ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್‌ ಮರು ವೇಳಾಪಟ್ಟಿಗೆ ಬಿಸಿಸಿಐ ವಿನಂತಿಸಿಕೊಂಡಿಲ್ಲ: ಇಸಿಬಿ

No formal request from BCCI on rescheduling Tests vs England yet, says ECB

ಲಂಡನ್: ಅರ್ಧಕ್ಕೆ ನಿಂತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 2021ರ ಆವೃತ್ತಿಯ ಇನ್ನುಳಿದ ಪಂದ್ಯಗಳನ್ನು ನಡೆಸುವ ಸಲುವಾಗಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್‌ನಲ್ಲಿ ಭಾರತ-ಇಂಗ್ಲೆಂಡ್ ಟೆಸ್ಟ್‌ ಸರಣಿಯ ವೇಳಾಪಟ್ಟಿಯನ್ನು ಬದಲಿಸಲು ಕೋರಿಕೊಂಡಿತ್ತು ಎನ್ನಲಾಗಿತ್ತು. ಆದರೆ ಈ ಬಗ್ಗೆ ಇಂಗ್ಲೆಂಡ್ ಬೋರ್ಡ್ ಸ್ಪಷ್ಟನೆ ನೀಡಿದೆ.

ರಾಹುಲ್ ದ್ರಾವಿಡ್ ಉದ್ದೇಶದ ಬಗ್ಗೆ ಮೌನ ಮುರಿದ ಗ್ರೆಗ್ ಚಾಪೆಲ್!ರಾಹುಲ್ ದ್ರಾವಿಡ್ ಉದ್ದೇಶದ ಬಗ್ಗೆ ಮೌನ ಮುರಿದ ಗ್ರೆಗ್ ಚಾಪೆಲ್!

ಐದು ಪಂದ್ಯಗಳ ಟೆಸ್ಟ್‌ ಸರಣಿಯ ವೇಳಾಪಟ್ಟಿಯನ್ನು ಒಂದು ವಾರ ಮುಂಚಿತವಾಗಿ ನಡೆಸಲು ಬಿಸಿಸಿಐಯಿಂದ ನಮಗೆ ಯಾವುದೇ ರೀತಿಯ ಅಧಿಕೃತ ಮನವಿ ಬಂದಿಲ್ಲ ಎಂದು ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ) ಹೇಳಿದೆ.

ಈಗಿನ ವೇಳಾಪಟ್ಟಿಯ ಪ್ರಕಾರ ಆಗಸ್ಟ್‌ 4ಕ್ಕೆ ಆರಂಭಗೊಳ್ಳುವ ಭಾರತ-ಇಂಗ್ಲೆಂಡ್ ಐದು ಪಂದ್ಯಗಳ ಟೆಸ್ಟ್ ಸರಣಿ ಸೆಪ್ಟೆಂಬರ್ 14ಕ್ಕೆ ಕೊನೆಗೊಳ್ಳಲಿದೆ. ಈ ಸರಣಿಯನ್ನು ಒಂದು ವಾರ ಮುಂಚಿತವಾಗಿ ನಡೆಸಿದರೆ ಐಪಿಎಲ್ ನಡೆಸಲು ಬೇಕಾದ ಸಿದ್ಧತೆಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಹೀಗಾಗಿ ಬಿಸಿಸಿಐ ಇಸಿಬಿಯನ್ನು ವೇಳಾಪಟ್ಟಿ ಬದಲಿಸಲು ಕೇಳಿಕೊಂಡಿತ್ತು ಎಂದು ವರದಿಯೊಂದು ಹೇಳಿತ್ತು.

ಐಪಿಎಲ್ ಅಥವಾ ಪಿಎಸ್ಎಲ್ ಯಾವುದು ಶ್ರೀಮಂತ ಲೀಗ್? ಮಾಜಿ ಆರ್‌ಸಿಬಿ ಆಟಗಾರನ ಉತ್ತರವಿದುಐಪಿಎಲ್ ಅಥವಾ ಪಿಎಸ್ಎಲ್ ಯಾವುದು ಶ್ರೀಮಂತ ಲೀಗ್? ಮಾಜಿ ಆರ್‌ಸಿಬಿ ಆಟಗಾರನ ಉತ್ತರವಿದು

'ಐಪಿಎಲ್ ಅನ್ನು ಪೂರ್ಣಗೊಳಿಸಲು ದಾರಿಯಾಗುವಂತೆ ಟೆಸ್ಟ್‌ ಸರಣಿಯನ್ನು ಮುಂಚಿತವಾಗಿ ನಡೆಸುವಂತೆ ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ ಅನ್ನು ಭಾರತೀಯ ಕ್ರಿಕೆಟ್ ಬೋರ್ಡ್ ಕೋರಿಕೊಂಡಿದೆ,' ಎಂದು 'ದ ಟೈಮ್ಸ್' ವರದಿ ಮಾಡಿತ್ತು. ಜೂನ್ 2ಕ್ಕೆ ಇಂಗ್ಲೆಂಡ್‌ಗೆ ಪ್ರವಾಸ ಹೋಗಲಿರುವ ಭಾರತ ಅಲ್ಲಿ ನ್ಯೂಜಿಲೆಂಡ್ ವಿರುದ್ಧ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ ಮತ್ತು ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ.

Story first published: Friday, May 21, 2021, 18:11 [IST]
Other articles published on May 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X