163 ಬಾಲಿಗೆ 202 ರನ್ ಬಾರಿಸಿದ 16ರ ಬಾಲೆ

Posted By: Manjunatha

ಮುಂಬೈ, ನವೆಂಬರ್ 05: ಮುಂಬೈನ 16ರ ಬಾಲೆ ಜೆಮಿಮಾ ರೋಡ್ರಿಗೋಸ್ ನವೆಂಬರ್ 5 ಭಾನುವಾರ ನಡೆದ 50 ಓವರ್ ಗಳ ಏಕದಿನ ಪಂದ್ಯದಲ್ಲಿ 163 ಎಸೆತದಲ್ಲಿ 202 ರನ್ ಬಾರಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ.

ಔರಂಗಾಬಾದ್ ನಲ್ಲಿ ನಡೆಯುತ್ತಿರುವ 19 ವರ್ಷದ ಮಹಿಳಾ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸೌರಾಷ್ಟ್ರ ವಿರುದ್ಧ ಪಂದ್ಯದಲ್ಲಿ ಜೆಮಿಮಾ ಈ ಸಾಧನೆ ಮಾಡಿದ್ದಾರೆ.

Mumbai Girl slams Double ton in 50 over game

ಕೇವಲ 13 ವರ್ಷದ ಬಾಲಕಿಯಾಗಿದ್ದಾಗಲೇ ಮುಂಬೈನ 19 ವರ್ಷದೊಳಗಿನ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ ಪ್ರತಿಭಾವಂತೆ ಜೆಮಿಮಾ. ಆಡಿದ ಮೊದಲ ವೃತ್ತಿಪರ ಟೂರ್ನಮೆಂಟ್ ನಲ್ಲಿಯೇ ಎರಡು ಶತಕಗಳನ್ನು ಗಳಿಸಿದ ಈಕೆಯ ಪ್ರಸ್ತುತ ರನ್ ಸರಾಸರಿ 300.

ನಾಲ್ಕನೇ ವಯಸ್ಸಿನಲ್ಲಿಯೇ ಕ್ರಿಕೆಟ್ ಬ್ಯಾಟ್-ಬಾಲ್ ಹಿಡಿದ ಜೆಮಿಮಾ ಗೆ ಕ್ರೀಡೆಯಲ್ಲಿ ಎಲ್ಲಿಲ್ಲದ ಆಸಕ್ತಿ. ಕ್ರಿಕೆಟ್ ಮಾತ್ರವಲ್ಲದೆ ಬೇರೆ ಕ್ರೀಡೆಗಳ ಬಗ್ಗೆಯೂ ಆಸಕ್ತಿ ಹೊಂದಿರುವ ಈಕೆ 17 ವರ್ಷದೊಳಗಿನ ಭಾರತ ಹಾಕಿ ತಂಡದಲ್ಲಿಯೂ ಸ್ಥಾನ ಗಿಟ್ಟಿಸಿಕೊಂಡಿದ್ದರು.

ಮೊದಲು ಬೌಲರ್ ಆಗಿ ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟು ನಂತರ ಬ್ಯಾಟ್ ವುಮೆನ್ ಆಗಿ ಬದಲಾದರು. ಇದೀಗ ಮುಂಬೈ ನ 19 ವರ್ಷದೊಳಗಿನ ತಂಡದ ಓಪನರ್ ಬ್ಯಾಟ್ಸ್ ವುಮನ್.

ಜೆಮಿಮಾ ಅವರ ಭರ್ಜರಿ ಬ್ಯಾಟಿಂಗ್ ಸಹಾಯದಿಂದ ಮುಂಬೈ ತಂಡ ಸೌರಾಷ್ಟ್ರ ವಿರುದ್ಧ 347 ರನ್ ಗಳ ಬೃಹತ್ ಮೊತ್ತ ಕಲೆಹಾಕಿದೆ. ಮೊತ್ತ ಬೆನ್ನು ಹತ್ತಿದ ಸೌರಾಷ್ಟ್ರ ಬಾಲಕಿಯರ ತಂಡ 62 ರನ್ ಗಳಿಗೆ ತನ್ನೆಲ್ಲಾ ವಿಕೇಟ್ ಗಳನ್ನು ಕಳೆದುಕೊಂಡು ಮುಂಬೈ ಎದುರು ಮಂಡಿಯೂರಿ ಶರಣಾಗಿದೆ.
ಬಿಬಿಸಿಐ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಪಂದ್ಯದ ಸ್ಕೋರ್ ಬೋರ್ಡ್ ಪ್ರಕಟಿಸಿದ್ದು, ಜೆಮಿಮಾಗೆ ಶುಭಾಷಯ ಕೋರಿದೆ. ಜೆಮಿಮಾ ಅವರ ಸಾಧನೆಗೆ ಟ್ವಿಟರ್ ನಲ್ಲೂ ಅಭಿನಂದನೆಯ ಮಹಾಪೂರವೇ ಹರಿದುಬಂದಿದೆ.

Story first published: Sunday, November 5, 2017, 17:38 [IST]
Other articles published on Nov 5, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ