Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬರ್ತ್‌ಡೇ ಬಾಯ್ ತೆಂಡೂಲ್ಕರ್ ಶತಕ ಬಾರಿಸಿ ಭಾರತ ಗೆಲ್ಲಿಸಿದ್ದ ದಿನವಿದು

On this day: Birthday boy Sachin Tendulkar hammers ton to help India

ಮುಂಬೈ, ಏಪ್ರಿಲ್ 24: ಅದ್ಭುತ ಫಾರ್ಮ್‌ನಲ್ಲಿದ್ದ ಸಚಿನ್ ತೆಂಡೂಲ್ಕರ್ ಆರ್ಕಷಕ ಶತಕ ಬಾರಿಸಿ ಭಾರತಕ್ಕೆ ಕೋಕ ಕೋಲ ಕಪ್ ಟ್ರೋಫಿ ಗೆಲ್ಲಿಸಿಕೊಟ್ಟಿದ್ದ ದಿನವಿದು. ಆವತ್ತು ಬರ್ತ್‌ ಡೇ ಬಾಯ್ ಆಗಿದ್ದ ಗಾಡ್ ಆಫ್ ಕ್ರಿಕೆಟ್‌ ಖ್ಯಾತಿಯ ಸಚಿನ್ ಮೈದಾನಕ್ಕಿಳಿದು ದಿಟ್ಟ ಬ್ಯಾಟಿಂಗ್ ಮೂಲಕ ಮಿನುಗಿದ್ದರು.

1998ರಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಶಾರ್ಜಾ ಸ್ಟೇಡಿಯಂನಲ್ಲಿ ನಡೆದಿದ್ದ ಆಸ್ಟ್ರೇಲಿಯಾ, ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ತ್ರಿಕೋನ ಸರಣಿಯ ಪಂದ್ಯವಿದು. ಫೈನಲ್ ಪಂದ್ಯದಲ್ಲಿ ಮೊಹಮ್ಮದ್ ಅಝರುದ್ದೀನ್ ನಾಯಕತ್ವದ ಭಾರತ ಮತ್ತು ಸ್ಟೀವಾ ಮುಂದಾಳತ್ವದ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದವು.

1998ರ ಏಪ್ರಿಲ್ 24ರಂದು ಅಂದರೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹುಟ್ಟು ಹಬ್ಬದಂದೇ ಸಚಿನ್ ಭಾರತಕ್ಕೆ ಟ್ರೋಫಿ ಗೆಲುವಿನ ಉಡುಗೊರೆ ನೀಡಿದ್ದರು. ಅಂದು ಭಾರತದ ಪರ ಲಿಟ್ಲ್ ಮಾಸ್ಟರ್, 131 ಎಸೆತಗಳಲ್ಲಿ 134 ರನ್ ಬಾರಿಸಿದ್ದರು. ಈ ವೇಳೆ ಸಚಿನ್ ಬ್ಯಾಟಿಂದ 12 ಬೌಂಡರಿ, 3 ಸಿಕ್ಸರ್‌ಗಳು ಸಿಡಿದಿದ್ದವು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿದ್ದ ಆಸ್ಟ್ರೇಲಿಯಾ, ಆ್ಯಡಮ್ ಗಿಲ್‌ಕ್ರಿಸ್ಟ್ 45, ಮೈಕಲ್ ಬೇವನ್ 45, ಸ್ಟೀವ್ ವಾ 70, ಡ್ಯಾರೆನ್ ಲೆಹ್ಮನ್ 70, ಡೇಮಿಯನ್ ಮಾರ್ಟಿನ್ 16 ರನ್‌ನೊಂದಿಗೆ 50 ಓವರ್‌ಗೆ 9 ವಿಕೆಟ್ ನಷ್ಟದಲ್ಲಿ 272 ರನ್ ಬಾರಿಸಿತ್ತು.

ಗುರಿ ಬೆನ್ನತ್ತಿದ ಭಾರತ, ಸೌರವ್ ಗಂಗೂಲಿ 23, ಸಚಿನ್ ತೆಂಡೂಲ್ಕರ್ 134, ನಯನ್ ಮೋಂಗಿಯಾ 28, ಮೊಹಮ್ಮದ್ ಅಝರುದ್ದೀನ್ 58 ರನ್‌ನೊಂದಿಗೆ 48.3 ಓವರ್‌ಗೆ 4 ವಿಕೆಟ್ ನಷ್ಟದಲ್ಲಿ 275 ರನ್ ಬಾರಿಸಿ 6 ವಿಕೆಟ್‌ ಗೆಲುವನ್ನಾಚರಿಸಿತ್ತು. ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ ಎರಡೂ ಪ್ರಶಸ್ತಿಗಳನ್ನು ಸಚಿನ್ ತೆಂಡೂಲ್ಕರ್ ಬಾಚಿಕೊಂಡಿದ್ದರು.

Story first published: Friday, April 24, 2020, 14:27 [IST]
Other articles published on Apr 24, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+