ಏಕದಿನ ವಿಶ್ವಕಪ್‌ನಿಂದ ರಾಯುಡು ಹೊರಗೆ: ಮೊದಲ ಬಾರಿಗೆ ತುಟಿಬಿಚ್ಚಿದ ಎಂ.ಎಸ್‌.ಕೆ ಪ್ರಸಾದ್

ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿದ್ದ ಅಂಬಾಟಿ ರಾಯುಡು ಕಳೆದ ವಿಶ್ವಕಪ್‌ ತಂಡದಲ್ಲಿ ಟೀಮ್ ಇಂಡಿಯಾದಿಂದ ಹೊರಬಿದ್ದಿದ್ದರು. ಆದರೆ ಈ ವಿಶ್ವಕಪ್‌ ತಂಡದಿಂದ ಹೊರಬಿದ್ದ ಬಗ್ಗೆ ಆಯ್ಕೆ ಮಂಡಳಿಯ ಮುಖ್ಯಸ್ಥ ಎಂ.ಎಸ್‌.ಕೆ ಪ್ರಸಾದ್ ಇದೇ ಮೊದಲ ಬಾರಿಗೆ ಈ ವಿಚಾರವಾಗಿ ಮಾತನಾಡಿದ್ದಾರೆ.

ಎಂ.ಎಸ್‌.ಕೆ ಪ್ರಸಾದ್ ಸಂದರ್ಶನವೊಂದರಲ್ಲಿ ಮಾತನಾಡಿ ಅಂಬಾಟಿ ರಾಯುಡು ಅವರನ್ನು ಹೊರಗಿಟ್ಟ ವಿಚಾರವಾಗಿ ನನಗೂ ನೋವಿದೆ ಎಂದಿದ್ದಾರೆ. ಆದರೆ 2016ರ ಜಿಂಬಾಬ್ವೆ ಪ್ರವಾಸದ ನಂತರ ಆಯ್ಕೆ ಸಮಿತಿ ಅಂಬಾಟಿ ರಾಯುಡು ಅವರನ್ನು ಟೆಸ್ಟ್ ತಂಡದ ರೇಸ್‌ನಲ್ಲಿ ಬಯಸಿದ್ದೆವು. ಆದರೆ ರಾಯುಡು ಟೆಸ್ಟ್ ಪಂದ್ಯದ ಕಡೆಗೆ ಹೆಚ್ಚಿನ ಗಮನವನ್ನು ನೀಡಲಿಲ್ಲ. ಈ ಬಗ್ಗೆ ನಾನು ರಾಯುಡು ಜೊತೆಗೆ ಚರ್ಚಿಸಿದ್ದೇನೆ ಎಂದಿದ್ದಾರೆ.

ಜಾಂಟಿ ರೋಡ್ಸ್ ರೀತಿ ಮಿಂಚಿನ ಫೀಲ್ಡಿಂಗ್ ಮಾಡಿ ಬೆರಗುಗೊಳಿಸಿದ ಕೊಹ್ಲಿ! ವೀಡಿಯೋಜಾಂಟಿ ರೋಡ್ಸ್ ರೀತಿ ಮಿಂಚಿನ ಫೀಲ್ಡಿಂಗ್ ಮಾಡಿ ಬೆರಗುಗೊಳಿಸಿದ ಕೊಹ್ಲಿ! ವೀಡಿಯೋ

ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ಆಯೋಜನೆಯಾಗಿದ್ದ ವಿಶ್ವಕಪ್‌ನಲ್ಲಿ ಅಂಬಾಟಿ ರಾಯುಡು ನಾಲ್ಕನೇ ಕ್ರಮಾಂಕದಲ್ಲಿ ಆಡಲಿದ್ದಾರೆ ಎಂಬುದು ಎಲ್ಲರ ನಿರೀಕ್ಷೆಯಾಗಿತ್ತು. 2018ರ ಏಷ್ಯಾಕಪ್‌ನಲ್ಲಿ ಅದ್ಭುತ ಆಟ ಪ್ರದರ್ಶಿಸಿದ ಅಂಬಾಟಿ ರಾಯುಡು ಟೀಮ್ ಇಂಡಿಯಾದಲ್ಲಿ ನಾಲ್ಕನೇ ಸ್ಥಾನದಲ್ಲಿ ಖಾಯಂ ಆಗಿದ್ದರು. ಆದರೆ ನ್ಯೂಜಿಲೆಂಡ್ ವಿರುದ್ಧ ನಡೆದ ಸರಣಿ ಮತ್ತು ಐಪಿಎಲ್ ಟೂರ್ನಿಯಲ್ಲಿ ರಾಯುಡು ತಮ್ಮ ಆಟದ ಮೊನಚನ್ನು ಕಳೆದುಕೊಂಡರು. ಇದು ವಿಶ್ವಕಪ್‌ನಲ್ಲಿ ಸ್ಥಾನ ಕಳೆದುಕೊಳ್ಳಲು ಕಾರಣವಾಯಿತು.

ವಿಶ್ವಕಪ್‌ನಲ್ಲಿ ಅಂಬಾಟಿ ರಾಯುಡು ಬದಲಾಗಿ ವಿಜಯ್ ಶಂಕರ್ ಅವರನ್ನು ಆಯ್ಕೆ ಮಾಡಲಾಗಿತ್ತು. ಅದಾದ ಬಳಿಕ ಗಾಯಗೊಂಡು ಶಿಖರ್ ಧವನ್ ತಂಡದಿಂದ ಹೊರಬಿದ್ದರು. ಆ ಸ್ಥಾನಕ್ಕೆ ರಿಷಬ್ ಪಂತ್‌ ಅವರನ್ನು ಆಯ್ಕೆ ಮಾಡಲಾಯಿತು. ಅಂಬಾಟಿ ರಾಯುಡು ಅಲ್ಲಿಯೂ ಸ್ಥಾನವನ್ನುಗಳಿಸುವಲ್ಲಿ ವಿಫಲರಾಗಿದ್ದರು.

ಭಾರತ vs ಕಿವೀಸ್: ಸೌರವ್ ಗಂಗೂಲಿ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿಭಾರತ vs ಕಿವೀಸ್: ಸೌರವ್ ಗಂಗೂಲಿ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ

ವಿಶ್ವಕಪ್‌ನಿಂದ ಸ್ಥಾನವನ್ನು ಪಡೆಯುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಅಂಬಾಟಿ ರಾಯುಡು ಕ್ರಿಕೆಟ್‌ನಿಂದ ನಿವೃತ್ತಿಯನ್ನೂ ಘೋಷಿಸಿಬಿಟ್ಟರು. ಬಳಿಕ ನಿವೃತ್ತಿಯನ್ನು ವಾಪಾಸ್ ಪಡೆದುಕೊಂಡು ಸೈಯ್ಯದ್ ಮುಷ್ತಾಕ್ ಅಲಿ ಮತ್ತು ವಿಜಯ್ ಹಝಾರೆ ಟ್ರೋಪಿಯಲ್ಲಿ ಹೈದರಾಬಾದ್ ತಮಡವನ್ನು ಪ್ರತಿನಿಧಿಸಿದರು. ಬಳಿಕ ದೇಸಿ ಕ್ರಿಕೆಟ್‌ನಿಂದ ರಾಯುಡು ನಿವೃತ್ತಿಯನ್ನು ಪಡೆದುಕೊಂಡಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 15 - October 24 2021, 03:30 PM
ಶ್ರೀಲಂಕಾ
ಬಾಂಗ್ಲಾದೇಶ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, February 6, 2020, 16:45 [IST]
Other articles published on Feb 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X