ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂದಿನ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌‌ಗೆ ಎದುರಾಗಲಿರುವ ಸಂಕಷ್ಟವನ್ನು ಬಿಚ್ಚಿಟ್ಟ ರೋಹಿತ್ ಶರ್ಮಾ

Mumbai Indians wont have the same team in upcoming IPL season says Rohit Sharma

ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಗಳ ಇತಿಹಾಸದಲ್ಲಿ ಅತ್ಯಂತ ಯಶಸ್ಸನ್ನು ಸಾಧಿಸಿರುವ ತಂಡವೆಂದರೆ ಅದು ಮುಂಬೈ ಇಂಡಿಯನ್ಸ್. ಹೌದು, ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ( 5 ಟ್ರೋಫಿಗಳು) ಟ್ರೋಫಿಗಳನ್ನು ತನ್ನದಾಗಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ಯಶಸ್ವಿ ತಂಡವೆನಿಸಿಕೊಂಡಿದೆ. 2019 ಮತ್ತು 2020ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ಚಾಂಪಿಯನ್ಸ್ ಆಗಿ ಹೊರ ಹೊಮ್ಮಿದ್ದ ಮುಂಬೈ ಇಂಡಿಯನ್ಸ್ ತಂಡ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆರಂಭದಲ್ಲಿ ಹೇಳಿಕೊಳ್ಳುವಂತಹ ಉತ್ತಮ ಪ್ರದರ್ಶನವನ್ನೇನೂ ನೀಡದೆ ಮಂಕಾಗಿತ್ತು. ಈ ಬಾರಿ ಈ ತಂಡ ಪ್ಲೇ ಆಫ್ ಹಂತವನ್ನು ಯಾವುದೇ ಕಾರಣಕ್ಕೂ ಪ್ರವೇಶಿಸುವುದಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗುವ ರೀತಿಯ ಪ್ರದರ್ಶನವನ್ನು ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ನೀಡಿತ್ತು.

ದುಬೈನಲ್ಲಿ ರಾರಾಜಿಸುತ್ತಿದೆ ವಿರಾಟ್ ಕೊಹ್ಲಿ ಮೇಣದ ಪ್ರತಿಮೆದುಬೈನಲ್ಲಿ ರಾರಾಜಿಸುತ್ತಿದೆ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ

ಆದರೆ ಟೂರ್ನಿಯ ಲೀಗ್ ಹಂತದ ಕೊನೆಕೊನೆಯಲ್ಲಿ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಕಮ್ ಬ್ಯಾಕ್ ಮಾಡಿದ ಮುಂಬೈ ಇಂಡಿಯನ್ಸ್ ನೆಟ್ ರನ್ ರೇಟ್ ಅಭಾವದಿಂದಾಗಿ ಪ್ಲೇ ಆಫ್ ಹಂತವನ್ನು ಪ್ರವೇಶಿಸುವುದರಲ್ಲಿ ಎಡವಿತು. ಹೀಗೆ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ಅಂಕಪಟ್ಟಿಯಲ್ಲಿ ಐದನೇ ಸ್ಥಾನ ಪಡೆದುಕೊಳ್ಳುವುದರ ಮೂಲಕ ತನ್ನ ಪಯಣವನ್ನು ಮುಗಿಸಿದ ಮುಂಬೈ ಇಂಡಿಯನ್ಸ್ ತಂಡದ ಕುರಿತಾಗಿ ತಂಡದ ನಾಯಕ ರೋಹಿತ್ ಶರ್ಮಾ ಇತ್ತೀಚೆಗಷ್ಟೇ ತಮ್ಮ ಇನ್ ಸ್ಟಾಗ್ರಾಂ ಖಾತೆಯ ಲೈವ್‌ನಲ್ಲಿ ಮಾತನಾಡಿದ್ದು ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ತಮ್ಮ ತಂಡ ಎದುರಿಸುವ ಪ್ರಮುಖ ಸವಾಲಿನ ಕುರಿತು ಮಾತನಾಡಿದ್ದಾರೆ.

ಟಿ20 ವಿಶ್ವಕಪ್‌: ಕಾರಣ ತಿಳಿಸಿ ರೋಹಿತ್ ಶರ್ಮಾ ಜೊತೆ ಕಣಕ್ಕಿಳಿಯುವ ನಿರ್ಧಾರದಿಂದ ಹಿಂದೆ ಸರಿದ ಕೊಹ್ಲಿ!ಟಿ20 ವಿಶ್ವಕಪ್‌: ಕಾರಣ ತಿಳಿಸಿ ರೋಹಿತ್ ಶರ್ಮಾ ಜೊತೆ ಕಣಕ್ಕಿಳಿಯುವ ನಿರ್ಧಾರದಿಂದ ಹಿಂದೆ ಸರಿದ ಕೊಹ್ಲಿ!

ಹೌದು, ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೇವಲ ಮುಂಬೈ ಇಂಡಿಯನ್ಸ್ ತಂಡಕ್ಕೆ ಮಾತ್ರವಲ್ಲದೇ ಉಳಿದ ಎಲ್ಲಾ ತಂಡಗಳಿಗೂ ಕೂಡ ಸಂಕಷ್ಟವನ್ನು ತಂದೊಡ್ಡಲಿದೆ. ಏಕೆಂದರೆ ಮುಂಬರಲಿರುವ ಟೂರ್ನಿಯಲ್ಲಿ 2 ನೂತನ ತಂಡಗಳ ಸೇರ್ಪಡೆಯಾಗಲಿದ್ದು ತಂಡಗಳ ಬಹುತೇಕ ಆಟಗಾರರನ್ನು ಮೆಗಾ ಹರಾಜಿನಲ್ಲಿ ಹರಾಜು ಮಾಡಲಾಗುತ್ತದೆ. ಹೀಗಾಗಿ ಅನೇಕ ವರ್ಷಗಳಿಂದ ಒಂದೇ ತಂಡದ ಪರ ಆಡುತ್ತಿದ್ದ ಹಲವಾರು ಪ್ರಮುಖ ಕ್ರಿಕೆಟಿಗರು ತಂಡಗಳನ್ನು ಬಿಡಬೇಕಾದ ಕಷ್ಟದ ಪರಿಸ್ಥಿತಿ ಎದುರಾಗಿದೆ. ಈ ಒಂದು ಅಂಶ ಉಳಿದ ತಂಡಗಳಿಗಿಂತ ಮುಂಬೈ ಇಂಡಿಯನ್ಸ್ ತಂಡಕ್ಕೆ ಹೆಚ್ಚು ಹೊಡೆತ ಬೀಳಲಿದ್ದು, ಈ ಕುರಿತಾಗಿ ರೋಹಿತ್ ಶರ್ಮಾ ಈ ಕೆಳಕಂಡಂತೆ ಮಾತನಾಡಿದ್ದಾರೆ.

ಮುಂದಿನ ಆವೃತ್ತಿಯಲ್ಲಿ ಇದೇ ತಂಡವನ್ನು ಉಳಿಸಿಕೊಳ್ಳುವುದು ಕಷ್ಟ

ಮುಂದಿನ ಆವೃತ್ತಿಯಲ್ಲಿ ಇದೇ ತಂಡವನ್ನು ಉಳಿಸಿಕೊಳ್ಳುವುದು ಕಷ್ಟ


"ಮುಂಬರಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಇದೇ ತಂಡವನ್ನು ಉಳಿಸಿಕೊಳ್ಳುವುದು ತೀರಾ ಕಷ್ಟದ ಕೆಲಸ. ತಂಡದಲ್ಲಿರುವ ಎಲ್ಲಾ ಪ್ರಮುಖ ಆಟಗಾರರನ್ನು ಮುಂದಿನ ಆವೃತ್ತಿಯಲ್ಲಿ ತಂಡದಲ್ಲಿ ಹೊಂದುವುದು ಕಷ್ಟ. ಆದರೆ ತಂಡಕ್ಕೆ ಬೇಕಾಗಿರುವ ಅತಿಮುಖ್ಯವಾದ ಆಟಗಾರರ ಗುಂಪನ್ನು ತಂಡ ಉಳಿಸಿಕೊಳ್ಳಲಿದೆ" ಎಂಬ ವಿಶ್ವಾಸವನ್ನು ರೋಹಿತ್ ಶರ್ಮಾ ವ್ಯಕ್ತಪಡಿಸಿದರು.

ತಂಡದ ಅತಿಮುಖ್ಯ ಆಟಗಾರರನ್ನು ಉಳಿಸಿಕೊಳ್ಳುತ್ತಾ ಮುಂಬೈ ಇಂಡಿಯನ್ಸ್?

ತಂಡದ ಅತಿಮುಖ್ಯ ಆಟಗಾರರನ್ನು ಉಳಿಸಿಕೊಳ್ಳುತ್ತಾ ಮುಂಬೈ ಇಂಡಿಯನ್ಸ್?


ಮುಂಬೈ ಇಂಡಿಯನ್ಸ್ ಇತರೆ ತಂಡಗಳ ರೀತಿ ಉತ್ತಮ ಆಟಗಾರರನ್ನು ಇಷ್ಟು ವರ್ಷಗಳಲ್ಲಿ ಹೆಚ್ಚಾಗಿ ಬಿಟ್ಟುಕೊಟ್ಟಿಲ್ಲ. ಅನೇಕ ವರ್ಷಗಳಿಂದ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವನ್ನು ನೀಡುತ್ತಾ ಬಂದಿರುವ ಮುಂಬೈ ಇಂಡಿಯನ್ಸ್ ಮುಂಬರುವ ಐಪಿಎಲ್ ಟೂರ್ನಿಯಲ್ಲಿಯೂ ಆಟಗಾರರನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾ ಎಂಬ ಪ್ರಶ್ನೆ ಇದೀಗ ಮೂಡಿದೆ. ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಕೀರನ್ ಪೊಲಾರ್ಡ್, ರಾಹುಲ್ ಚಹಾರ್, ಟ್ರೆಂಟ್ ಬೌಲ್ಟ್ ಹೀಗೆ ಮುಂತಾದ ಪ್ರಮುಖ ಆಟಗಾರರಲ್ಲಿ ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕು ಎಂಬುದು ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿರುವದಂತೂ ನಿಜ.

Chahal ಅವರ ಜಾಗ ಕಸಿದುಕೊಂಡ ಆಟಗಾರ ಯಾರು ? | Oneindia Kannada
ಇತರೆ ತಂಡಗಳಿಗಿಂತ ಮುಂಬೈ ಇಂಡಿಯನ್ಸ್ ತಂಡಕ್ಕೆ ಯಾಕೆ ಒತ್ತಡ?

ಇತರೆ ತಂಡಗಳಿಗಿಂತ ಮುಂಬೈ ಇಂಡಿಯನ್ಸ್ ತಂಡಕ್ಕೆ ಯಾಕೆ ಒತ್ತಡ?

ಸದ್ಯ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ಮುಂಬರುವ ಐಪಿಎಲ್ ಹರಾಜಿನಲ್ಲಿ ತಂಡವೊಂದು ತನ್ನ ಮೂವರು ಆಟಗಾರರನ್ನು ಮಾತ್ರ ಉಳಿಸಿಕೊಳ್ಳಬಹುದು ಎನ್ನಲಾಗುತ್ತಿದೆ. ಈ ರೀತಿಯ ನಿಯಮ ಜಾರಿಯಾಗುವುದು ಬಹುತೇಕ ಖಚಿತವಾಗಿದ್ದು, ಇದು ಇತರೆ ತಂಡಗಳಿಗಿಂತ ಮುಂಬೈ ಇಂಡಿಯನ್ಸ್ ತಂಡಕ್ಕೆ ಹೆಚ್ಚು ಒತ್ತಡವನ್ನು ಉಂಟು ಮಾಡಲಿದೆ. ಏಕೆಂದರೆ ಕಳೆದ ಕೆಲ ವರ್ಷಗಳಿಂದ ಇತರೆ ತಂಡಗಳ ರೀತಿ ಮುಂಬೈ ಇಂಡಿಯನ್ಸ್ ತಂಡ ತನ್ನ ಬಹುತೇಕ ಆಟಗಾರರನ್ನು ಬಿಟ್ಟುಕೊಟ್ಟಿಲ್ಲ, ಹಲವಾರು ವರ್ಷಗಳಿಂದ ಅದೇ ಆಟಗಾರರಿಗೆ ತಂಡದಲ್ಲಿ ಸ್ಥಾನ ಕೊಡುತ್ತಾ ಬಂದಿರುವ ಮುಂಬೈ ಇಂಡಿಯನ್ಸ್ ಮುಂಬರಲಿರುವ ಹರಾಜಿನಲ್ಲಿ ತನ್ನ ಆಟಗಾರರನ್ನು ಬಿಟ್ಟು ನೂತನ ಆಟಗಾರರನ್ನು ಖರೀದಿಸಿ ಇಷ್ಟೇ ಮಟ್ಟದ ತಂಡವನ್ನು ಕಟ್ಟುವುದು ಸವಾಲಿನ ಕೆಲಸವಾಗಲಿದೆ. ಹೀಗಾಗಿ ಇತರೆ ತಂಡಗಳಿಗೆ ಹೋಲಿಸಿದರೆ ರಿಟೇನ್ ಮಾಡಿಕೊಳ್ಳುವ ನಿಯಮ ಮುಂಬೈ ಇಂಡಿಯನ್ಸ್ ತಂಡದ ಮೇಲೆ ಹೆಚ್ಚು ಪ್ರಭಾವ ಮತ್ತು ಒತ್ತಡವನ್ನು ಬೀರಲಿದೆ. ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡ ಈ ರೀತಿಯ ಒತ್ತಡದಿಂದ ಹೊರತಾಗಿಲ್ಲ.

Story first published: Wednesday, October 20, 2021, 0:32 [IST]
Other articles published on Oct 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X