ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2015ರ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಜೊತೆಗಿನ ಜಗಳದ ಬಗ್ಗೆ ಆಘಾತಕಾರಿ ವಿಷಯ ಬಿಚ್ಚಿಟ್ಟ ಪಾಕ್ ಮಾಜಿ ವೇಗಿ

Pakistan Cricketer Sohail Khan Reveals Shocking Incident About Quarral With Virat Kohli During World Cup 2015

ಕ್ರಿಕೆಟ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯಗಳನ್ನು ಉಸಿರು ಬಿಗಿ ಹಿಡಿದುಕೊಂಡು ನೋಡುವಂತ ಸ್ಥಿತಿ ನಿರ್ಮಾಣವಾಗಿರುತ್ತದೆ. ಇಲ್ಲಿ ಆಟಕ್ಕಿಂತ ಭಾವನಾತ್ಮಕ ವಿಷಯಗಳು ಎರಡೂ ದೇಶಗಳ ಅಭಿಮಾನಿಗಳಿಗೆ ಮುಖ್ಯವಾಗಿರುತ್ತದೆ. ಅದೇ ರೀತಿ ಆಟಗಾರರಲ್ಲಿಯೂ ಇರುತ್ತದೆ.

ಕಳೆದ ಒಂದು ದಶಕದಿಂದ ಭಾರತ ಮತ್ತು ಪಾಕಿಸ್ತಾನ ತಂಡಗಳ ಯಾವುದೇ ನಡುವೆ ದ್ವಿಪಕ್ಷೀಯ ಸರಣಿಗಳು ನಡೆದಿಲ್ಲ. ಆದರೂ, ಐಸಿಸಿ ಟೂರ್ನಿಗಳಲ್ಲಿ ಎರಡು ತಂಡಗಳು ಮುಖಾಮುಖಿಯಾಗುತ್ತಿವೆ. ಈ ವೇಳೆ ಆಟಗಾರರ ನಡುವೆ ಸ್ಲೆಡ್ಜಿಂಗ್, ಜಗಳ ಸಾಮಾನ್ಯವಾಗಿರುತ್ತಿತ್ತು. ಆದರೆ, ಬದಲಾದ ಸಮಯದಲ್ಲಿ ಅದು ಇತ್ತೀಚಿಗೆ ಕಡಿಮೆಯಾಗಿದೆ.

IND vs AUS: ಬಾರ್ಡರ್-ಗವಾಸ್ಕರ್ ಮೊದಲ ಟೆಸ್ಟ್ ಪಂದ್ಯಕ್ಕಾಗಿ ನಾಗ್ಪುರಕ್ಕೆ ಬಂದಿಳಿದ ಟೀಂ ಇಂಡಿಯಾIND vs AUS: ಬಾರ್ಡರ್-ಗವಾಸ್ಕರ್ ಮೊದಲ ಟೆಸ್ಟ್ ಪಂದ್ಯಕ್ಕಾಗಿ ನಾಗ್ಪುರಕ್ಕೆ ಬಂದಿಳಿದ ಟೀಂ ಇಂಡಿಯಾ

ಇನ್ನು ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ನಡೆದ 2015ರ ಐಸಿಸಿ ವಿಶ್ವಕಪ್ ಪಂದ್ಯಾವಳಿಯ ಭಾರತ ಮತ್ತು ಪಾಕಿಸ್ತಾನದ ಗುಂಪಿನ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯೊಂದಿಗೆ ಜಗಳವಾಡಿದ ಬಗ್ಗೆ ಪಾಕಿಸ್ತಾನದ ಮಾಜಿ ವೇಗಿ ಸೊಹೈಲ್ ಖಾನ್ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಮಧ್ಯಪ್ರವೇಶಿಸಿದ ಎಂಎಸ್ ಧೋನಿ ಮತ್ತು ಮಿಸ್ಬಾ ಉಲ್ ಹಕ್

ಮಧ್ಯಪ್ರವೇಶಿಸಿದ ಎಂಎಸ್ ಧೋನಿ ಮತ್ತು ಮಿಸ್ಬಾ ಉಲ್ ಹಕ್

ಭಾರತದ ನಾಯಕ ಎಂಎಸ್ ಧೋನಿ ಮತ್ತು ಪಾಕಿಸ್ತಾನ ನಾಯಕ ಮಿಸ್ಬಾ ಉಲ್ ಹಕ್ ಮಧ್ಯಪ್ರವೇಶಿಸಿದ ನಂತರ ವಿರಾಟ್ ಕೊಹ್ಲಿ ಮತ್ತು ನನ್ನ ನಡುವಿನ ಜಗಳದ ಪರಿಸ್ಥಿತಿ ತಿಳಿಯಾಯಿತು ಎಂದು ಸೊಹೈಲ್ ಖಾನ್ ಹೇಳಿಕೊಂಡಿದ್ದಾರೆ.

"ವಿರಾಟ್ ಕೊಹ್ಲಿ ಬಂದು ನನಗೆ 'ನೀವು ಈಗಷ್ಟೇ ಬಂದಿದ್ದೀರಿ ಮತ್ತು ನೀವು ತುಂಬಾ ಮಾತನಾಡುತ್ತಿದ್ದೀರಿ' ಎಂದರು. ನಾನು ಆಗ ಟೆಸ್ಟ್ ಕ್ರಿಕೆಟಿಗನಾಗಿದ್ದೆ. ನಾನು 2006-07ರಲ್ಲಿ ಟೆಸ್ಟ್ ಪಂದ್ಯಗಳನ್ನು ಆಡಿದ್ದೆ. ನಂತರ, ಮೊಣಕಾಲು ಗಾಯದಿಂದಾಗಿ ತಂಡದಿಂದ ಹೊರಗುಳಿದಿದ್ದೆ".

ನನ್ನ ಮೇಲೆ ಕೋಪಗೊಂಡ ಮಿಸ್ಬಾ ಉಲ್ ಹಕ್

ನನ್ನ ಮೇಲೆ ಕೋಪಗೊಂಡ ಮಿಸ್ಬಾ ಉಲ್ ಹಕ್

"ಆಗ ನಾನು, 'ಮಗು, ನೀನು ಭಾರತಕ್ಕಾಗಿ ಅಂಡರ್-19 ಆಡುತ್ತಿದ್ದಾಗ, ನಾನು ಟೆಸ್ಟ್ ಆಟಗಾರರಾಗಿದೆ' ಎಂದು ತಿರುಗೇಟು ನೀಡಿದೆ. ಕೊಹ್ಲಿ ಗುರಾಯಿಸಿಕೊಂಡು ನೋಡಿದರು. ನಂತರ ಮಿಸ್ಬಾ ಉಲ್ ಹಕ್ ಮಧ್ಯಪ್ರವೇಶಿಸಿದರು ಮತ್ತು ನನ್ನ ಮೇಲೆ ಕೋಪಗೊಂಡರು. ನನಗೆ ಸುಮ್ಮನಿರಲು ತಿಳಿಸಿದರು," ಎಂದು ನಾದಿರ್ ಅಲಿ ಪಾಡ್‌ಕ್ಯಾಸ್ಟ್‌ನಲ್ಲಿ ಸೊಹೈಲ್ ಖಾನ್ ಬಹಿರಂಗಪಡಿಸಿದರು.

ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ 107 ರನ್‌ಗಳ ನೆರವಿನಿಂದ ಭಾರತ 7 ವಿಕೆಟ್‌ಗೆ 300 ರನ್ ಕಲೆಹಾಕಿತ್ತು. ಸೊಹೈಲ್ ಖಾನ್ ಆಗಿನ ಭಾರತೀಯ ಉಪನಾಯಕ ವಿರಾಟ್ ಕೊಹ್ಲಿ ಸೇರಿದಂತೆ 5 ವಿಕೆಟ್ ಪಡೆದಿದ್ದರು.

ವಿರಾಟ್ ಕೊಹ್ಲಿ ವಿಶ್ವದೆಲ್ಲೆಡೆ ಗೌರವವನ್ನು ಗಳಿಸಿದ್ದಾರೆ

ವಿರಾಟ್ ಕೊಹ್ಲಿ ವಿಶ್ವದೆಲ್ಲೆಡೆ ಗೌರವವನ್ನು ಗಳಿಸಿದ್ದಾರೆ

ಪ್ರತ್ಯುತ್ತರವಾಗಿ, ಪಾಕಿಸ್ತಾನ ತಂಡವು ಮೊಹಮ್ಮದ್ ಶಮಿ ಅವರ ಬೌನ್ಸ್ ಮತ್ತು ವೇಗದ ದಾಳಿಗೆ ಸಂಕಷ್ಟಕ್ಕೆ ಸಿಲುಕಿತು. ಶಮಿ ಪಾಕಿಸ್ತಾನದ ಯೂನಿಸ್ ಖಾನ್, ಮಿಸ್ಬಾ ಉಲ್ ಹಕ್ ಮತ್ತು ಶಾಹಿದ್ ಅಫ್ರಿದಿ ಸೇರಿದಂತೆ 4 ವಿಕೆಟ್‌ ಕಬಳಿಸಿದರು. 50 ಓವರ್‌ಗಳ ವಿಶ್ವಕಪ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ತಂಡ ಗೆದ್ದು ಗುಂಪಿನ ಪಂದ್ಯದಲ್ಲಿ ಅಜೇಯ ಓಟವನ್ನು ಮುಂದುವರೆಸಿತು.

"ಇದೀಗ ವಿರಾಟ್ ಕೊಹ್ಲಿ ಎಲ್ಲಿದ್ದಾರೆ ಎಂಬುದನ್ನು ಆಧರಿಸಿದರೆ ಹೇಳುವುದಾದರೆ, ಸುಮಾರು ಎಂಟು ವರ್ಷಗಳ ಹಿಂದಿನ ವಿಶ್ವಕಪ್‌ನಲ್ಲಿ ನಡೆದ ವಾಗ್ವಾದವು ಅವರ ಹಿಂದೆ ಹೋಗಿದೆ. ಭಾರತದ ಮಾಜಿ ನಾಯಕ ವಿಶ್ವದೆಲ್ಲೆಡೆ ಗೌರವವನ್ನು ಗಳಿಸಿದ್ದಾರೆ," ಎಂದು ಸೊಹೈಲ್ ಖಾನ್ ಹೇಳಿದರು.

ಇಂದು ವಿರಾಟ್ ಕೊಹ್ಲಿಯನ್ನು ಗೌರವಿಸುತ್ತೇನೆ

ಇಂದು ವಿರಾಟ್ ಕೊಹ್ಲಿಯನ್ನು ಗೌರವಿಸುತ್ತೇನೆ

"ನಾನು ಇಂದು ವಿರಾಟ್ ಕೊಹ್ಲಿಯನ್ನು ಗೌರವಿಸುತ್ತೇನೆ. ಏಕೆಂದರೆ, ಅವರು ಶ್ರೇಷ್ಠ ಬ್ಯಾಟರ್, ಅದ್ಭುತವಾಗಿದ್ದಾರೆ," ಎಂದು ಸೊಹೈಲ್ ಖಾನ್ ತಿಳಿಸಿದರು.

ಸೊಹೈಲ್ ಖಾನ್ ಪಾಕಿಸ್ತಾನದ ಪರ 9 ಟೆಸ್ಟ್, 13 ಏಕದಿನ ಮತ್ತು ಐದು ಟಿ20 ಪಂದ್ಯಗಳನ್ನು ಆಡಿದ್ದು, 51 ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು ಕಬಳಿಸಿದ್ದಾರೆ. 38 ವರ್ಷ ವಯಸ್ಸಿನ ಸೊಹೈಲ್ ಖಾನ್ ಅಧಿಕೃತವಾಗಿ ನಿವೃತ್ತಿ ಘೋಷಿಸದಿದ್ದರೂ, ಸೆಪ್ಟೆಂಬರ್ 2017ರಲ್ಲಿ ಪಾಕಿಸ್ತಾನ ಪರ ಕೊನೆಯ ಪಂದ್ಯವನ್ನು ಆಡಿದ್ದರು.

Story first published: Friday, February 3, 2023, 7:20 [IST]
Other articles published on Feb 3, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X