ಆಟಗಾರರ ವೇತನ: ಟಾಪ್ ಕೆಟಗರಿಯಿಂದ ಧೋನಿ ಹೊರಕ್ಕೆ?

ಬೆಂಗಳೂರು, ಜನವರಿ 04: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ವೇತನದಲ್ಲಿ ಭಾರಿ ವ್ಯತ್ಯಾಸವಾಗುವ ಸಾಧ್ಯತೆ ಕಂಡು ಬಂದಿದೆ.
ಅತಿ ಹೆಚ್ಚು ವೇತನ ಪಡೆಯುವ ಆಟಗಾರರ ವಿಭಾಗದಿಂದ ಧೋನಿ ಅವರು ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
A+, A, B, C, ಹೀಗೆ ನಾಲ್ಕು ವಿಭಾಗಗಳನ್ನು ಮಾಡಬೇಕೆಂಬ ಪ್ರಸ್ತಾಪ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂದಿದೆ. ಎ ವಿಭಾಗದ ಆಟಗಾರರಿಗೆ ವಾರ್ಷಿಕ 2 ಕೋಟಿ ವೇತನ ನೀಡಲಾಗುತ್ತಿದೆ. ಬಿ ಕೆಟಗರಿ ಆಟಗಾರರಿಗೆ 1 ಕೋಟಿ ಹಾಗೂ ಸಿ ವಿಭಾಗದ ಕ್ರಿಕೆಟಿಗರಿಗೆ ತಲಾ 50 ಲಕ್ಷ ವೇತನ ಸಿಗುತ್ತಿದೆ.
2014 ರಲ್ಲಿ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಪಡೆದಿರುವ ಧೋನಿ ಅವರು ಟಾಪ್ ಕೆಟಗರಿ A+ ನಿಂದ ಹೊರಗುಳೀಯಬೇಕಾಗುತ್ತದೆ.
ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ ಸೇರಿದಂತೆ ಹಿರಿಯ ಆಟಗಾರರು ರೋಟೇಷನ್ ನಿಯಮದಂತೆ ತಂಡಕ್ಕೆ ಆಯ್ಕೆಯಾಗುತ್ತಿದ್ದಾರೆ. ಆದರೆ, ಅವರೆಲ್ಲರೂ ಟಾಪ್ ಕೆಟಗರಿಯಂತೆ ಸಂಭಾವನೆ ಪಡೆಯಲಿದ್ದಾರೆ.
ಸುಪ್ರೀಂಕೋರ್ಟ್ ನಿರ್ದೇಶನದಂತೆ ನೇಮಕವಾಗಿರುವ ವಿನೋದ್ ರೈ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿಯು ಆಟಗಾರರ ಗುತ್ತಿಗೆಯ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications