಳಿದ್ದಾರೆ.

ಕಾರ್ತಿಕ್‌ಗಿಂತ, ರಿಷಭ್ ಪಂತ್ ಟೀಂ ಇಂಡಿಯಾ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆದ್ರೆ ಉತ್ತಮ: ಮ್ಯಾಥ್ಯೂ ಹೇಡನ್

ಅಮೆರಿಕದಲ್ಲಿ ಕಾಣಿಸಿಕೊಂಡಿದ್ದ ಎಂಎಸ್‌ಡಿ

ಅಮೆರಿಕದಲ್ಲಿ ಕಾಣಿಸಿಕೊಂಡಿದ್ದ ಎಂಎಸ್‌ಡಿ

ಇತ್ತೀಚೆಗೆ ಮುಕ್ತಾಯಗೊಂಡ ಯುಎಸ್ ಓಪನ್ ವೀಕ್ಷಿಸಲು ಹೋಗಿದ್ದ ಧೋನಿ ಕೊನೆಯ ಬಾರಿಗೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕಾಣಿಸಿಕೊಂಡರು. ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿರುವ ಮೆಟುಚೆನ್ ಗಾಲ್ಫ್ ಮತ್ತು ಕಂಟ್ರಿ ಕ್ಲಬ್ (MGCC) ಗೌರವ ಸದಸ್ಯರಾಗಿ ಹೆಸರಿಸಿದ ನಂತರ ಅವರು ಕೇಕ್ ಕತ್ತರಿಸಿ ಸಂಭ್ರಮಿಸಿದ್ದರು.

ಈ ವಿಶೇಷ ಕ್ಷಣವನ್ನು ಆಚರಿಸಲು, ಭಾರತದ ಮಾಜಿ ನಾಯಕ ಎಂಎಸ್‌ ಧೋನಿ ತಮಗಾಗಿ ಅತುಲ್ ಬೇಕರಿ ವಿಶೇಷವಾಗಿ ಸಿದ್ಧಪಡಿಸಿದ ವಿಶೇಷ ಕೇಕ್ ಅನ್ನು ಕತ್ತರಿಸಿದ್ದರು.

2023ರ ಐಪಿಎಲ್‌ನಲ್ಲಿ ಸಿಎಸ್‌ಕೆ ಮುನ್ನಡೆಸುವುದು ಖಚಿತ

2023ರ ಐಪಿಎಲ್‌ನಲ್ಲಿ ಸಿಎಸ್‌ಕೆ ಮುನ್ನಡೆಸುವುದು ಖಚಿತ

ಎಂಎಸ್ ಧೋನಿ ಐಪಿಎಲ್‌ನಿಂದ ತಮ್ಮ ಬೂಟುಗಳನ್ನು ಸ್ಥಗಿತಗೊಳಿಸಬಹುದು ಎಂಬ ಸುದ್ದಿ ಆಗಾಗ್ಗೆ ಹೊರಹೊಮ್ಮುತ್ತಿದೆ. ಆದರೂ ಕೂಡ ಐಪಿಎಲ್‌ 2023ರಲ್ಲಿ ಸಿಎಸ್‌ಕೆ ತಂಡವನ್ನು ಮುನ್ನಡೆಸಲಿದ್ದಾರೆ. ಚೆನ್ನೈ ಈ ಹಿಂದೆ ಧೋನಿ ನಾಯಕತ್ವದಲ್ಲಿ ನಾಲ್ಕು ಬಾರಿ ಪ್ರಶಸ್ತಿಗಳನ್ನು ಗೆದ್ದಿದೆ ಮತ್ತು ಕೊನೆಯದು ಐಪಿಎಲ್ 2021 ಆಗಿದೆ.

ಐಪಿಎಲ್‌ 2022 ಅಭಿಯಾನದ ಆರಂಭದ ಮೊದಲು, ಚೆನ್ನೈ ಸೂಪರ್ ಕಿಂಗ್ಸ್ (CSK) ಆಡಳಿತವು ರವೀಂದ್ರ ಜಡೇಜಾ ಅವರನ್ನು ತಂಡದ ನಾಯಕರನ್ನಾಗಿ ಮಾಡಲು ನಿರ್ಧರಿಸಿತು. ಆದರೆ ಸಿಎಸ್‌ಕೆ ಕಳಪಡೆ ಪ್ರದರ್ಶನ ನೀಡಿದ ನಂತರ, ಜಡೇಜಾ ನಾಯಕತ್ವವನ್ನು ಎಂಎಸ್ ಧೋನಿಗೆ ಹಿಂತಿರುಗಿಸಿದ್ದರು.

ಟಿ20 ವಿಶ್ವಕಪ್‌ ಗೆಲುವಿಗೆ 15 ವರ್ಷಗಳ ಸಂಭ್ರಮ

ಟಿ20 ವಿಶ್ವಕಪ್‌ ಗೆಲುವಿಗೆ 15 ವರ್ಷಗಳ ಸಂಭ್ರಮ

ನಿಖರವಾಗಿ 15 ವರ್ಷಗಳ ಹಿಂದೆ, ಎಂಎಸ್‌ ಧೋನಿ ನಾಯಕತ್ವದ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್‌ ಮೈದಾನದಲ್ಲಿ ಮೊದಲ ಟಿ20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿತ್ತು.

ಅನುಭವಿ ಮತ್ತು ಯುವಪಡೆಯನ್ನು ಮುನ್ನಡೆಸಿದ್ದ ಎಂಎಸ್‌ ಧೋನಿ ತಮ್ಮ ಚಾಣಾಕ್ಷತನದಿಂದ ಟೀಂ ಇಂಡಿಯಾವನ್ನು ಚಾಂಪಿಯನ್ ಪಟ್ಟಕ್ಕೇರಿಸಿದರು. ಅದರಲ್ಲೂ ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ 5 ರನ್‌ಗಳ ರೋಚಕ ಜಯ ಸಾಧಿಸಿದ್ದನ್ನು ಎಂದಿಗೂ ಮರೆಯಲಾಗದು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Saturday, September 24, 2022, 18:22 [IST]
Other articles published on Sep 24, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X