ಅಜರುದ್ದೀನ್ ದಾಖಲೆ ಸರಿದೂಗಿಸಿದ ಧೋನಿ, ದ್ರಾವಿಡ್ ಮೀರಿಸುವತ್ತ ಕಣ್ಣು!

ಮೌಂಟ್‌ಮೌಂಗನ್ಯುಯಿ, ಜನವರಿ 26: ಕಳೆದೊಂದು ದಶಕದಿಂದಲೂ ಭಾರತ ಕ್ರಿಕೆಟ್ ತಂಡದ ಬಲವಾಗಿ ನಿಂತಿರುವ ಎಂಎಸ್ ಧೋನಿ, ಭಾರತ ಪರ ಅತ್ಯಧಿಕ ಏಕದಿನ ಪಂದ್ಯಗಳನ್ನಾಡಿದ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಧೋನಿ ಈ ಸಾಧನೆಗಾಗಿ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಜೊತೆ ತೃತೀಯ ಸ್ಥಾನವನ್ನು ಹಂಚಿಕೊಂಡಿದ್ದಾರೆ.
2004ರಲ್ಲಿ ಮೌಂಟ್‌ಮಾಂಗನ್ಯುಯಿಯಲ್ಲಿಯೇ ನಡೆದ ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ್ದ ಕ್ಯೂಲ್ ಕ್ಯಾಪ್ಟನ್ ಖ್ಯಾತಿಯ ಧೋನಿ ಶನಿವಾರ (ಜನವರಿ 26) ಆಡಿದ್ದು 334ನೇ ಏಕದಿನ ಪಂದ್ಯ. ಇದೇ ದಾಖಲೆ ಹೊಂದಿರುವ ಅಜರುದ್ದೀನ್ ಜೊತೆ ಧೋನಿ ಈಗ 3ನೇ ಸ್ಥಾನದಲ್ಲಿದ್ದಾರೆ.
ಭಾರತವನ್ನು ಪ್ರತಿನಿಧಿಸಿ ಅತೀ ಹೆಚ್ಚು ಏಕದಿನ ಪಂದ್ಯಗಳನ್ನು ಆಡಿರುವ ದಾಖಲೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಒಟ್ಟು 463 ಪಂದ್ಯಗಳನ್ನಾಡಿರುವ ಸಚಿನ್ ಮೊದಲ ಸ್ಥಾನದಲ್ಲಿದ್ದರೆ, 340 ಪಂದ್ಯಗಳಿಂದ ಕನ್ನಡಿಗ ರಾಹುಲ್ ದ್ರಾವಿಡ್ ದ್ವಿತೀಯ ಸ್ಥಾನದಲ್ಲಿದ್ದಾರೆ.
ಶನಿವಾರ (ಜ.26) ನಡೆದ ಭಾರತ-ನ್ಯೂಜಿಲ್ಯಾಂಡ್ ದ್ವಿತೀಯ ಏಕದಿನ ಪಂದ್ಯದಲ್ಲಿ ಧೋನಿ ಅಜೇಯ 48 ರನ್ ಬಾರಿಸಿದ್ದರು. ಶಿಖರ್ ಧವನ್-ರೋಹಿತ್ ಶರ್ಮಾ ಆಕರ್ಷಕ ಜೊತೆಯಾಟದ ಬೆಂಬಲವೂ ದೊರೆತಿದ್ದರಿಂದ ಭಾರತ ಈ ಪಂದ್ಯವನ್ನು 90 ರನ್‌ನಿಂಧ ಜಯಿಸಿತ್ತಲ್ಲದೆ, ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 2-0ಯ ಮುನ್ನಡೆ ಗಳಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications