ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಾರ್ತಿಕ್‌ಗಿಂತ, ರಿಷಭ್ ಪಂತ್ ಟೀಂ ಇಂಡಿಯಾ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆದ್ರೆ ಉತ್ತಮ: ಮ್ಯಾಥ್ಯೂ ಹೇಡನ್

Rishabh pant

ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಪರ ವಿಕೆಟ್ ಕೀಪರ್ ಆಗಿ ಯಾರು ಕಣಕ್ಕಿಳಿಯಬೇಕು ಎಂಬ ಪ್ರಶ್ನೆಗೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಉತ್ತರಿಸಿದ್ದಾರೆ.

ಟೀಂ ಇಂಡಿಯಾ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಅಭಿಯಾನವನ್ನ ಅಕ್ಟೋಬರ್ 23ರಂದು ಪಾಕಿಸ್ತಾನ ವಿರುದ್ಧ ಪ್ರಾರಂಭಿಸಲಿದ್ದು, ಮೆಲ್ಬರ್ನ್‌ನಲ್ಲಿ ಪಂದ್ಯ ನಡೆಯಲಿದೆ. ಇದಕ್ಕೂ ಮುನ್ನ ಟೀಂ ಇಂಡಿಯಾ ಅಂತಿಮ ಪ್ಲೇಯಿಂಗ್ 11 ನಿರ್ಧರಿಸಬೇಕಿದೆ.

ಆದ್ರೆ ವಿಕೆಟ್ ಕೀಪರ್ ಬ್ಯಾಟರ್‌ಗಳಾದ ದಿನೇಶ್ ಕಾರ್ತಿಕ್ ಮತ್ತು ರಿಷಭ್ ಪಂತ್‌ ನಡುವೆ ಯಾರು ಆಡಬೇಕೆಂಬುದು ಸ್ವತಃ ಮ್ಯಾನೇಜ್‌ಮೆಂಟ್‌ಗೆ ಗೊಂದಲ ಮೂಡಿಸಿದಂತೆ ಕಾಣುತ್ತಿದೆ. ಹೀಗಾಗಿಯೇ ಇಬ್ಬರು ಆಟಗಾರರು ಒಂದೇ ಪಂದ್ಯದಲ್ಲಿ ಆಡುವುದು ಬಹಳ ಕಡಿಮೆಯಾಗಿದೆ. ಒಂದು ಪಂದ್ಯದಲ್ಲಿ ಕಾರ್ತಿಕ್ ಆಡಿದ್ರೆ, ಮತ್ತೊಂದು ಪಂದ್ಯದಲ್ಲಿ ರಿಷಭ್ ಪಂತ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದಿದ್ದಾರೆ.

ದಿನೇಶ್ ಕಾರ್ತಿಕ್ vs ಪಂತ್ ನಡುವೆ ಭಾರೀ ಪೈಪೋಟಿ

ದಿನೇಶ್ ಕಾರ್ತಿಕ್ vs ಪಂತ್ ನಡುವೆ ಭಾರೀ ಪೈಪೋಟಿ

ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯಲು ದಿನೇಶ್ ಕಾರ್ತಿಕ್ ಮತ್ತು ರಿಷಭ್ ಪಂತ್ ನಡುವೆ ಭಾರೀ ಪೈಪೋಟಿ ನಡೆಯುತ್ತಿದೆ. ಇಬ್ಬರು ಆಟಗಾರರು ಮ್ಯೂಸಿಕಲ್ ಚೇರ್ಸ್ ಗೇಮ್‌ನಂತೆ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ. ಏಷ್ಯಾಕಪ್‌ನಲ್ಲಿ ಭಾರತವು ಆರಂಭಿಕ ಪಂದ್ಯದಲ್ಲಿ ದಿನೇಶ್ ಕಾರ್ತಿಕ್‌ರನ್ನು ಪ್ಲೇಯಿಂಗ್ ಇಲೆವೆನ್‌ನಲ್ಲಿ ಸೇರಿಸಿತು. ರವೀಂದ್ರ ಜಡೇಜಾ ಸ್ವತಃ ಮಾಡಿಕೊಂಡ ಗಾಯದಿಂದಾಗಿ, ಉಳಿದ ಪಂದ್ಯಗಳಿಗೆ ರಿಷಭ್ ಪಂತ್ ಬದಲಿ ಆಟಗಾರರಾಗಿ ಆಯ್ಕೆಯಾದ್ರು.

ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯಕ್ಕೆ ವಾಪಸ್ಸಾದ ದಿನೇಶ್ ಕಾರ್ತಿಕ್

ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯಕ್ಕೆ ವಾಪಸ್ಸಾದ ದಿನೇಶ್ ಕಾರ್ತಿಕ್

ಆಸ್ಟ್ರೇಲಿಯಾ ವಿರುದ್ಧ ಮೊಹಾಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್‌ನಲ್ಲಿ ಮತ್ತೆ ಸ್ಥಾನ ಪಡೆದ್ರು. ಈ ಪಂದ್ಯದಲ್ಲಿ ರಿಷಭ್ ಪಂತ್‌ ಸ್ಥಾನ ಪಡೆಯಲು ವಿಫಲರಾದ್ರು. ಆದ್ರೆ ಎರಡನೇ ಟಿ20 ಪಂದ್ಯದಲ್ಲಿ ಓವರ್‌ಗಳ ಕಡಿತದಿಂದಾಗಿ ದಿನೇಶ್ ಕಾರ್ತಿಕ್ ಮತ್ತು ರಿಷಭ್ ಪಂತ್ ಇಬ್ಬರೂ ತಂಡದಲ್ಲಿ ಆಡಿದ್ರು. ಆದ್ರೆ ಈ ಪಂದ್ಯದಲ್ಲಿ ಕಾರ್ತಿಕ್ ಫಿನಿಷರ್ ಆಗಿ ಮಿಂಚಿದ್ದಲ್ಲದೆ ಕೇವಲ ಎರಡು ಎಸೆತಗಳಲ್ಲಿ ಪಂದ್ಯವನ್ನ ಮುಗಿಸುವ ಮೂಲಕ ರಿಷಬ್ ಪಂತ್‌ಗೆ ಸಡ್ಡು ಹೊಡೆದಿದ್ದಾರೆ.

ಅಂತಿಮ ಪಂದ್ಯದ ಬಳಿಕ ಕಣ್ಣೀರಿಟ್ಟ ಟೆನಿಸ್ ಲೆಜೆಂಡ್ ರೋಜರ್ ಫೆಡರರ್: ಗೆಳೆಯನನ್ನು ಬೀಳ್ಕೊಟ್ಟ ರಾಫಾ

ಪಂತ್ ಪವರ್‌ಫುಲ್ ಹಿಟ್‌ಗಳು ಭಾರತಕ್ಕೆ ಹೆಚ್ಚು ಸಹಾಯಕವಾಗಲಿದೆ!

ಪಂತ್ ಪವರ್‌ಫುಲ್ ಹಿಟ್‌ಗಳು ಭಾರತಕ್ಕೆ ಹೆಚ್ಚು ಸಹಾಯಕವಾಗಲಿದೆ!

ಆಸ್ಟ್ರೇಲಿಯಾ ನೆಲದಲ್ಲಿ ರಿಷಭ್ ಪಂತ್ ಬ್ಯಾಟಿಂಗ್ ಟೀಂ ಇಂಡಿಯಾಗೆ ಹೆಚ್ಚು ಸಹಾಯಕಾರಿಯಾಗಲಿದೆ ಎಂದು ಆಸಿಸ್ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್ ಹೇಳಿದ್ದಾರೆ. ಆಸ್ಟ್ರೇಲಿಯಾದ ಪಿಚ್‌ಗಳಲ್ಲಿ ಬೌಂಡರಿಗಳು ಬಹಳ ದೊಡ್ಡವಾಗಿದೆ. ಹೀಗಾಗಿ ಪವರ್‌ಫುಲ್ ಹಿಟ್ಟರ್‌ ರಿಷಭ್ ಪಂತ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ತಂಡದಲ್ಲಿದ್ದರೆ ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ದಿನೇಶ್ ಕಾರ್ತಿಕ್ ಹಾಗೂ ರಿಷಭ್ ಪಂತ್‌ನಲ್ಲಿ ಯಾರು ವಿಕೆಟ್ ಕೀಪರ್ ಆಗಬೇಕು ಎಂಬ ಪ್ರಶ್ನೆಗೆ ಹೇಡನ್ ಉತ್ತರಿಸಿದ್ದಾರೆ.

"ಇಲ್ಲ, ನಾನು ಹಾಗೆ ಯೋಚಿಸುವುದಿಲ್ಲ. ನನ್ನ ಮಟ್ಟಿಗೆ ಅದು ರಿಷಬ್ ಪಂತ್ ಆಗಿರಬೇಕು. ಟಿ20 ವಿಶ್ವಕಪ್‌ಗಾಗಿ ನೀವು ಅವರಿಗೆ ಬೆಂಬಲ ನೀಡಬೇಕು. ಇದು ಆಟದ ದೀರ್ಘ ಆವೃತ್ತಿಯಾಗಿದ್ದರೆ, ನೀವು ಬೇರೆ ರೀತಿಯಲ್ಲಿ ನೋಡಬಹುದು. ನೀವು ಆಸ್ಟ್ರೇಲಿಯಾದ ಪರಿಸ್ಥಿತಿಗಳಲ್ಲಿ ಆಡುತ್ತಿರುವಾಗ, ಪವರ್‌ಫುಲ್‌ ಹಿಟ್ಟರ್‌ ಬೇಕು. ಬೌಲರ್ ಮತ್ತು ಪಿಚ್‌ನ ವೇಗವನ್ನು ಬಳಸುವಾಗ ಡಿಕೆ ಅದ್ಭುತ ಆಟಗಾರನಾಗಿದ್ದಾನೆ ಆದರೆ ಎಂಸಿಜಿ ದೊಡ್ಡ ಮೈದಾನವಾಗಿದೆ "ಎಂದು ಮ್ಯಾಥ್ಯೂ ಹೇಡನ್ ಹೇಳಿದರು.

''ವಿಶೇಷವಾಗಿ ಆಸ್ಟ್ರೇಲಿಯಾದ ಗ್ರೌಂಡ್‌ಗಳನ್ನ ಕ್ಲಿಯರ್ ಮಾಡಲು ಸ್ಮಾರ್ಟ್‌ ಹಿಟ್ ಅಗತ್ಯವಿದೆ. ಆದ್ದರಿಂದ ಪವರ್‌ ಹಿಟ್ಟರ್‌ಗಳನ್ನು ಹೊಂದಲು ಇಂದು ತುಂಬಾ ಮುಖ್ಯವಾಗಿದೆ. ಕನಿಷ್ಠ 3-4 ಆಟಗಾರರು ಚೆಂಡನ್ನು ದೂರದವರೆಗೆ ಹೊಡೆಯಬಹುದು. ಆ ಬಹುಮುಖ ಪ್ರತಿಭೆ ರಿಷಭ್‌ಗೆ ಸಿಕ್ಕಿದೆ. ಅವರು ಹೆಚ್ಚು ಸಾಂಪ್ರದಾಯಿಕವಾಗಿ ಆಡುವುದನ್ನು ನೋಡಲು ನಾನು ಬಯಸುತ್ತೇನೆ, ಅವರು ದೀರ್ಘಕಾಲದವರೆಗೆ ಪ್ರಯೋಗಗಳಲ್ಲಿ ಕಳೆದುಹೋಗಿದ್ದಾರೆ, "ಎಂದು ಮ್ಯಾಥ್ಯೂ ಹೇಡನ್ ಹೇಳಿದರು.

ಭಾರತ vs ಆಸ್ಟ್ರೇಲಿಯಾ, 3ನೇ ಟಿ20: ನಿರ್ಣಾಯಕ ಪಂದ್ಯಕ್ಕೆ ಅಡ್ಡಿಯಾಗಲಿದೆಯಾ ಮಳೆ?: ಕ್ರೀಡಾಂಗಣದ ಮಾಹಿತಿ

ಐಸಿಸಿ ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಸ್ಕ್ವಾಡ್‌

ಐಸಿಸಿ ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ಸ್ಕ್ವಾಡ್‌

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಯುಜವೇಂದ್ರ ಚಾಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.

Story first published: Saturday, September 24, 2022, 17:42 [IST]
Other articles published on Sep 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X