ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೊದಲ ಪಂದ್ಯದಲ್ಲೇ ಮಿಂಚಿದ ಮಯಾಂಕ್ ಬಗ್ಗೆ ಕೋಚ್ ಸಂಭ್ರಮದ ಮಾತು

By ಉನ್ನಿಕೃಷ್ಣನ್ ಜಿ.
Persistent pursuit of success sets Mayank Agarwal apart: Muralidhar

ಬೆಂಗಳೂರು, ಡಿಸೆಂಬರ್ 26: ಅಂತಾರಾಷ್ಟ್ರೀಯ ಕ್ರಿಕೆಟ್ ಟೆಸ್ಟ್ ರಂಗಕ್ಕೆ ಕಾಲಿಟ್ಟ ಚೊಚ್ಚಲ ಇನ್ನಿಂಗ್ಸ್‌ನಲ್ಲಿಯೇ ಆಸ್ಟ್ರೇಲಿಯಾ ವಿರುದ್ಧ 76 ರನ್ ಗಳಿಸುವ ಮೂಲಕ ಕನ್ನಡಿಗ ಮಯಾಂಕ್ ಅಗರವಾಲ್ ಅದ್ಭುತ ಆರಂಭ ಪಡೆದುಕೊಂಡಿದ್ದಾರೆ.

ಆರಂಭಿಕ ಆಟಗಾರ ಮಯಾಂಕ್ ಅವರನ್ನು ಇತರರಿಗಿಂತ ಹೆಚ್ಚು ಹತ್ತಿರದಿಂದ ಬಲ್ಲ ಆರ್. ಮುರಳೀಧರ್ ಮುಖದಲ್ಲಿ ಸಂತಸ ಬುಗ್ಗೆ ಚಿಮ್ಮುತ್ತಿದೆ.

ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ದಾಖಲೆ ಬರೆದ ಮಯಾಂಕ್ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ದಾಖಲೆ ಬರೆದ ಮಯಾಂಕ್

ಐದು ವರ್ಷಕ್ಕೂ ಹೆಚ್ಚು ಸಮಯದಿಂದ ಮಯಾಂಕ್ ಅಗರವಾಲ್ ಅವರ ವೈಯಕ್ತಿಕ ತರಬೇತುದಾರರಾಗಿರುವ ಮುರಳೀಧರ್ ಅವರು ಮಯಾಂಕ್ ವೃತ್ತಿ ಬದುಕಿನ ಏರಿಳಿತಗಳೆರಡನ್ನೂ ಒಟ್ಟಿಗೆ ಕಂಡಿದ್ದಾರೆ.

ಮುರಳೀಧರ್, ಪ್ರಸ್ತುತ ನಾಗಾಲ್ಯಾಂಡ್‌ನ ಅಂಡರ್-23 ತಂಡದ ಕೋಚ್ ಆಗಿದ್ದಾರೆ.

ಹೊಡೆತದಲ್ಲಿ ನಿಖರತೆ ಇದೆ

'ಮಯಾಂಕ್ ಬಾರಿಸುವ ಹೊಡೆತಗಳಲ್ಲಿ ತುಂಬಾ ನಿಖರತೆ ಇರುತ್ತದೆ. ಈ ನಿಟ್ಟಿನಲ್ಲಿ ಇಷ್ಟು ವರ್ಷದಿಂದ ನಾವು ಕೆಲಸ ಮಾಡಿದ್ದೇವೆ. ಹೊಡೆತಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಆತನಲ್ಲಿ ದ್ವಂದ್ವ ಕಾಡಿದ್ದನ್ನು ನೋಡಿಯೇ ಇಲ್ಲ. ಇದು ಆತನ ಮಾನಸಿಕ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ಸಂದರ್ಭಕ್ಕೆ ಅನುಗುಣವಾಗಿ ಮಯಾಂಕ್ ಪ್ರತಿಕ್ರಿಯಿಸಿದ ಬಗೆ ನನಗೆ ತುಂಬಾ ಖುಷಿ ನೀಡಿದೆ' ಎಂದು ಮುರಳೀಧರ್ ಹೇಳಿದರು.

ಆಸ್ಟ್ರೇಲಿಯಾದ ನೆಲದಲ್ಲಿ ಪಾದಾರ್ಪಣೆ ಮಾಡುವುದು, ಅದರಲ್ಲಿಯೂ ಆರಂಭಿಕ ಬ್ಯಾಟ್ಸ್‌ಮನ್‌ ಆಗಿದ್ದಾಗ ಸವಾಲಿನ ಕೆಲಸ. ಹೆಚ್ಚಿನ ಸಂದರ್ಭದಲ್ಲಿ ಪಿಚ್ ವೇಗದ ಬೌಲರ್‌ಗಳಿಗೆ ನೆರವು ನೀಡುತ್ತವೆ. ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್ ವುಡ್ ಮತ್ತು ಪ್ಯಾಟ್ ಕಮಿನ್ಸ್‌ ಅವರಂತಹ ಪ್ರಬಲ ಬೌಲಿಂಗ್ ಪಡೆ ಆಸ್ಟ್ರೇಲಿಯಾದಲ್ಲಿದೆ.

ಉದ್ವೇಗಕ್ಕೆ ಒಳಗಾಗಿದ್ದೆವು

ಉದ್ವೇಗಕ್ಕೆ ಒಳಗಾಗಿದ್ದೆವು

ಆದರೆ, ಅಗರವಾಲ್ ಬೌಲರ್‌ಗಳನ್ನು ಸಮರ್ಥವಾಗಿ ಎದುರುಸಿದರು. ಆ ಸಂದರ್ಭವನ್ನು ತಮ್ಮದಾಗಿಸಿಕೊಂಡರು. ತಮ್ಮ ಚೊಚ್ಚಲ ಇನ್ನಿಂಗ್ಸ್‌ಅನ್ನು ಸ್ಮರಣೀಯವನ್ನಾಗಿಸಿಕೊಂಡರು.

ತಮ್ಮ ಗರಡಿಯಲ್ಲಿ ಪಳಗಿರುವ ಮಯಾಂಕ್ ಅವರು ಸಂದರ್ಭಕ್ಕೆ ತಕ್ಕಂತೆ ಆಟವನ್ನು ಉತ್ತಮಗೊಳಿಸಿಕೊಳ್ಳುವ ಸಾಮರ್ಥ್ಯದ ಮೇಲೆ ಮುರಳೀಧರ್ ಅವರಿಗೆ ಯಾವ ಅನುಮಾನವೂ ಇಲ್ಲ.

'ಬಿಸಿಸಿಐ ತಂಡವನ್ನು ಪ್ರಕಟಿಸಿದ ಸಂದರ್ಭದಲ್ಲಿ ನಾವು ಮಾತನಾಡಿದ್ದೆವು. ಸಹಜವಾಗಿಯೇ ಸಂತೋಷಗೊಂಡಿದ್ದೆವು, ಜೊತೆಗೆ ಅದೇ ವೇಳೆ ನಾವು ಸ್ವಲ್ಪ ಉದ್ವೇಗಕ್ಕೂ ಒಳಗಾಗಿದ್ದೆವು.

ರಣಜಿ ಟ್ರೋಫಿ: ನಿಶ್ಚಲ್ ಸಾಹಸ, ರೈಲ್ವೇಸ್ ವಿರುದ್ಧ ಕರ್ನಾಟಕಕ್ಕೆ ಭರ್ಜರಿ ಜಯ

ಆಸ್ಟ್ರೇಲಿಯಾ ಕಠಿಣ ಸವಾಲು

ಆಸ್ಟ್ರೇಲಿಯಾದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡುವುದು ಕ್ರಿಕೆಟ್‌ನ ಅತಿ ಕಠಿಣ ಸವಾಲು. ಹೀಗಾಗಿ ಸ್ವಲ್ಪ ಒತ್ತಡ ಇತ್ತು. ಆದರೆ, ಆತನಲ್ಲಿನ ಉತ್ತಮ ಸಂಗತಿಯೆಂದರೆ ಇಂತಹ ಅನೇಕ ಸಂದರ್ಭಗಳನ್ನು ಆತ ಎದುರಿಸಿದ್ದಾನೆ. ವೃತ್ತಿ ಬದುಕಿನಲ್ಲಿ ಸಾಕಷ್ಟು ಏರಿಳಿತಗಳನ್ನು ಈಗಾಗಲೇ ಅನುಭವಿಸಿದ್ದಾನೆ. ಆತನ ಸರದಿ ಬಂದಾಗ (ಭಾರತದ ಪರ ಆಡುವುದು) ಆ ಸವಾಲನ್ನು ಎದುರಿಸಲು ಸಿದ್ಧನಾಗಿದ್ದ' ಎಂದು ಮುರಳೀಧರ್ ಸಂಭ್ರಮ ಹಂಚಿಕೊಂಡರು.

ಬೇರೆ ಆಟಗಾರರಿಗಿಂತ ವಿಭಿನ್ನವಾಗಿ ಗುಣಮಟ್ಟವನ್ನು ಬೆಳೆಸಿಕೊಳ್ಳಲು ಮಯಾಂಕ್ ಸತತ ಪರಿಶ್ರಮಪಟ್ಟಿದ್ದಾರೆ ಎಂದು ಮುರಳೀಧರ್ ನೆನಪಿಸಿಕೊಂಡರು.

ಸತತ ಪರಿಶ್ರಮದ ಫಲ

ಸತತ ಪರಿಶ್ರಮದ ಫಲ

'ತನ್ನ ಯಶಸ್ಸನ್ನು ಪಡೆದುಕೊಳ್ಳಲು ನಿರಂತರ ಪ್ರಯತ್ನ ಮತ್ತು ಕಠಿಣ ಪರಿಶ್ರಮದ ಛಲ, ಇವೆರಡೂ ಆತನ ಅತಿದೊಡ್ಡ ಗುಣಗಳು. ಬೆಂಗಳೂರಿನಿಂದ 30 ಕೀ.ಮೀ. ದೂರದಲ್ಲಿ ನೆಲೆಸಿರುವವರು ನೆಟ್‌ನಲ್ಲಿ ಅಭ್ಯಾಸ ಮಾಡಲು, ತರಬೇತಿ ಪಡೆಯಲು ಕ್ರೀಡಾಂಗಣಕ್ಕೆ ಬರುವುದು ಸುಲಭವಲ್ಲ.

ಬಳಿಕ ಆತ ನನ್ನ ಅಕಾಡೆಮಿಗೆ ಭೇಟಿ ನೀಡಿದ್ದ. ಅದು ಕೆಎಸ್ ಸಿಎ ಇಂದ ಇನ್ನೂ 20 ಕಿ.ಮೀ. ದೂರದಲ್ಲಿದೆ.

ತನ್ನ ಕೌಶಲವನ್ನು ವೃದ್ಧಿಸಿಕೊಳ್ಳುವ ಅಭ್ಯಾಸವನ್ನು ಅಲ್ಲಿ ಮುಗಿಸಿ ಸಂಜೆ 6.30ರ ಬಳಿಕ ಮನೆಗೆ ಮರಳುತ್ತಿದ್ದ. ಆತನ ದಿನ ಶುರುವಾಗುತ್ತಿದ್ದದ್ದು ಬೆಳಿಗ್ಗೆ 6 ಗಂಟೆಗೆ. ಇದನ್ನು ಆತ ಸತತ ಐದು ವರ್ಷ ನಿರಂತರವಾಗಿ ಪಾಲಿಸಿದ್ದ. ಆತನ ದೃಢ ನಿರ್ಧಾರದ ಬಗ್ಗೆ ಅದೀಗ ಮಾತನಾಡುತ್ತಿವೆ ನೋಡಿ.

ಅಕಾಡೆಮಿಯಲ್ಲಿ ದಿನಕ್ಕೆ ಸುಮಾರು ಮೂರು ಗಂಟೆ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದ. ವಾರದಲ್ಲಿ ಆರು ದಿನ ಹೀಗೆಯೇ ತರಬೇತಿ ನಡೆಯುತ್ತಲೇ ಇತ್ತು' ಎಂದು ಮುರಳೀಧರ್ ವಿವರಿಸಿದ್ದಾರೆ.

ಈ ಎಲ್ಲ ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪ ಭಾರತೀಯ ತಂಡದಲ್ಲಿ ಮಯಾಂಕ್‌ಗೆ ಸ್ಥಾನ ದೊರಕಲು ಕಾರಣವಾಗಿವೆ.

ಕ್ರಿಕೆಟ್ ಅಗತ್ಯವೇ ಇರಲಿಲ್ಲ, ಆದರೂ...

ಆದರೆ, ಒಂದು ಕಾಲದಲ್ಲಿ ಈ ಆಟಗಾರನ ಸಾಮರ್ಥ್ಯದ ಬಗ್ಗೆ ಮುರಳೀಧರ್ ಸ್ವತಃ ಅನುಮಾನ ಹೊಂದಿದ್ದರು.

"ಮೊದಲ ಮೂರು ವರ್ಷ ಮಯಾಂಕ್ ದೊಡ್ಡ ಸ್ಕೋರ್ ಗಳಿಸುತ್ತಿರಲಿಲ್ಲ. ಎಲ್ಲ ವೈಫಲ್ಯಗಳು ಮತ್ತು ತಿರಸ್ಕಾರದ ಬಳಿಕವೂ ಆತ ಮರಳಿ ಬಂದು 'ಹೋಗಲಿ ಬಿಡಿ, ಈಗ ಹೊಸದಾಗಿ ಪ್ರಾರಂಭಿಸೋಣ' ಎಂದಿದ್ದಾನೆ.

ಆತ ಸಿರಿವಂತ ಕುಟುಂಬದಿಂದ ಬಂದವನು. ಹೀಗಾಗಿ ವೈಫಲ್ಯ ಅನುಭವಿಸಿದ ದಿನಗಳಲ್ಲಿ ಕ್ರಿಕೆಟ್ ಅನ್ನು ತ್ಯಜಿಸುವುದು ಆತನಿಗೆ ಕಷ್ಟವಾಗಿರಲಿಲ್ಲ. ಬೇರೆ ಎಲ್ಲಾದರೂ ವೃತ್ತಿ ಆರಂಭಿಸಬಹುದಾಗಿತ್ತು. ಆದರೆ ಕ್ರಿಕೆಟ್‌ನಲ್ಲಿನ ಒಲವು ಆತನನ್ನು ಮುಂದಕ್ಕೆ ಕರೆದೊಯ್ದಿತು. ಈಗ ನೋಡಿ ಆತ ಎಲ್ಲಿದ್ದಾನೆಂದು..." ಹೀಗೆ ಹೇಳುವಾಗ ಮುರಳೀಧರ್ ಸಂಭ್ರಮ ದುಪ್ಪಟ್ಟಾಗಿತ್ತು.

ಹೀಗೆ ಸಾಧಿಸುವುದು ಹೇಗೆ ಸಾಧ್ಯವಾಯಿತು?

ಇದ್ದದ್ದು ಆತ್ಮವಿಶ್ವಾಸದ ಕೊರತೆ

ಇದ್ದದ್ದು ಆತ್ಮವಿಶ್ವಾಸದ ಕೊರತೆ

'ಮಯಾಂಕ್‌ನಲ್ಲಿ ಕೌಶಲ ಯಾವಾಗಲೂ ಇತ್ತು. ಚೆಂಡನ್ನು ನೇರವಾಗಿ ಬಾರಿಸುವ ಸಾಮರ್ಥ್ಯವಿತ್ತು. ಆದರೆ, ಆರಂಭದ ಆಗಿನ ದಿನಗಳಲ್ಲಿ ಬಹುಶಃ ಆತನಿಗೆ ತನ್ನ ಮೇಲೆ ಅಥವಾ ತನ್ನ ಸಾಮರ್ಥ್ಯದ ಮೇಲೆ ನಂಬಿಕೆಯಿರಲಿಲ್ಲ. ಪ್ರತಿಭಾವಂತ ಆಟಗಾರನೊಬ್ಬ ತನ್ನನ್ನು ತಾನು ನಂಬದೆ ಇರುವುದು ನೋವಿನ ಸಂಗತಿ.

ಈಗಿನ ಮಟ್ಟದಲ್ಲಿ ನೀವು 140, 150 ಕಿ,ಮೀ. ವೇಗದ ಎಸೆತಗಳನ್ನು ಎದುರಿಸಬಹುದು. ಆದರೆ, ನಿಮ್ಮಲ್ಲಿ ಸ್ಥಿರತೆ ಇಲ್ಲದೆ ಇರುವ ಕೊರತೆ ತಾಂತ್ರಿಕತೆಗಿಂತಲೂ ಮನಸ್ಸಿಗೆ ಸಂಬಂಧಿಸಿದ್ದು. ಆತನಲ್ಲಿ ಉತ್ತಮ ಮತ್ತು ಸಕಾರಾತ್ಮಕ ಚಿಂತನೆಗಳನ್ನು ಬಿತ್ತುವುದು ನನ್ನ ಕೆಲಸವಾಗಿತ್ತು. ಅದು ಆತನಿಗೆ ನೆರವಾಗಿದೆ' ಎಂದು ಮುರಳೀಧರ್ ಹೇಳಿದ್ದಾರೆ.

Story first published: Wednesday, December 26, 2018, 15:18 [IST]
Other articles published on Dec 26, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X