ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅನಿಲ್ ಕುಂಬ್ಳೆಗೆ ಪ್ರತಿಷ್ಠಿತ ಹಾಲ್ ಆಫ್ ಫೇಮ್ ಗೌರವ

ಮೆಲ್ಬೋರ್ನ್, ಫೆ. 20: ವಿಶ್ವವಿಖ್ಯಾತ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಐಸಿಸಿಯ ಪ್ರತಿಷ್ಠಿತ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗಿದ್ದಾರೆ.

ಫೆಬ್ರವರಿ 22 ರಂದು ನಡೆಯಲಿರುವ ಭಾರತ-ದಕ್ಷಿಣ ಆಫ್ರಿಕಾ ನಡುವಣ ವಿಶ್ವಕಪ್ ಕ್ರಿಕೆಟ್ ಪಂದ್ಯದ ವೇಳೆ ಕುಂಬ್ಳೆ ಅವರನ್ನು ಗೌರವಿಸಲಾಗುವುದು ಎಂದು ಐಸಿಸಿ ತಿಳಿಸಿದೆ.[ವಿಶ್ವಕಪ್: ಹರಿಣಗಳ ವಿರುದ್ಧ ಶತಕ ಸಾಧಿಸಿದ್ದು ಸಚಿನ್ ಮಾತ್ರ]

kumble

ಪಂದ್ಯದ ಇನಿಂಗ್ಸ್ ಬ್ರೇಕ್ ವೇಳೆ ಕುಂಬ್ಳೆ ಅವರನ್ನು ಸನ್ಮಾನಿಸಲಾಗುವುದು ಎಂದು ಐಸಿಸಿ ನಿರ್ದೇಶಕ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾದ ಅಧ್ಯಕ್ಷ ವ್ಯಾಲಿ ಎಡ್ವರ್ಡ್ಸ್ ತಿಳಿಸಿದ್ದಾರೆ. ಈ ಮೂಲಕ ಸ್ಪಿನ್‌ ದಂತಕತೆ ಈ ಗೌರವಕ್ಕೆ ಭಾಜನರಾದ ವಿಶ್ವದ 77ನೇ ಆಟಗಾರ ಎನಿಸಲಿದ್ದಾರೆ.[ಬೆಳಗಾವಿಯಲ್ಲಿ ಕ್ರೀಡಾ ಅಕಾಡೆಮಿ, ಕುಂಬ್ಳೆ ಮುಂದಾಳತ್ವ]

ಮುತ್ತಯ್ಯ ಮುರಳಿರಧರನ್(800), ಮತ್ತು ಶೇನ್ ವಾರ್ನ್ (708) ನಂತರ ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಕಿತ್ತ ಸಾಧನೆ ಅನಿಲ್ ಕುಂಬ್ಳೆ(619) ಹೆಸರಿನಲ್ಲಿದೆ. ಟೆಸ್ಟ್ ಇನಿಂಗ್ಸ್ ವೊಂದರಲ್ಲಿ ಹತ್ತು ವಿಕೆಟ್ ಕಿತ್ತ ಸಾಧನೆ ಮಾಡಿರುವ ಕನ್ನಡಿಗ ಅನಿಲ್ ಕುಂಬ್ಳೆಗೆ ಪ್ರತಿಷ್ಠಿತ ಗೌರವ ಸಿಕ್ಕಿದೆ. ಈ ಬಾರಿ ಕುಂಬ್ಳೆ ಜತೆ ಮರಣೋತ್ತರರವಾಗಿ ಆಸ್ಟ್ರೇಲಿಯಾದ ಬೆಟ್ಟಿ ವಿಲ್ಸನ್ ಅವರಿಗೂ ಗೌರವ ನೀಡಲಾಗುತ್ತುದೆ. ಇನ್ನು ಎರಡು ಹೆಸರುಗಳನ್ನು ಐಸಿಸಿ ಪ್ರಕಟ ಮಾಡಲಿದೆ.

Story first published: Wednesday, January 3, 2018, 10:12 [IST]
Other articles published on Jan 3, 2018
Read in English: ICC honour for Anil Kumble
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X