ಮಹೇಂದ್ರ ಸಿಂಗ್ ಧೋನಿ ಬಗ್ಗೆ ಮೈಕಲ್ ಕ್ಲಾರ್ಕ್ ಹೇಳಿದ್ದೇನು?

Posted By:

ನವದೆಹಲಿ, ಸೆಪ್ಟೆಂಬರ್ 13: ಮುಂಬರುವ ಏಕದಿನ ವಿಶ್ವಕಪ್ ನಲ್ಲಿ ಭಾರತದ ಹಿರಿಯ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಖಂಡಿತವಾಗಿಯೂ ಆಡಲಿದ್ದಾರೆಂಬ ವಿಶ್ವಾಸವನ್ನು ಮೈಕಲ್ ಕ್ಲಾರ್ಕ್ ವ್ಯಕ್ತಪಡಿಸಿದ್ದಾರೆ.

ಇದೇನು ಸೆಹ್ವಾಗ್ ಅವರೇ, ಧೋನಿ ಬಗ್ಗೆ ಹೀಗೆ ಹೇಳಿಬಿಟ್ರಿ ?

ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಕ್ಲಾರ್ಕ್, ''ಧೋನಿ ಈಗಲೂ ಫಿಟ್ ಆಗಿದ್ದಾರೆ. ಉತ್ತಮ ಫಾರ್ಮ್ ನಲ್ಲಿದ್ದಾರೆ. ಅವರ ಆಟವನ್ನು ನೋಡುವುದೇ ಆನಂದ. ಅವರು ಖಂಡಿತವಾಗಿಯೂ 2019ರ ವಿಶ್ವಕಪ್ ನಲ್ಲಿ ಆಡುತ್ತಾರೆ. ಆ ನಿರೀಕ್ಷೆ ನನಗಿದೆ. ಇವರ ಫಿಟ್ನೆಸ್, ಫಾರ್ಮ್ ಹೀಗೆಯೇ ಮುಂದುವರಿದರೆ, 2023ರ ವಿಶ್ವಕಪ್ ನಲ್ಲೂ ಅವರು ಆಡಲಡ್ಡಿಯಿಲ್ಲ'' ಎಂದು ತಿಳಿಸಿದ್ದಾರೆ.

MS Dhoni will definitely play in the 2019 World Cup: Michael Clarke

ಇದೇ ತಿಂಗಳು ಟೀಂ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಐದು ಏಕದಿನ ಹಾಗೂ ಮೂರು ಟಿ20 ಪಂದ್ಯಗಳ ಸರಣಿಗಳಲ್ಲಿ ಪಾಲ್ಗೊಳ್ಳಲಿದೆ.

ಸೆ. 17ರಿಂದ ಏಕದಿನ ಸರಣಿ ಆರಂಭವಾಗಲಿದೆ. ಸೆ. 28ರಂದು ನಡೆಯಲಿರುವ ಇದೇ ಸರಣಿಯ 4ನೇ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಿದೆ. ಅಕ್ಟೋಬರ್ 7ರಿಂದ ಟಿ20 ಸರಣಿ ಆರಂಭವಾಗಲಿದೆ.

ಆಸೀಸ್ ತಂಡದ ಈ ಸರಣಿಗಳಲ್ಲಿ ಕ್ಲಾರ್ಕ್ ಅವರು ವೀಕ್ಷಕ ವಿವರಣೆಗಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಹಾಗಾಗಿಯೇ ಅವರು, ನವದೆಹಲಿಗೆ ಆಗಮಿಸಿದ್ದಾರೆ.

ಸ್ಟಾಂಡ್ ಬೈ ಆಟಗಾರರಾಗಿ ಇರಬೇಕೆಂದು ಧೋನಿ ಹೇಳಿದ ಆ ಐವರು

ಕ್ಲಾರ್ಕ್ ಅವರು ದೆಹಲಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಅವರಿಗಾಗಿ ಒಂದು ಪುಟ್ಟ ಕಾರ್ಯಕ್ರಮವೊಂದನ್ನು ಸೆ. 12ರ ಸಂಜೆ ನವದೆಹಲಿಯಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾರತದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಕೂಡಾ ಭಾಗವಹಿಸಿದ್ದರು.

ಈ ವೇಳೆ, ಪತ್ರಕರ್ತರ ಪ್ರಶ್ನೆಗಳಿಗೆ ಕ್ಲಾರ್ಕ್ ಉತ್ತರಿಸುತ್ತಿದ್ದರು. ಆಗಲೇ, ಧೋನಿಯವರು 2019ರ ಏಕದಿನ ವಿಶ್ವಕಪ್ ನಲ್ಲಿ ಆಡಬಲ್ಲರೆಂದು ನೀವು ಭಾವಿಸುವಿರಾ? ಎಂದು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಧೋನಿ ಹೀಗೆ ಉತ್ತರಿಸಿದರು.

Story first published: Wednesday, September 13, 2017, 16:34 [IST]
Other articles published on Sep 13, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ