ಇಟಲಿಯಲ್ಲಿ ಕೊಹ್ಲಿ- ಅನುಷ್ಕಾ ಮದ್ವೆಯಂತೆ, ಗುಲ್ಲೋ ಗುಲ್ಲು!

Posted By:

ಮುಂಬೈ, ಡಿಸೆಂಬರ್ 06: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಅವರ ಮದುವೆ ಡಿಸೆಂಬರ್ ತಿಂಗಳಲ್ಲಿ ಇಟಲಿಯಲ್ಲಿ ನಡೆಯಲಿದೆ ಎಂದು ಹತ್ತು ಹಲವು ಮಾಧ್ಯಮಗಳಲ್ಲಿ ಸಂಜೆಯಿಂದ ಸುದ್ದಿ ಗಿರಕಿ ಹೊಡೆಯುತ್ತಲೇ ಇದೆ. ಈ ಸುದ್ದಿಯೆಲ್ಲ ಶುದ್ಧ ಸುಳ್ಳು ಎಂದು ನಟಿ ಅನುಷ್ಕಾ ಅವರ ವಕ್ತಾರರು ತಿಳಿಸಿದ್ದಾರೆ.

ನಿಶ್ಚಿತಾರ್ಥ ಸುದ್ದಿ ಅಲ್ಲಗೆಳೆದ ವಿರಾಟ್ ಕೊಹ್ಲಿ

ಆದರೆ, ಸುದ್ದಿ ಹಬ್ಬುವುದನ್ನು ತಪ್ಪಿಸಲು ಆಗುತ್ತಿಲ್ಲ. ಬಹುಶಃ ಈ ಹಿಂದೆ ಗಾಳಿಸುದ್ದಿಗೆ ಸ್ವತಃ ಕೊಹ್ಲಿ ಅವರು ಗುದ್ದು ಕೊಟ್ಟಂತೆ ಈ ಸುದ್ದಿಯನ್ನು ಅಲ್ಲಗೆಳೆಯುವ ತನಕ ಈ ಸುಳ್ಸುದ್ದಿ ಹರಡುವುದನ್ನು ತಪ್ಪಿಸಲು ಸಾಧ್ಯವಿಲ್ಲವೆನಿಸುತ್ತದೆ.

No truth to Anushka, Virat wedding rumours: spokesperson

ಪ್ರವಾಸಿ ಶ್ರೀಲಂಕಾ ವಿರುದ್ಧ ನಡೆಯಲಿರುವ ಏಕದಿನ ಮತ್ತು ಟಿ -20 ಸರಣಿಯಿಂದ ಕೊಹ್ಲಿ ಅವರು ಬ್ರೇಕ್ ತೆಗೆದುಕೊಂಡಿದ್ದಾರೆ. ಆದರೆ, ಇದರರ್ಥ ಅವರು ಮದುವೆ ತಯಾರಿಯಲ್ಲಿದ್ದಾರೆ ಎಂಬುದಲ್ಲ ಎಂದು ಅವರ ಆಪ್ತರು ಹೇಳಿದ್ದಾರೆ.

ಏನೆಂದು ಸುದ್ದಿ ಹಬ್ಬುತ್ತಿದೆ?: ಡಿಸೆಂಬರ್ 9 ರಿಂದ 11 ರವರೆಗೆ ಇಟಲಿಯ ಮಿಲಾನ್ ನಲ್ಲಿ ಕೊಹ್ಲಿ ಮತ್ತು ಅನುಷ್ಕಾ ಮದುವೆ ನಡೆಯಲಿದೆ ಎಂದು ಇಟಲಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಕೆಲವು ಕಡೆ ದಿನಾಂಕ 11 ರಿಂದ 13 ಎಂದು ಪ್ರಸಾರವಾಗಿದೆ. ಡಿಸೆಂಬರ್ 22 ರಂದು ಭಾರತದಲ್ಲಿ ಅದ್ದೂರಿಯಾಗಿ ಆರತಕ್ಷತೆ ಸಮಾರಂಭ ನಡೆಯಲಿದೆ ಎದು ವರದಿಯಾಗಿತ್ತು.

ಈ ಹಿಂದೆ 2016ರಲ್ಲಿ ಡೆಹ್ರಾಡೂನ್ ನಲ್ಲಿ ವಿರಾಮದಲ್ಲಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ತಾರೆ ಅನುಷ್ಕಾ ಶರ್ಮ ಇಬ್ಬರ -ನಡುವಿನ ಗೆಳೆತನ, ಪ್ರೀತಿಗೆ ನಿಶ್ಚಿತಾರ್ಥದ ಮುದ್ರೆ ಸಿಕ್ಕಿದೆ. ಆಪ್ತೇಷ್ಟರ ಸಮ್ಮುಖದಲ್ಲಿ ಗೌಪ್ಯವಾಗಿ ಸಮಾರಂಭ ಮುಕ್ತಾಯವಾಗಿದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿತ್ತು. ನಂತರ ಕೊಹ್ಲಿ ಅವರು ಟ್ವೀಟ್ ಮಾಡಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.(ಪಿಟಿಐ)

Story first published: Wednesday, December 6, 2017, 23:43 [IST]
Other articles published on Dec 6, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ